ಚೆನ್ನೈ ತಂಡಕ್ಕೆ ತಲಾ ಎಂಟ್ರಿ – ಚೆಪಾಕ್ ಮೈದಾನದಲ್ಲಿ ಧೋನಿ ಪ್ರಾಕ್ಟೀಸ್

ಚೆನ್ನೈ ತಂಡಕ್ಕೆ ತಲಾ ಎಂಟ್ರಿ  – ಚೆಪಾಕ್ ಮೈದಾನದಲ್ಲಿ ಧೋನಿ ಪ್ರಾಕ್ಟೀಸ್

ಸಿಎಸ್​ಕೆ ಅಭಿಮಾನಿಗಳಿಗೆ ಕೊನೆಗೂ ಗುಡ್​ ನ್ಯೂಸ್ ಸಿಕ್ಕಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ಎಂಎಸ್ ಧೋನಿ ಕಣಕ್ಕಿಳಿಯುವುದು ಖಚಿತ ಎನ್ನಲಾಗುತ್ತಿದೆ. ಮೊದಲ ಎರಡು ವಾರ ತಲಾ ಕಣಕ್ಕಿಳಿಯುವುದಿಲ್ಲ ಎಂದು ಹೇಳಲಾಗುತ್ತಿತ್ತು. ಇದೀಗ ಧೋನಿ ಚೆಪಾಕ್ ಮೈದಾನದಲ್ಲಿ ಅಭ್ಯಾಸ ಶುರು ಮಾಡಿದ್ದಾರೆ.

ಇದನ್ನೂ ಓದಿ:ಕನ್ನಡಿಗ ಕೆ.ಎಲ್ ರಾಹುಲ್‌ಗೆ ಕೈಕೊಟ್ಟ ಲಕ್ – ಮೊದಲ ಪಂದ್ಯ, ಮೊದಲ ಬಾಲ್‌ನಲ್ಲೇ ಸೊನ್ನೆ ಸುತ್ತಿ ನಿರಾಶೆ

ಚೆನ್ನೈ ಸೂಪರ್ ಕಿಂಗ್ಸ್ ತನ್ನ ಮೊದಲ ಪಂದ್ಯವನ್ನು ದೇವರಿಗೆ ಬಿಟ್ಟಿದೆ. ಮೊದಲ ಪಂದ್ಯದಲ್ಲಿಯೇ ಹೀನಾಯ ಸೋಲು ಅನುಭವಿಸಿದ ಚೆನ್ನೈ ತಂಡ ಇದೀಗ ಶುಕ್ರವಾರ ಮತ್ತೊಂದು ಪಂದ್ಯಕ್ಕೆ ರೆಡಿಯಾಗಿದೆ.

ಮೊದಲ ಪಂದ್ಯದಲ್ಲಿ ಸಿಎಸ್‌ಕೆ ರಾಜಸ್ಥಾನ ರಾಯಲ್ಸ್ ವಿರುದ್ಧ ಎಂಟು ವಿಕೆಟ್‌ಗಳ ಹೀನಾಯ ಸೋಲು ಕಂಡಿತ್ತು. ಮುಖ್ಯವಾಗಿ ತಂಡದ ಪ್ರಮುಖ ಬಲ ಎಂಎಸ್ ಧೋನಿ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಮೊದಲ ಎರಡು ವಾರಗಳ ಕಾಲ ಕಣಕ್ಕಿಳಿಯಲು ಧೋನಿಗೆ ಸಾಧ್ಯವಿಲ್ಲ ಎಂದೇ ಹೇಳಲಾಗಿತ್ತು. ಧೋನಿ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದು, ಪುನರ್ವಸತಿಗೆ ಒಳಗಾಗಿದ್ದಾರೆ. ಇದೀಗ ಧೋನಿಯ ಫಿಟ್‌ನೆಸ್‌ಗೆ ಸಂಬಂಧಿಸಿದ ವಿಡಿಯೋ ಹೊರಬಂದಿದೆ, ಇದನ್ನು ಕಂಡು ಸಿಎಸ್‌ಕೆ ಅಭಿಮಾನಿಗಳು ಫುಲ್ ಖುಷಿ ಆಗಿದ್ದಾರೆ.

ಸಿಎಸ್‌ಕೆ ಈಗ ತನ್ನ ಎರಡನೇ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಏಪ್ರಿಲ್ 3 ರಂದು ತನ್ನ ತವರು ಮೈದಾನದಲ್ಲಿ ಆಡಲಿದೆ. ಇದಕ್ಕೂ ಮುನ್ನ ಏಪ್ರಿಲ್ 1 ರಂದು ಚೆಪಾಕ್ ಕ್ರೀಡಾಂಗಣದಲ್ಲಿ ಸಿಎಸ್​ಕೆ ಅಭ್ಯಾಸ ನಡೆಸಿತು, ವಿಶೇಷ ಎಂದರೆ ಈ ಪ್ರ್ಯಾಕ್ಟೀಸ್ ಸೆಷನ್​ನಲ್ಲಿ ಎಂಎಸ್ ಧೋನಿ ಕೂಡ ಭಾಗವಹಿಸಿ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದರು. ಅವರು ನೆಟ್ಸ್‌ಗೆ ಮರಳಿರುವುದು ಸಿಎಸ್‌ಕೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಂತಾಗಿದೆ. ಧೋನಿ ಶೀಘ್ರದಲ್ಲೇ ಸಂಪೂರ್ಣವಾಗಿ ಫಿಟ್ ಆಗಿ ಮೈದಾನಕ್ಕೆ ಮರಳಲು ಸಿದ್ಧರಾಗುತ್ತಾರೆ ಎಂದು ಹೇಳಲಾಗುತ್ತಿದೆ.

Sulekha