ನಾಯಿ- ಕೋಳಿ ನಡುವೆ ಬಿಗ್ ಫೈಟ್ – ಹುಂಜನ ಸಹವಾಸವೇ ಬೇಡ ಎಂದು ಓಡಿದ  ಶ್ವಾನ

ನಾಯಿ- ಕೋಳಿ ನಡುವೆ ಬಿಗ್ ಫೈಟ್ – ಹುಂಜನ ಸಹವಾಸವೇ ಬೇಡ ಎಂದು ಓಡಿದ  ಶ್ವಾನ

ಸಾಮಾನ್ಯವಾಗಿ ಕೋಳಿಗಳ ಕಾದಾಟವನ್ನು ನೋಡಿರುತ್ತೇವೆ. ಕೆಲವೊಂದು ಬಾರಿ ನಾಯಿ, ಬೆಕ್ಕುಗಳು ಕೋಳಿಗಳನ್ನು ಹಿಡಿದು ತಿನ್ನಲು ಆಗಾಗ ಹೊಂಚು ಹಾಕುತ್ತಿರುತ್ತವೆ. ಈ ವೇಳೆ ಕೋಳಿಗಳು ತಮ್ಮ ಜೀವ ಉಳಿಸಿಕೊಳ್ಳಲು ಎಲ್ಲೆಂದರಲ್ಲಿ ಓಡಿ ಹೋಗುತ್ತವೆ. ಈ ವೇಳೆ ಕೆಲ ಕೋಳಿಗಳು ನಾಯಿ, ಬೆಕ್ಕು ಬಾಯಿಗೆ ತುತ್ತಾಗಿ ಬಿಡುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಕೋಳಿಯೊಂದು ನಾಯಿ ಜೊತೆ ಕಾದಾಟಕ್ಕೆ ಇಳಿದಿದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಇದನ್ನೂ ಓದಿ: ಮನುಷ್ಯನುದ್ದಕ್ಕೂ ಎದ್ದು ನಿಂತ ಕಾಳಿಂಗ ಸರ್ಪ –  ಎದೆ ಝಲ್ ಅನ್ನಿಸುವಂತಿದೆ ಈ ದೃಶ್ಯ

ಮನೆಯಲ್ಲಿ ಕೋಳಿ ತಿನ್ನುವ ನಾಯಿಗಳಿದ್ದರೆ ಮನೆಯವರು ಸಾಮಾನ್ಯವಾಗಿ ಕಟ್ಟಿಹಾಕುತ್ತಾರೆ. ಕೋಳಿಗಳೂ ಕೂಡ ಆ ನಾಯಿಯಿಂದ ಸಾಧ್ಯವಾದಷ್ಟು ದೂರವಿರುತ್ತದೆ. ಕೆಲವೊಂದು ಬಾರಿ ನಾಯಿಗಳು ದಿಢೀರ್ ಅಂತಾ ಪ್ರತ್ಯಕ್ಷವಾಗಿ ಕೋಳಿಗಳಿಗೆ ಶಾಕ್ ನೀಡುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ  ನಾಯಿಗೆ ಹುಂಜ ಸರಿಯಾಗಿ ಪಾಠ ಕಲಿಸಿದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

animal_lover_wagad ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹುಂಜ ಮತ್ತು ಶ್ವಾನದ ಕಾದಾಟದ ದೃಶ್ಯ ಈ ಕ್ಲಿಪ್‌ನಲ್ಲಿದೆ. ನಾಯಿ ಮೇಲೆ ಕೋಪಗೊಂಡಿದ್ದ ಹುಂಜವೊಂದು ರೋಷದಿಂದ ತನ್ನ ಕುತ್ತಿಗೆಯ ಗರಿಗಳನ್ನು ಅರಳಿಸಿ ಶ್ವಾನದ ಮೇಲೆ ಜಿಗಿಜಿಗಿದು ದಾಳಿ ಮಾಡುತ್ತಿದೆ. ಶ್ವಾನ ಕೂಡಾ ಗಟ್ಟಿಯಾಗಿ ಬೊಗಳುತ್ತಾ ಹುಂಜನನ್ನು ಬೆದರಿಸುವ ಯತ್ನ ಮಾಡಿದೆ. ಆದರೆ ಹುಂಜ ಮಾತ್ರ ಕೋಪದಿಂದ ಕುದಿಯುತ್ತಲೇ ಇತ್ತು. ಶ್ವಾನದ ಯಾವುದೇ ಪ್ರತಿದಾಳಿಗೆ ಇದು ಹೆದರದೇ ಮತ್ತೆ ಮತ್ತೆ ದಾಳಿ ಮಾಡಿದೆ. ಸಾಕಷ್ಟು ಹೊತ್ತು ಈ ಕಾಳಗ ಮುಂದುವರಿದಿದೆ. ಶ್ವಾನ ಎಲ್ಲಿ ಹೋದರೂ ಹುಂಜ ಅದನ್ನು ಹಿಂಬಾಲಿಸುತ್ತಲೇ ಇತ್ತು. ಕಡೆಗೆ ಹುಂಜನ ಸಹವಾಸವೇ ಬೇಡ ಎಂಬಂತೆ ಶ್ವಾನ ಅಲ್ಲಿಂದ ಓಡಿಹೋಗಿದೆ.

ಸಹಜವಾಗಿಯೇ ಈ ವಿಡಿಯೋ ಈಗ ನೆಟ್ಟಿಗರ ಗಮನ ಸೆಳೆದಿದೆ. ಎಲ್ಲರೂ ಬಲು ಕುತೂಹಲದಿಂದಲೇ ಈ ದೃಶ್ಯವನ್ನು ನೋಡುತ್ತಿದ್ದಾರೆ. ಹೀಗಾಗಿ ಈ ವಿಡಿಯೋ ಈಗ ಸಾಕಷ್ಟು ವೀಕ್ಷಣೆಯನ್ನೂ ಗಳಿಸಿದೆ. ಜೊತೆಗೆ ಈ ದೃಶ್ಯವನ್ನು ಕಂಡ ಸಾಕಷ್ಟು ಮಂದಿ ಅಚ್ಚರಿ, ತಮಾಷೆಯ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ಇನ್ನೊಂದಷ್ಟು ಮಂದಿ ವಿಡಿಯೋ ಮಾಡುವ ಬದಲು ಇವುಗಳನ್ನು ಬೇರ್ಪಡಿಸಬಹುದಿತ್ತಲ್ವಾ ಅಂತಾ ಅಸಮಾಧಾನಗೊಂಡಿದ್ದಾರೆ.

suddiyaana