ರಸ್ತೆ ಅಪಘಾತದಲ್ಲಿ ತಂದೆ ಸಾವು – 5 ವರ್ಷದ ಮಗನಿಗೆ ಕಾನ್ಸ್ ಸ್ಟೇಬಲ್ ಹುದ್ದೆ!

ರಸ್ತೆ ಅಪಘಾತದಲ್ಲಿ ತಂದೆ ಸಾವು – 5 ವರ್ಷದ ಮಗನಿಗೆ ಕಾನ್ಸ್ ಸ್ಟೇಬಲ್ ಹುದ್ದೆ!

ಯಾವುದೇ ಸರ್ಕಾರಿ ಹುದ್ದೆ ಪಡೆಯಬೇಕೆಂದರೆ ನಿರ್ದಿಷ್ಟ ವಯಸ್ಸಿನ ಮಿತಿ ಇರುತ್ತದೆ. ಅಲ್ಲದೇ ಹುದ್ದೆಗೆ ಅರ್ಜಿ ಸಲ್ಲಿಸುವವರು ಪಿಯುಸಿ, ಪದವಿ ವಿದ್ಯಾಭಾಸ್ಯ ಮುಗಿಸಿರಬೇಕಾಗುತ್ತದೆ. ಅಷ್ಟೇ ಅಲ್ಲದೇ ಹುದ್ದೆಗಳಿಗನುಗುಣವಾಗಿ ಕೆಲವೊಂದು ಪರೀಕ್ಷೆಗಳಲ್ಲಿ ಪಾಸ್ ಆಗಿರಬೇಕು. ಆದರೆ ಇಲ್ಲೊಬ್ಬ 5 ವರ್ಷದ ಬಾಲಕ ಪೊಲೀಸ್ ಕಾನ್ಸ್ ಟೇಬಲ್ ಆಗಿ ನೇಮಕಗೊಂಡಿದ್ದಾನೆ.

ಇದನ್ನೂ ಓದಿ: ಪೊಲೀಸರಿಂದಲೇ ಆರೋಪಿಯ ಅಪಹರಣ – ದುಡ್ಡಿಗೆ ಬೇಡಿಕೆಯಿಟ್ಟ ಖಾಕಿಗಳು ಕಂಬಿಹಿಂದೆ..!

ಛತ್ತೀಸ್ ಗಢದ ಸರ್ಗುಜಾದ ನಿವಾಸಿ ನಮನ್ ರಾಜ್‌ವಾಡೆ ಪೊಲೀಸ್ ಕಾನ್ಸ್ ಟೇಬಲ್ ಆಗಿ ಆಯ್ಕೆಯಾದ ಬಾಲಕ. ಈತ ಪ್ರಸ್ತುತ ಯುಕೆಜಿ ಓದುತ್ತಿದ್ದಾನೆ. ನಮನ್ ತಂದೆ ರಾಜ್ ಕುಮಾರ್ ರಾಜವಾಡೆ ಮಹಿಳಾ ಠಾಣೆಯಲ್ಲಿ ಕಾರ್ಯನಿರ್ವಹಿಸಿದ್ದರು. ಆದರೆ ಕೆಲದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ಅವರು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆ ಪೊಲೀಸ್ ಆಡಳಿತ ಮಂಡಳಿ ಅನುಕಂಪದ ಆಧಾರದ ಮೇಲೆ ನಮನ್ ಅನ್ನು ಛತ್ತೀಸ್‌ಗಢದ ಸರ್ಗುಜಾದಲ್ಲಿ ಮಕ್ಕಳ ಕಾನ್ಸ್ ಟೇಬಲ್ ಆಗಿ ನೇಮಿಸಿದೆ.

ಈ ಬಗ್ಗೆ ಪೊಲೀಸ್ ಅಧಿಕಾರಿ ಪತ್ನಿ ನಿತು ರಾಜ್‌ವಾಡೆ ಮಾತನಾಡಿದ್ದು, ನನ್ನ ಪತಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈಗ ನನ್ನ ಮಗನನ್ನು ಮಕ್ಕಳ ಕಾನ್‌ಸ್ಟೇಬಲ್ ಆಗಿ ನೇಮಿಸಲಾಗಿದೆ. ಗಂಡನನ್ನು ಕಳೆದುಕೊಂಡಿರುವ ಬಗ್ಗೆ ನೋವಿದೆ. ಆದರೆ ಮಗುವಿಗೆ ಪೊಲೀಸ್ ಹುದ್ದೆ ನೀಡಿರುವುದಕ್ಕೆ ಖುಷಿ ಆಗಿದೆ ಎಂದು ಹೇಳಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ ಭಾವನಾ ಗುಪ್ತಾ ಈ ಕುರಿತು ಮಾತನಾಡಿದ್ದು, ಆಡಳಿತ ಮತ್ತು ಪೊಲೀಸ್ ಪ್ರಧಾನ ಕಚೇರಿಯ ಮಾರ್ಗಸೂಚಿಗಳ ಪ್ರಕಾರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಪೊಲೀಸ್ ಹುದ್ದೆಯಲ್ಲಿರುವವರು ಅಕಾಲಿಕವಾಗಿ ಸಾವನ್ನಪ್ಪಿದ್ದರೆ ಅವರ ಕುಟುಂಬದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಇದ್ದರೆ ಅವರನ್ನು ನೇಮಕ ಮಾಡಲಾಗುತ್ತದೆ. ಅದರಂತೆ  ‘ಮಕ್ಕಳ ಕಾನ್ಸ್‌ಟೇಬಲ್’ ಹುದ್ದೆಯ  ಅಡಿಯಲ್ಲಿ ನಮನ್ ರಾಜ್‌ವಾಡೆ ಅವನನ್ನು ಮಕ್ಕಳ ಕಾನ್‌ಸ್ಟೇಬಲ್ ಆಗಿ ನೇಮಿಸಲಾಗಿದೆ ಎಂದು ಹೇಳಿದರು.

suddiyaana