ಚಿಕನ್ ಇಷ್ಟ ಅಂತಾ ಹೆಚ್ಚು ತಿಂತೀರಾ? – ಪ್ರತಿದಿನ ಚಿಕನ್ ತಿಂದ್ರೆ ಆರೋಗ್ಯಕ್ಕೆ ಕಂಟಕ!

ಆರೋಗ್ಯಕರ ಮನುಷ್ಯ ಉತ್ತಮ ಆಹಾರ ಪದ್ಧತಿಯನ್ನು ಮತ್ತು ಜೀವನಶೈಲಿಯನ್ನು ಹೊಂದಿರುತ್ತಾನೆ. ಯಾವ ಆಹಾರ ಪದಾರ್ಥವನ್ನು ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೇಕು ಎನ್ನುವು ದನ್ನು ಸಹ ಚೆನ್ನಾಗಿ ತಿಳಿದುಕೊಂಡಿರುತ್ತಾನೆ. ಪ್ರಮುಖವಾಗಿ ಸಮತೋಲನವಾದ ಆಹಾರಪದ್ಧತಿಯನ್ನು ಅಭ್ಯಾಸ ಮಾಡಿಕೊಂಡಿರುತ್ತಾನೆ. ಆದರೆ ಮಾಂಸಾಹಾರ ಸೇವನೆಯ ವಿಚಾರದಲ್ಲಿ ಪ್ರತಿಯೊಬ್ಬರೂ ಸಹ ಒಂದು ವಿಶೇಷವಾದ ಗಮನವನ್ನು ಕೊಡಬೇಕು. ಚಿಕನ್ ಸೇವನೆ ಆರೋಗ್ಯಕರ ಎಂದು ಹೇಳಲಾಗುತ್ತದೆ. ಆದರೆ ಮಿತಿ ಮೀರಿ ಪ್ರತಿದಿನವೂ ಚಿಕನ್ ತಿನ್ನುತ್ತಾ ಹೋದರೆ, ಅದರಿಂದ ಆರೋಗ್ಯಕ್ಕಿಂತ ಅನಾರೋಗ್ಯವೇ ಹೆಚ್ಚಾಗುತ್ತದೆ ಅಂತಾ ಅಧ್ಯಯನ ವರದಿಯಿಂದ ಗೊತ್ತಾಗಿದೆ.
ಇದನ್ನೂ ಓದಿ: ಚಿಲ್ಲಿ ಪನೀರ್ ಬದಲು ಚಿಲ್ಲಿ ಚಿಕನ್ ಡೆಲಿವರಿ.. – ಆಹಾರ ಸೇವಿಸಿದ ಕೆಲವೇ ಹೊತ್ತಲ್ಲಿ ಕುಟುಂಬಸ್ಥರು ಅಸ್ವಸ್ಥ!
ಚಿಕನ್ ದೇಹಕ್ಕೆ ಅಗತ್ಯವಾದ ಪ್ರೋಟೀನ್ ಒದಗಿಸುತ್ತದೆ. ಆದ್ರೆ ಚಿಕನ್ ಇಷ್ಟ ಅಂತಾ ಪ್ರತಿನಿತ್ಯ ಅಥವಾ ವಾರಕ್ಕೆ 4-5 ದಿನ ತಿಂದ್ರೆ ನಮ್ಮ ಆರೋಗ್ಯ ಕೆಡುತ್ತೆ ಅಂತಾ ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಉಲ್ಲೇಖವಾಗಿದೆ. ಅತೀ ಹೆಚ್ಚು ಚಿಕನ್ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ದೇಹದಲ್ಲಿ ಹೆಚ್ಚುತ್ತದೆ ಅಂತಾ ಅಧ್ಯಯನದಲ್ಲಿ ಗೊತ್ತಾಗಿದೆ. ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದ್ರೆ ತೂಕ ಹೆಚ್ಚಳ, ರಕ್ತದಲ್ಲಿ ಲಿಪಿಡ್ ಪ್ರಮಾಣ ಏರಿಕೆಯಾಗುತ್ತದೆ. ಇನ್ನು ಪ್ರತಿದಿನ ಹೆಚ್ಚು ಚಿಕನ್ ತಿಂದ್ರೆ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಳ್ಳಬಹುದು. ಅದರಲ್ಲೂ ಹೋಟೆಲ್ ಗಳಲ್ಲಿ ಚಿಕನ್ ಖಾದ್ಯಗಳಿಗೆ ಹೆಚ್ಚಾಗಿ ಟೇಸ್ಟಿಂಗ್ ಪೌಡರ್, ಫುಡ್ ಕಲರ್ ಹಾಕಿರುತ್ತಾರೆ. ಡೈಲಿ ಹೊರಗೆ ಚಿಕನ್ ತಿಂದ್ರೆ ಫುಡ್ ಪಾಯಿಸನ್ ಆಗೋ ಸಾಧ್ಯತೆ ಹೆಚ್ಚಾಗಿದೆ. ಚಿಕನ್ ಇಷ್ಟ ಅಂತಾ ಹೆಚ್ಚು ತಿಂದು ಆರೋಗ್ಯ ಕೆಡಿಸಿಕೊಳ್ಳೋ ಬದಲು ಆರೋಗ್ಯದ ಕಡೆ ಗಮನ ಹರಿಸೋದು ಮುಖ್ಯ.