ಮುಂಬೈ ಇಂಡಿಯನ್ಸ್‌ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‌ ರೋಚಕ ಗೆಲುವು

ಮುಂಬೈ ಇಂಡಿಯನ್ಸ್‌ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‌ ರೋಚಕ ಗೆಲುವು

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆದ ಐಪಿಎಲ್ ಪಂದ್ಯದಲ್ಲಿ ಸಿಎಸ್‌ಕೆ ಗೆದ್ದು ಬೀಗಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ಭಾನುವಾರ  ನಡೆದ ಐಪಿಎಲ್‌ ಹಣಾಹಣಿಯಲ್ಲಿ ಸಿಎಸ್‌ಕೆ ತಂಡವು 206 ರನ್‌ಗಳಿಸುವ ಮೂಲಕ ಭರ್ಜರಿ ಜಯಗಳಿಸಿದೆ.

ಇದನ್ನೂ ಓದಿ:ರಚಿನ್‌ ಜೊತೆಗಿರುವ ಚೆಲುವೆ ಯಾರು? –  CSK ಆಟಗಾರನ ಲವ್‌ ಸ್ಟೋರಿ! 

ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ 20 ಓವರ್‌ಗಳಲ್ಲಿ 206 ರನ್ ಗಳಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ 207 ರನ್‌ಗಳ ಗುರಿ ನೀಡಿತು. 207ರನ್‌ಗಳ ಗುರಿ ಬೆನ್ನತ್ತಿದ ಮುಂಬೈ ಪರ ರೋಹಿತ್ ಶರ್ಮಾ ಆಕರ್ಷಕ ಶತಕ ಬಾರಿಸಿದರು. ಆದರೆ CSK ಟಾರ್ಗೆಟ್ ತಲುಪಲು ವಿಫಲವಾದ ಹಿನ್ನೆಲೆಯಲ್ಲಿ ಮುಂಬೈ ಇಂಡಿಯನ್ಸ್ ಸೋಲು ಒಪ್ಪಿಕೊಂಡಿದೆ. ಅತ್ಯುತ್ತಮ ಆಲ್‌ ರೌಂಡ್ ಪ್ರದರ್ಶನ ನೀಡಿದ ಚೆನ್ನೈ ಸೂಪರ್ ಕಿಂಗ್ಸ್ 20 ರನ್‌ಗಳಿಂದ ಗೆದ್ದು ಬೀಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ಪರ ಋತುರಾಜ್ ಗಾಯಕವಾಡ 69, ಶಿವಂ ದುಬೆ 66 ರನ್‌ಗಳ ಕಾಣಿಕೆ ನೀಡಿದರು. ಕೊನೇ ಓವರ್‌ನಲ್ಲಿ ಕ್ರೀಸ್‌ಗೆ ಬಂದ ಮಹೇಂದ್ರ ಸಿಂಗ್ ಧೋನಿ 4 ಎಸೆತದಲ್ಲಿ 3 ಸಿಕ್ಸರ್‌ಗಳ ನೆರವಿನಿಂದ 20 ರನ್‌ ಸಿಡಿಸಿದ್ದರು.

ಚೆನ್ನೈ ಟಾರ್ಗೆಟ್ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್‌ ಪರ ರೋಹಿತ್ ಶರ್ಮಾ, ಇಶಾನ್ ಕಿಶಾನ್ ಉತ್ತಮ ಆರಂಭವನ್ನೇ ಒದಗಿಸಿದರು. ಆದರೆ ಇಶಾನ್ ಕಿಶಾನ್ ಔಟಾದ ಬಳಿಕ ಸೂರ್ಯಕುಮಾರ್ ಯಾದವ್ ಶೂನ್ಯಕ್ಕೆ ಔಟಾದರು. ತಿಲಕ್ ವರ್ಮಾ 31 ರನ್ ಸಿಡಿಸಿದ್ದು ಬಿಟ್ಟರೆ ರೋಹಿತ್ ಶರ್ಮಾ ಬೇರೆ ಯಾರು ಸಾಥ್ ನೀಡಲಿಲ್ಲ. ನಾಯಕ ಹಾರ್ದಿಕ್ ಪಾಂಡ್ಯ ಕೇವಲ 2 ರನ್ ಸಿಡಿಸಿ ಮುಂಬೈ ಸೋಲಿಗೆ ಕಾರಣರಾದರು.

ಮುಂಬೈ ಪರ ಏಕಾಂಗಿಯಾಗಿ ಹೋರಾಟ ನಡೆಸಿದ ರೋಹಿತ್ ಶರ್ಮಾ ಅವರು 11 ಬೌಂಡರಿ, 5 ಸಿಕ್ಸರ್‌ನ ನೆರವಿನಿಂದ ಆಕರ್ಷಕ ಶತಕ ಬಾರಿಸಿದರು. ರೋಹಿತ್ ಶರ್ಮಾ ಒನ್ ಮ್ಯಾನ್ ಆರ್ಮಿ ಹೋರಾಟ ವಿಪಲವಾಗಿದ್ದು, ಕೊನೆಗೆ ಮುಂಬೈ ಇಂಡಿಯನ್ಸ್ ಚೆನ್ನೈ ವಿರುದ್ಧ ಸೋಲೋಪ್ಪಿಕೊಂಡಿದೆ.

Shwetha M