ತವರಿನಲ್ಲೇ ಚೆನ್ನೈಗೆ ಹೀನಾಯ ಸೋಲು – ಲಕ್ನೋ ಸೂಪರ್​ ಜೈಂಟ್ಸ್ ಗೆ 6 ವಿಕೆಟ್‌ ಜಯ

ತವರಿನಲ್ಲೇ ಚೆನ್ನೈಗೆ ಹೀನಾಯ ಸೋಲು – ಲಕ್ನೋ ಸೂಪರ್​ ಜೈಂಟ್ಸ್ ಗೆ 6 ವಿಕೆಟ್‌ ಜಯ

ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಲಕ್ನೋ ಸೂಪರ್‌ ಜೈಂಟ್ಸ್‌ ನಡುವೆ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ಗೆದ್ದು ಬೀಗಿದೆ. ಕೇವಲ 6 ವಿಕೆಟ್‌ಗಳ ಮೂಲಕ ಲಕ್ನೋ ಜಯ ಸಾಧಿಸಿದೆ.

ಇದನ್ನೂ ಓದಿ: ಲಕ್ನೋ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಸಿಎಸ್‌ಕೆ – ತವರಿನಲ್ಲೇ ಭರ್ಜರಿ ಆಟದ ನಿರೀಕ್ಷೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್

ಚೈನ್ನೈನ ಎಂ.ಎ ಚಿದಂಬರಂ ಇಂಟರ್​ ನ್ಯಾಷನಲ್​ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ  ಪಂದ್ಯದಲ್ಲಿ ಸಿಎಸ್‌ಕೆ ನೀಡಿದ 211 ರನ್​ಗಳ ಬಿಗ್​ ಟಾರ್ಗೆಟ್​ ಬೆನ್ನತ್ತಿದ ಲಕ್ನೋ ತಂಡದ ಪರ ಓಪನರ್​ ಆಗಿ ಬಂದ ಡಿಕಾಕ್​​, ಕೆ.ಎಲ್​ ರಾಹುಲ್​ ಕೈ ಕೊಟ್ಟರು. ರಾಹುಲ್​ 16 ರನ್​ ಗಳಿಸಿ ಕ್ಯಾಚ್​​ ಕೊಟ್ಟು ವಿಕೆಟ್​ ಒಪ್ಪಿಸಿದ್ರು.

ಬಳಿಕ ಬಂದ ಮಾರ್ಕಸ್​ ಸ್ಟೊಯ್ನೀಸ್​ ಕೊನೆವರೆಗೂ ಕ್ರೀಸ್​ನಲ್ಲಿ ನಿಂತು ಚೆನ್ನೈ ಬೌಲರ್​ಗಳ ಬೆಂಡೆತ್ತಿದ್ರು. ಕೇವಲ 63 ಬಾಲ್​ನಲ್ಲಿ 6 ಭರ್ಜರಿ ಸಿಕ್ಸರ್​​, 13 ಫೋರ್​ ಸಮೇತ 124 ರನ್​​​ ಸಿಡಿಸಿದ್ರು. ಇವರಿಗೆ ಸಾಥ್​ ನೀಡಿದ ನಿಕೋಲಸ್​ ಪೂರನ್​ ಕೇವಲ 15 ಬಾಲ್​ನಲ್ಲಿ 2 ಸಿಕ್ಸರ್​, 3 ಫೋರ್​ ಸಮೇತ 34 ರನ್​ ಬಾರಿಸಿದ್ರು. ಈ ಮೂಲಕ ಲಕ್ನೋ ತಂಡವನ್ನು ಗೆಲ್ಲಿಸಿದ್ರು.

ಟಾಸ್​ ಸೋತರೂ ಮೊದಲು ಬ್ಯಾಟಿಂಗ್​ ಮಾಡಿದ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಪರ ಕ್ಯಾಪ್ಟನ್​ ಋತುರಾಜ್​ ಗಾಯಕ್ವಾಡ್​ ಕೇವಲ 60 ಬಾಲ್​ನಲ್ಲಿ 3 ಸಿಕ್ಸ್​​, 12 ಫೋರ್​ ಸಮೇತ 108 ರನ್​ ಸಿಡಿಸಿದ್ರು. ಬಳಿಕ ಬಂದ ಶಿವಂ ದುಬೆ 27 ಬಾಲ್​ನಲ್ಲಿ 7 ಸಿಕ್ಸರ್​, 3 ಫೋರ್​ ಸಮೇತ 66 ರನ್​ ಬಾರಿಸಿದ್ರು. ಜಡೇಜಾ 16, ಸ್ಟಾರ್ಕ್​​ 11, ಧೋನಿ 4 ರನ್​ ಸಹಾಯದಿಂದ ಚೆನ್ನೈ 4 ವಿಕೆಟ್​ ನಷ್ಟಕ್ಕೆ 211 ರನ್​ ಕಲೆ ಹಾಕಿತ್ತು.

Shwetha M

Leave a Reply

Your email address will not be published. Required fields are marked *