ಛತ್ತೀಸ್‌ಗಢದಲ್ಲಿ ʼಮೋದಿ ಕಿ ಗ್ಯಾರಂಟಿʼ – ಭೂರಹಿತ ಕೃಷಿಕರಿಗೆ ₹10,000, ಮಹಿಳೆಯರಿಗೆ ₹12,000 ಘೋಷಣೆ!

ಛತ್ತೀಸ್‌ಗಢದಲ್ಲಿ ʼಮೋದಿ ಕಿ ಗ್ಯಾರಂಟಿʼ – ಭೂರಹಿತ ಕೃಷಿಕರಿಗೆ ₹10,000, ಮಹಿಳೆಯರಿಗೆ ₹12,000 ಘೋಷಣೆ!

ಕರ್ನಾಟಕದ ಚುನಾವಣೆ ಮೂಲಕ ಶುರುವಾದ ಕಾಂಗ್ರೆಸ್‌ನ ಉಚಿತ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಲೇ ಬಂದಿದ್ದ ಬಿಜೆಪಿ ಈಗ ಛತ್ತೀಸ್‌ಗಢದಲ್ಲಿ ಉಚಿತ ಗ್ಯಾರಂಟಿಗಳನ್ನು ಘೋಷಿಸಿದೆ.  ‘ಮೋದಿ ಕಿ ಗ್ಯಾರಂಟಿ’ ಹೆಸರಿನಡಿ ಪ್ರಣಾಳಿಕೆ ಬಿಡುಗಡೆ ಮಾಡಿರುವ ಬಿಜೆಪಿ ಬಡವರ, ಕಾರ್ಮಿಕರ ಹಾಗೂ ಮಹಿಳೆಯರ ಮತಗಳನ್ನು ಸೆಳೆಯಲು ಕೆಲವು ಉಚಿತ ಯೋಜನೆಗಳನ್ನು ಪ್ರಕಟಿಸುವ ಮೂಲಕ ಬಹುತೇಕ ಕಾಂಗ್ರೆಸ್‌ನ ಹಾದಿ ತುಳಿದಂತೆ ಕಾಣುತ್ತಿದೆ.

ಹೌದು, ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಮಣಿಸಲು ಬಿಜೆಪಿ ರಣತಂತ್ರಗಳನ್ನು ಹೆಣೆಯುತ್ತಿದೆ. ಅದರ ಭಾಗವಾಗಿ ಬಡ ಕುಟುಂಬಗಳಿಗೆ 500 ರೂ. ದರದಲ್ಲಿ ಎಲ್‌ಪಿಜಿ ಸಿಲಿಂಡರ್‌, ವಿವಾಹಿತ ಮಹಿಳೆಯರಿಗೆ ವಾರ್ಷಿಕ 12 ಸಾವಿರ ರೂ. ಆರ್ಥಿಕ ನೆರವು, ಭೂರಹಿತ ಕೃಷಿಕರಿಗೆ ವಾರ್ಷಿಕ 10,000 ರೂ. ನೆರವು, ಪ್ರತಿ ಕ್ವಿಂಟಾಲ್‌ ಭತ್ತಕ್ಕೆ 3,100 ರೂ. ಬೆಂಬಲ ಬೆಲೆ ಸೇರಿದಂತೆ ಹಲವು ಭರವಸೆಗಳನ್ನು ಬಿಜೆಪಿಯು ಪ್ರಣಾಳಿಕೆಯಲ್ಲಿ ನೀಡಿದೆ.

ಇದನ್ನೂ ಓದಿ: ಈ ಕಂಪನಿಯಲ್ಲಿ ಉದ್ಯೋಗಿಗಳೇ ಸೆಲೆಬ್ರಿಟಿಗಳು! – ದೀಪಾವಳಿ ಪ್ರಯುಕ್ತ ಕಾರ್‌ ಗಿಫ್ಟ್ ನೀಡಿದ ಕಂಪನಿ!

ಏನೇನು ಭರವಸೆ?

