ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ ಪತ್ನಿ ವಿಯೋಗ – ಮಣಿಪಾಲ್ ಆಸ್ಪತ್ರೆಯಲ್ಲಿ ಚೆನ್ನಮ್ಮ ವಿಧಿವಶ

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ ಪತ್ನಿ ವಿಯೋಗ – ಮಣಿಪಾಲ್ ಆಸ್ಪತ್ರೆಯಲ್ಲಿ ಚೆನ್ನಮ್ಮ ವಿಧಿವಶ

ಮಾಜಿ ಪ್ರಧಾನಿ ದೇವೇ ಗೌಡ ಅವರ ಪತ್ನಿ ಚೆನ್ನಮ್ಮ ವಿಧಿವಶರಾಗಿದ್ದಾರೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚೆನ್ನಮ್ಮ ನಿಧನರಾಗಿದ್ದಾರೆ.

ಇದನ್ನೂ ಓದಿ:ಭಾರತದಲ್ಲಿ ಹಿಂದೆಂದೂ ನೋಡದ ಬರಗಾಲ – ಎಲ್ ನಿನೋ ಪ್ರಭಾವದಿಂದ ಕಾದಿದೆ ಸಂಕಷ್ಟ

ಮಹಾನ್ ದೈವಭಕ್ತಿ. ದೇವೇಗೌಡರ ಕುಟುಂಬದ ಶಕ್ತಿ. ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಇನ್ನಿಲ್ಲ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚೆನ್ನಮ್ಮ ನಿಧನರಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಚೆನ್ನಮ್ಮ, ಅವರ ಆರೋಗ್ಯಸ್ಥಿತಿ ಬೆಳಗ್ಗೆಯಿಂದಲೇ ಗಂಭೀರವಾಗಿತ್ತು. ಶನಿವಾರ ಸಂಜೆ 4 ಗಂಟೆಯ ವೇಳೆ ಕಾರ್ಡಿಯಾಕ್ ಅರೆಸ್ಟ್ ಆಗಿದ್ದು, ಚೆನ್ನಮ್ಮ ದೇವೇಗೌಡ ವಿಧಿವಶರಾದರು.

ಚೆನ್ನಮ್ಮ ಅವರಿಗೆ ಕಳೆದ 3 ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದ ರಾತ್ರಿ ಆರೋಗ್ಯದಲ್ಲಿ ಭಾರೀ ಏರುಪೇರು ಕಂಡು ಬಂದಿತ್ತು. ಹೆಚ್‌ಡಿ ದೇವೇಗೌಡರು ಪತ್ನಿ ನಿಧನರಾಗುವಾಗ ಆಸ್ಪತ್ರೆಯಲ್ಲೇ ಇದ್ದರು. ಇದೇ ವೇಳೆ ಹೆಚ್‌ಡಿ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಕೂಡಾ ಆಸ್ಪತೆಯಲ್ಲಿ ಇದ್ದರು.

ಹಾಸನ ತಾಲೂಕಿನ ಮುತ್ತಿಗೆ ಹಿರೇಹಳ್ಳಿಯ ಚನ್ನಮ್ಮ ಅವರು 1954 ಮೇ 25ರಂದು ಹೆಚ್​​.ಡಿ. ದೇವೇಗೌಡರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ಹೆಚ್​​.ಡಿ. ರೇವಣ್ಣ, ಹೆಚ್​​.ಡಿ. ಬಾಲಕೃಷ್ಣ, ಹೆಚ್​​.ಡಿ. ರಮೇಶ್​​ ಗೌಡ, ಹೆಚ್​​.ಡಿ. ಕುಮಾರಸ್ವಾಮಿ, ಶೈಲಜಾ ಹಾಗೂ ಅನಸೂಯಾ ಸೇರಿ ಒಟ್ಟು ನಾಲ್ವರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆರು ಮಕ್ಕಳನ್ನ ಸಲಹಿದ್ದಲ್ಲದೆ, ಅವರ ಶಿಕ್ಷಣದ ಜವಾಬ್ದಾರಿ ಹೊತ್ತು ಆದರ್ಶ ಗೃಹಿಣಿಯಾಗಿದ್ದರು. ಜೊತೆಗೆ ಕುಟುಂಬದ ರಾಜಕೀಯ ಶಕ್ತಿಯಾಗಿಯೂ ಕರ್ತವ್ಯ ನಿಭಾಯಿಸಿದ್ದರು.

Sulekha

Leave a Reply

Your email address will not be published. Required fields are marked *