ಜುಲೈ 7 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆ – ಬಜೆಟ್ ಮೇಲೆ ಹೆಚ್ಚಿದ ಜನರ ನಿರೀಕ್ಷೆ

ಜುಲೈ 7 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆ – ಬಜೆಟ್ ಮೇಲೆ ಹೆಚ್ಚಿದ ಜನರ ನಿರೀಕ್ಷೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 7ರಂದು ಹೊಸ ಸರ್ಕಾರದ ಚೊಚ್ಚಲ ಹಾಗೂ ಹಣಕಾಸು ಸಚಿವರಾಗಿ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಮೇಲೆ ಜನರ ನಿರೀಕ್ಷೆ ಗರಿಗೆದರಿದೆ. ತಮ್ಮ 14ನೇ ಬಜೆಟ್ ಮಂಡನೆ ಮಾಡಲಿರುವ ಸಿಎಂ ಸಿದ್ದರಾಮಯ್ಯ ಈಗಾಗಲೇ ಬಜೆಟ್ ಪೂರ್ವಭಾವಿ ಸಭೆ ನಡೆಸಿಯಾಗಿದೆ. ಗ್ಯಾರಂಟಿ ಯೋಜನೆಗಳೊಂದಿಗೆ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಈ ಬಾರಿ ಯಾವುದಕ್ಕೆ ತೆರಿಗೆ ವಿಧಿಸಲಿದೆ, ಯಾವುದಕ್ಕೆ ಎಷ್ಟು ವಿನಾಯ್ತಿ ನೀಡಲಿದೆ, ಯಾವ ಹೊಸ ಯೋಜನೆ ಜಾರಿಗೆ ತರಲಿದೆ, ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳಿಗೆ, ಕೆಲಸಗಳಿಗೆ ಎಷ್ಟು ಹಣ ವಿನಿಯೋಗ ಮಾಡಲಿದೆ ಎಂಬ ಕುತೂಹಲವೂ ಜನರಲ್ಲಿದೆ.

ಇದನ್ನೂ ಓದಿ:ವಿಧಾನಸಭೆ ಅಧಿವೇಶನದಲ್ಲಿ ‘ಪೆನ್‌ಡ್ರೈವ್’ ಕದನ – ಪ್ರತಿಪಕ್ಷಗಳ ಗಲಾಟೆಗೆ ಕಲಾಪ ಮುಂದೂಡಿಕೆ

ಕಾಂಗ್ರೆಸ್ ಗ್ಯಾರಂಟಿ ಯೋಜನೆಯಿಂದ ರಾಜ್ಯ ದಿವಾಳಿಯಾಗುತ್ತದೆ. ಒಂದು ಕಡೆ ನೀಡಿದಂತೆ ಮಾಡಿ ಸರ್ಕಾರ ಮತ್ತೊಂದು ಕಡೆ ಜನರಿಂದ ಹಣ ಕಿತ್ತುಕೊಳ್ಳುತ್ತದೆ. ಜನ ಸರ್ಕಾರದ ಬಿಟ್ಟಿ ಭಾಗ್ಯಗಳಿಗೆ ಮೋಸ ಹೋಗಿದ್ದಾರೆ ಎಂಬಿತ್ಯಾದಿ ಟೀಕೆಗಳ ಮಧ್ಯೆ ಈ ಬಾರಿ ಸಿಎಂ ಸಿದ್ದರಾಮಯ್ಯ ಯಾವ ರೀತಿ ಬಜೆಟ್ ಮಂಡಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ಇಷ್ಟೇ ಅಲ್ಲದೇ, ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿಗೆ ಏನು ಉಡುಗೊರೆ ನೀಡುತ್ತಾರೆ ಎಂದು ತವರಿನ ಜನತೆ ಕೂಡಾ ಕಾಯುತ್ತಿದ್ದಾರೆ. ಹಿಂದುಳಿದ ಭಾಗ ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿರುವ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಜನರು ಹತ್ತಾರು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಜೊತೆಗೆ ತೊಗರಿ ನಾಡಿಗೆ ಸಿದ್ದರಾಮಯ್ಯ ನಾಳಿನ ಬಜೆಟ್‌ನಲ್ಲಿ ಏನೆಲ್ಲಾ ನೀಡುತ್ತಾರೆ ಎನ್ನುವ ಕುತೂಹಲ ಕೂಡ ಜನರಲ್ಲಿ ಹೆಚ್ಚಿದೆ.

suddiyaana