  • ದೀನ್‌ದಯಾಳ್‌ ಉಪಾಧ್ಯಾಯ ಕೃಷಿ ಮಜ್ದೂರ್‌ ಯೋಜನೆಯಡಿ ಭೂರಹಿತ ಕೃಷಿಕರಿಗೆ ವಾರ್ಷಿಕ 10,000 ರೂ. ನೆರವು
  • ಕೃಷಿ ಉನ್ನತಿ ಯೋಜನೆಯಡಿ ಪ್ರತಿ ಕ್ವಿಂಟಾಲ್‌ ಭತ್ತಕ್ಕೆ 3,100 ರೂ. ಬೆಂಬಲ ಬೆಲೆ
  • ಮಹತಾರಿ ವಂದನ್‌ ಯೋಜನೆಯಡಿ ವಿವಾಹಿತ ಮಹಿಳೆಯರಿಗೆ ವಾರ್ಷಿಕ 12,000 ರೂ. ಆರ್ಥಿಕ ನೆರವು
  • ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ 18 ಲಕ್ಷ ಮನೆಗಳ ನಿರ್ಮಾಣ
  • ರಾಜ್ಯ ಪ್ರಾಯೋಜಿತ ಧಾರ್ಮಿಕ ಪ್ರವಾಸ ಯೋಜನೆ. ಹಿರಿಯರಿಗೆ ಅಯೋಧ್ಯೆಯಲ್ಲಿ ರಾಮ ಲಲ್ಲಾನ ಪ್ರದರ್ಶನಕ್ಕೆ ಪ್ಯಾಕೇಜ್‌ ವ್ಯವಸ್ಥೆ.
  • ಘರ್‌ ಘರ್‌ ನಿರ್ಮಲ್‌ ಜಲ ಅಭಿಯಾನದಡಿ ಪ್ರತಿ ಮನೆಗೆ ಎರಡು ವರ್ಷದಲ್ಲಿ ಕುಡಿಯುವ ನೀರು ಸಂಪರ್ಕ
  • ಎರಡು ವರ್ಷದಲ್ಲಿ, ಖಾಲಿ ಇರುವ ಒಂದು ಲಕ್ಷ ಹುದ್ದೆಗಳ ಭರ್ತಿ ಪ್ರಕ್ರಿಯೆ ಪೂರ್ಣ
  • ಮುಂಬರುವ ವರ್ಷಗಳಲ್ಲಿ ಕ್ರಮೇಣ 500 ಹೊಸ ಜನೌಷಧ ಕೇಂದ್ರಗಳ ಸ್ಥಾಪನೆ

ಕಾಂಗ್ರೆಸ್ಪ್ರಣಾಳಿಕೆಯಲ್ಲಿ ಏನಿತ್ತು?

  • ಬಡ ಕುಟುಂಬಗಳಿಗೆ 500 ರೂ. ದರದಲ್ಲಿ ಎಲ್‌ಪಿಜಿ ಸಿಲಿಂಡರ್‌
  • ಸರಕಾರಿ ಶಾಲೆಗಳಲ್ಲಿ ಕೆ.ಜಿಯಿಂದ ಹಿಡಿದು ಸ್ನಾತಕೋತ್ತರ ಪದವಿವರೆಗೆ ಉಚಿತ ಶಿಕ್ಷಣ.
  • ರೈತರ ಸಾಲ ಮನ್ನಾ, ಭೂ ರಹಿತ ಕೃಷಿಕರಿಗೆ ವಾರ್ಷಿಕ 10 ಸಾವಿರ ರೂ. ಆರ್ಥಿಕ ನೆರವು.
  • ಉಚಿತ ಆರೋಗ್ಯ ವಿಮೆ ಮೊತ್ತ 5 ಲಕ್ಷ ರೂ.ನಿಂದ 10 ಲಕ್ಷ ರೂ.ಗೆ ಏರಿಕೆ
  • ಪ್ರತಿ ಕ್ವಿಂಟಾಲ್‌ ಭತ್ತ ಖರೀದಿಗೆ 3000 ರೂ. ಬೆಂಬಲ ಬೆಲೆ

Shwetha M