ಮುಂಬೈ ಮಣಿಸಿ ಶುಭಾರಂಭ ಮಾಡಿದ ಸಿಎಸ್‌ಕೆ – MI ವಿರುದ್ಧ ಚೆನ್ನೈಗೆ 4 ವಿಕೆಟ್‌ಗಳ ಜಯ

ಮುಂಬೈ ಮಣಿಸಿ ಶುಭಾರಂಭ ಮಾಡಿದ ಸಿಎಸ್‌ಕೆ – MI ವಿರುದ್ಧ ಚೆನ್ನೈಗೆ 4 ವಿಕೆಟ್‌ಗಳ ಜಯ

ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಸಿಎಸ್‌ಕೆ ಗೆದ್ದು ಬೀಗಿದ್ದು, ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2025ರಲ್ಲಿ ಭರ್ಜರಿ ಆರಂಭ ಪಡೆದಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 4 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ, ಮುಂಬೈ 2012 ರ ನಂತರ ಸೀಸನ್‌ನ ಮೊದಲ ಪಂದ್ಯವನ್ನು ಗೆಲುವಿನೊಂದಿಗೆ ಪ್ರಾರಂಭಿಸುವಲ್ಲಿ ಮತ್ತೊಮ್ಮೆ ವಿಫಲವಾಯಿತು.

ಇದನ್ನೂ ಓದಿ: 20 ವರ್ಷದ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ – ನಾಲ್ವರು ಅರೆಸ್ಟ್

ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ 20 ಓವರ್‌ಗಳಿಗೆ 9 ವಿಕೆಟ್‌ ನಷ್ಟಕ್ಕೆ 155 ರನ್‌ ಗಳಿಸಿತು. 156 ರನ್‌ ಗುರಿ ಬೆನ್ನತ್ತಿದ ಚೆನ್ನೈ 19.1 ಓವರ್‌ಗಳಿಗೆ 158 ರನ್‌ಗಳೊಂದಿಗೆ 4 ವಿಕೆಟ್‌ಗಳ ಜಯಗಳಿಸಿತು.

ಮೊದಲು ಬ್ಯಾಟ್‌ ಮಾಡಿದ ಮುಂಬೈ ಕಳೆದ ಪ್ರದರ್ಶನ ನೀಡಿತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್‌ ಶರ್ಮಾ ಶೂನ್ಯ ಸುತ್ತಿ ಪೆವಿಲಿಯನ್‌ಗೆ ಸೇರಿದ್ದು, ಫ್ಯಾನ್ಸ್‌ಗೆ ನಿರಾಸೆ ಮೂಡಿಸಿತು. ತಿಲಕ್‌ ವರ್ಮಾ (31), ಕ್ಯಾಪ್ಟನ್‌ ಸೂರ್ಯಕುಮಾರ್‌ ಯಾದವ್‌ (29), ದೀಪಕ್‌ ಚಹಾರ್‌ (28) ಸಮಾಧಾನಕರ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದು, ಬಿಟ್ಟರೆ ಉಳಿದವರು ನಿರಾಸೆ ಮೂಡಿಸಿದರು. ಚೆನ್ನೈ ಪರ ನೂರ್ ಅಹ್ಮದ್ 4 ವಿಕೆಟ್‌ ಕಿತ್ತು ಮಿಂಚಿದರು. ಖಲೀಲ್ ಅಹ್ಮದ್ 3, ನಾಥನ್ ಎಲ್ಲಿಸ್, ಆರ್‌.ಅಶ್ವಿನ್‌ ತಲಾ 1 ವಿಕೆಟ್‌ ಕಿತ್ತರು.

ಮುಂಬೈ ನೀಡಿದ 156 ರನ್‌ಗಳ ಗುರಿ ಬೆನ್ನತ್ತಿದ ಚೆನ್ನೈ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿತು.‌ ಕ್ಯಾಪ್ಟನ್ ಋತುರಾಜ್‌ ಗಾಯಕ್ವಾಡ್‌(53 ರನ್‌, 26 ಬಾಲ್‌, 6 ಫೋರ್‌, 3 ಸಿಕ್ಸರ್‌) ಹಾಗೂ ರಚಿನ್‌ ರವೀಂದ್ರ (65 ರನ್‌, 45 ಬಾಲ್‌, 2 ಫೋರ್‌, 4 ಸಿಕ್ಸರ್‌) ಸ್ಫೋಟಕ ಅರ್ಧಶತಕ ಸಿಡಿಸಿ ತಂಡದ ಗೆಲುವಿಗೆ ನೆರವಾದರು.

Shwetha M