ಸಾಕಾನೆ ಕ್ಯಾಂಪ್ ಮೇಲೆ ಬೀಟಮ್ಮ ಗ್ಯಾಂಗ್ನಿಂದ ರಾತ್ರೋರಾತ್ರಿ ದಾಳಿ! – ಅಭಿಮನ್ಯು ನೇತೃತ್ವದ ತಂಡ ಶಿಫ್ಟ್!
ಚಿಕ್ಕಮಗಳೂರಿನಲ್ಲಿ ಕಾಡಾನೆ ಉಪಟಳ ಹೆಚ್ಚಾಗಿದೆ. ಕಳೆದ ಕೆಲವು ದಿನಗಳಿಂದ ಭೀಮ ಆನೆ ಸೇರಿದಂತೆ 30 ( ಭೀಟಮ್ಮ) ಆನೆಗಳ ಕಾಟಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು, ಅರಣ್ಯ ಅಧಿಕಾರಿಗಳು ಬೇಸತ್ತು ಹೋಗಿದ್ದಾರೆ. ಇದೀಗ ಕಾಡಾನೆ ಸೆರೆ ಕಾರ್ಯಾಚರಣೆ ಬಂದಿದ್ದ ಆನೆಗಳ ಕ್ಯಾಂಪ್ ಮೇಲೆ ಬೀಟಮ್ಮ ಗ್ಯಾಂಗ್ ರಾತ್ರೋ ರಾತ್ರಿ ಅಟ್ಯಾಕ್ ಮಾಡಲು ಯತ್ನಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಬಂಡೀಪುರದಲ್ಲಿ ರೈಲ್ವೇ ಯೋಜನೆಗೆ ವಿರೋಧ – ಸೋಶಿಯಲ್ ಮೀಡಿಯಾದಲ್ಲಿ ಶುರುವಾಯ್ತು #SaveBandipur ಅಭಿಯಾನ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಪೌಂಡ್ ಮುರಿದು ವಸತಿ ಶಾಲಾ ಆವರಣಕ್ಕೆ ಆನೆಗಳ ಹಿಂಡು ಎಂಟ್ರಿಕೊಟ್ಟಿದ್ದವು. ಶಾಲಾ ಆವರಣದಲ್ಲೇ 27 ಕ್ಕೂ ಅಧಿಕ ಆನೆಗಳು ಬೀಡುಬಿಟ್ಟಿದ್ದವು. ಇದು ಈಗ ಸುತ್ತಮುತ್ತಲಿನ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಬೀಟಮ್ಮ ಗ್ಯಾಂಗ್ ಉಪಟಳಕ್ಕೆ ಬ್ರೇಕ್ ಹಾಕಲು ಸಾಕಾನೆ ಅಭಿಮನ್ಯು ನೇತೃತ್ವದ ತಂಡವನ್ನು ಕರೆಸಿಕೊಳ್ಳಲಾಗಿತ್ತು. ಅಭಿಮನ್ಯು ಮತ್ತು ಆತನ ತಂಡ (ಕುಮ್ಕಿ) ಚಿಕ್ಕಮಗಳೂರು ತಾಲೂಕಿನ ಮತ್ತಾವರ ಗ್ರಾಮದಲ್ಲಿರುವ ಅರಣ್ಯ ಇಲಾಖೆಯ ವಸತಿ ಗೃಹದ ಬಳಿ ಕ್ಯಾಂಪ್ ಹಾಕಲಾಗಿದೆ. ಆದ್ರೆ ಈ ಕ್ಯಾಂಪ್ಗೆ ಬೀಟಮ್ಮ ಗ್ಯಾಂಗ್ ರಾತ್ರೋರಾತ್ರಿ ದಾಳಿ ಮಾಡಲು ಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ರಾತ್ರೋರಾತ್ರಿ ಕುಮ್ಕಿ ಆನೆಗಳ ಕ್ಯಾಂಪ್ ಶಿಫ್ಟ್ ಮಾಡಿದ್ದಾರೆ. ಬೀಟಮ್ಮ ಗ್ಯಾಂಗ್ ಆಲದಗುಡ್ಡೆ ಗ್ರಾಮದಿಂದ ಮತ್ತಾವರ ಗ್ರಮಾಕ್ಕೆ ಬಂದು ಬಂದು ನೆಲಸಿದೆ.
ಮತ್ತಾವರ ಗ್ರಾಮ ಸಮೀಪದ ಅರಣ್ಯದಲ್ಲಿ ಬೀಟಮ್ಮ ಗ್ಯಾಂಗ್ ಬೀಡುಬಿಟ್ಟಿದೆ. ಕುಮ್ಕಿ ಕ್ಯಾಂಪ್ನಲ್ಲಿ ಅಭಿಮನ್ಯು, ಮಹೇಂದ್ರ, ಭೀಮ ಧನಂಜಯ, ಸುಗ್ರೀವ, ಹರ್ಷ ಅಶ್ವತ್ಥಾಮ ಪ್ರಶಾಂತ ಎಂಬ ಹೆಸರಿನ ಆನೆಗಳಿವೆ. ಅಭಿಮನ್ಯು ಟೀಮ್ ಕಾರ್ಯಚರಣೆಗಾಗಿ ನಾಗರಹೊಳೆಯಿಂದ ಮತ್ತಾವರ ಗ್ರಾಮಕ್ಕೆ ಬಂದಿವೆ.