ದುಬಾರಿಯಾಯ್ತು ಕೋಳಿ ಮೊಟ್ಟೆ – ಒಂದು ಮೊಟ್ಟೆಗೆ ರೇಟ್ ಎಷ್ಟು?

ದುಬಾರಿಯಾಯ್ತು ಕೋಳಿ ಮೊಟ್ಟೆ – ಒಂದು ಮೊಟ್ಟೆಗೆ ರೇಟ್ ಎಷ್ಟು?

ಬೆಂಗಳೂರು: ಕೋಳಿ ಮೊಟ್ಟೆ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮೊಟ್ಟೆ ಪ್ರಿಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ರಾಜ್ಯದ ರಿಟೇಲ್ ಶಾಪ್‍ನಲ್ಲಿ ಒಂದು ಮೊಟ್ಟೆಗೆ 6 ರೂಪಾಯಿ ಇತ್ತು. ಆದರೆ ಇದೀಗ 1 ರೂಪಾಯಿ ಹೆಚ್ಚಳ ಆಗಿದೆ.

ಇದನ್ನೂ ಓದಿ: ‘ಅನಿತಾಗೆ ಟಿಕೆಟ್ ಕೊಟ್ರೆ ನಂಗೂ ಕೊಡಿ’ – ಭವಾನಿ ರೇವಣ್ಣ ಪಟ್ಟು, ‘ದೊಡ್ಡಗೌಡ್ರ’ ಮನೆಯಲ್ಲಿ ಕಗ್ಗಂಟು!

ಚಳಿಗಾಲದಲ್ಲಿ ಮೊಟ್ಟೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಅಲ್ಲದೇ ಕೋಳಿಗಳಿಗೆ ನೀಡುತ್ತಿರುವ ಆಹಾರದ ಬೆಲೆಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದರಿಂದಾಗಿ ಮೊಟ್ಟೆಯ ಬೆಲೆಯನ್ನು 6 ರೂಪಾಯಿಯಿಂದ 7 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.

2021ರ ಜನವರಿಯಲ್ಲಿ 100 ಮೊಟ್ಟೆಗಳ ಒಂದು ಬ್ಯಾಚ್‍ಗೆ 437.06 ರೂಪಾಯಿ ನಿಗದಿಯಾಗಿತ್ತು. ಕಳೆದ ವರ್ಷ ಜನವರಿಯಲ್ಲಿ 100 ಮೊಟ್ಟೆಗಳ ಒಂದು ಬ್ಯಾಚ್‍ಗೆ 437.58 ರೂಪಾಯಿ ಇತ್ತು. ಆದರೆ ಈ ಬಾರಿ 100 ಮೊಟ್ಟೆಗಳ 1 ಬ್ಯಾಚ್‍ಗೆ ಹೋಲ್ ಸೇಲ್ ರೂಪದಲ್ಲಿ ಬರೋಬ್ಬರಿ 575 ರೂಪಾಯಿ ಆಗಿದೆ. ಬಿಡಿಯಾಗಿ ಒಂದು ಮೊಟ್ಟೆಗೆ 6 ರೂಪಾಯಿ ಆಗುತ್ತೆ. ಆದರೆ ರಿಟೇಲ್ ಶಾಪ್‍ನಲ್ಲಿ ಒಂದು ಮೊಟ್ಟೆಗೆ 7 ರೂಪಾಯಿಯಾಗಿದೆ ಅಂತ ವ್ಯಾಪಾರಿಗಳು ಹೇಳುತ್ತಿದ್ದಾರೆ. ಬೆಲೆ ಏರಿಕೆ ಆಗಿರುವುದರಿಂದ ಮೊಟ್ಟೆಯಿಂದ ಮಾಡುವ ಖಾದ್ಯಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಮೊಟ್ಟೆ ರೇಟ್ ಏರಿದ ಪರಿಣಾಮ ಗ್ರಾಹಕರಿಗೆ ನೇರವಾಗಿ ತಟ್ಟಲಿದೆ.

suddiyaana