ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ಡೆವೊನ್ ಕಾನ್ವೆ ಇಂಜುರಿ – ಕಾನ್ವೆ ಜಾಗದಲ್ಲಿ ರಚಿನ್ ರವೀಂದ್ರ ಕಣಕ್ಕೆ

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ಡೆವೊನ್ ಕಾನ್ವೆ ಇಂಜುರಿ – ಕಾನ್ವೆ ಜಾಗದಲ್ಲಿ ರಚಿನ್ ರವೀಂದ್ರ ಕಣಕ್ಕೆ

ಐಪಿಎಲ್ 17ನೇ ಆವೃತ್ತಿಗೆ ಕೌಂಟ್​ಡೌನ್ ಶುರುವಾಗಿದ್ದು, ಮಾರ್ಚ್ 22 ರಂದು ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಆದ್ರೆ ಪಂದ್ಯ ಆರಂಭಕ್ಕೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಘಾತ ಎದುರಾಗಿದೆ.

ಇದನ್ನೂ ಓದಿ:5ನೇ ಟೆಸ್ಟ್‌ನಲ್ಲಿ ರಜತ್ ಪಾಟಿದಾರ್‌ಗೆ ಮತ್ತೊಂದು ಅವಕಾಶ – ಕನ್ನಡಿಗ ದೇವದತ್ ಪಡಿಕ್ಕಲ್ ಡೆಬ್ಯೂ ಡೌಟ್?

ಸಿಎಸ್​ಕೆ ತಂಡದ ಸ್ಟಾರ್ ಆಟಗಾರ ಡೆವೊನ್ ಕಾನ್ವೆ ಗಾಯಗೊಂಡಿದ್ದಾರೆ. ಹೀಗಾಗಿ ಮೇ ತಿಂಗಳ ತನಕ ಡೆವೊನ್ ಕಾನ್ವೆ ಮೈದಾನಕ್ಕಿಳಿಯಲು ಸಾಧ್ಯವಾಗುವುದಿಲ್ಲ ಎಂದು ವರದಿಯಾಗಿದೆ. ಹೀಗಾಗಿ ಈ ಬಾರಿಯ ಐಪಿಎಲ್​ಗೆ ಕಾನ್ವೆ ಅಲಭ್ಯರಾಗುವ ಸಾಧ್ಯತೆ ಹೆಚ್ಚಿದೆ. ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ವೇಳೆ ಎಡಗೈ ಹೆಬ್ಬೆರಳಿಗೆ ಗಾಯವಾಗಿದ್ದು, ಈ ವಾರ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಮೇ ತಿಂಗಳವರೆಗೂ ವಿಶ್ರಾಂತಿಗೆ ಸೂಚಿಸಲಾಗಿದೆ. ಹೀಗಾಗಿ ಕಾನ್ವೆ ಐಪಿಎಲ್​ನಿಂದ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ.

ಇತ್ತ ಡೆವೊನ್ ಕಾನ್ವೆ ಹೊರಗುಳಿಯಲಿರುವ ಸುದ್ದಿ ಬೆನ್ನಲ್ಲೇ ಈ ಬಾರಿ ಸಿಎಸ್​ಕೆ ಪರ ಆರಂಭಿಕರಾಗಿ ಕಣಕ್ಕಿಳಿಯುವವರು ಯಾರು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಕಳೆದ ಎರಡು ಸೀಸನ್​ಗಳಿಂದ ಚೆನ್ನೈ ಸೂಪರ್ ಕಿಂಗ್ಸ್​ ಪರ ರುತುರಾಜ್ ಗಾಯಕ್ವಾಡ್ ಹಾಗೂ ಡೆವೊನ್ ಕಾನ್ವೆ ಇನಿಂಗ್ಸ್ ಆರಂಭಿಸಿದ್ದರು. ಇದೀಗ ಕಾನ್ವೆ ಅನುಪಸ್ಥಿತಿಯಲ್ಲಿ ರುತುರಾಜ್ ಜೊತೆ ಕಣಕ್ಕಿಳಿಯುವವರು ಯಾರು ಎಂಬ ಪ್ರಶ್ನೆ ಮೂಡಿದೆ. ಈ ಪ್ರಶ್ನೆಗೆ ಸದ್ಯ ಸಿಗುತ್ತಿರುವ ಉತ್ತರ ರಚಿನ್ ರವೀಂದ್ರ. ಕರ್ನಾಟಕ ಮೂಲದ ನ್ಯೂಝಿಲೆಂಡ್ ಕ್ರಿಕೆಟಿಗ ರಚಿನ್ ಅವರನ್ನು ಈ ಬಾರಿಯ ಹರಾಜಿನಲ್ಲಿ ಸಿಎಸ್​ಕೆ 1.8 ಕೋಟಿ ರೂ.ಗೆ ಖರೀದಿಸಿದೆ. ಡೆವೊನ್ ಕಾನ್ವೆ ಅನುಪಸ್ಥಿತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಪರ ರಚಿನ್ ರವೀಂದ್ರ ಆರಂಭಿಕನಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತ ಎಂದೇ ಹೇಳಬಹುದು.

 

Sulekha