ಹೊಸ ಅಧ್ಯಾಯದ ಆರಂಭಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ರೆಡಿ – ಹೇಗಿದೆ ಸಿಎಸ್‌ಕೆ ಹವಾ?

ಹೊಸ ಅಧ್ಯಾಯದ ಆರಂಭಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ರೆಡಿ – ಹೇಗಿದೆ ಸಿಎಸ್‌ಕೆ ಹವಾ?

ಐಪಿಎಲ್ ಕಿಕ್ ಸ್ಟಾರ್ಟ್ ಆಗಲು ಕೌಂಟ್‌ಡೌನ್ ಸ್ಟಾರ್ಟ್ ಆಗಿದೆ. ಹೊಸ ಅಧ್ಯಾಯದ ಆರಂಭಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಜ್ಜಾಗಿದೆ. ಜೋಶ್‌ನಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಪಂದ್ಯಕ್ಕೆ ರೆಡಿಯಾಗಿದೆ. ಫ್ಯಾನ್ಸ್ ಕ್ರೇಜ್ ಜಾಸ್ತಿ ಇರೋದೇ ಸಿಎಸ್‌ಕೆ ಮತ್ತು ಆರ್‌ಸಿಬಿ ಟೀಮ್‌ಗಳಿಗೆ. ಹೀಗಾಗಿ ಫ್ಯಾನ್ಸ್ ಕಣ್ಣೆಲ್ಲಾ ಫಸ್ಟ್ ಮ್ಯಾಚ್ ಮೇಲೇನೆ. ಐಪಿಎಲ್ ಫೀವರ್ ಓವರ್ ಆಗಿರುವಾಗ್ಲೇ ಫಸ್ಟ್ ಮ್ಯಾಚ್ ಆರ್‌ಸಿಬಿ ವರ್ಸಸ್ ಸಿಎಸ್‌ಕೆ ಎದುರಾಳಿಗಳಾಗಿ ಕಣಕ್ಕೆ ಇಳಿಸಿದ್ದು. ಮೊದಲ ಪಂದ್ಯದಲ್ಲಿ ಆರ್‌ಸಿಬಿ ಲೆಕ್ಕಾಚಾರಗಳೇನು?, ಕೌಂಟರ್ ಕೊಡಲು ಸಿಎಸ್‌ಕೆ ಟೀಮ್‌ನ ಬಲವೇನು? ಎಂಬ ಬಗ್ಗೆ ವಿವರ ಇಲ್ಲಿದೆ.

ಇದನ್ನೂ ಓದಿ: ಐಪಿಎಲ್ 2024, ಸೀಸನ್ 17ಕ್ಕೆ ಕೌಂಟ್‌ಡೌನ್- RCB Vs CSK ಸೆಣಸಾಟದಲ್ಲಿ ಚೆಪಾಕ್ ಯಾರಿಗೆ ವರವಾಗುತ್ತೆ?

ಆರ್​ಸಿಬಿ ಅಂದ್ರೆ ವಿರಾಟ್ ಕೊಹ್ಲಿ.. ವಿರಾಟ್ ಕೊಹ್ಲಿ ಅಂದ್ರೆ ಆರ್​ಸಿಬಿ.. ಇದು ರಾಯಲ್ ಚಾಲೆಂಜೆರ್ಸ್ ಬೆಂಗಳೂರು ಮತ್ತು ವಿರಾಟ್ ಕೊಹ್ಲಿಗೆ ಇರುವ ಕನೆಕ್ಷನ್. ಐಪಿಎಲ್​​​ ಇತಿಹಾಸದಲ್ಲಿ ಕೂಡ ವಿರಾಟ್ ಕೊಹ್ಲಿ ವನ್ ಆಫ್ ದಿ ಗ್ರೇಟೆಸ್ಟ್ ಕ್ರಿಕೆಟರ್. ಆದ್ರೇನು ಮಾಡೋದು ಟ್ರೋಫಿ ಗೆಲ್ಲೋ ವಿಚಾರದಲ್ಲಿ ಕೊಹ್ಲಿ ಕೂಡ ಮೋಸ್ಟ್ ಅನ್​ಲಕ್ಕಿ ಪ್ಲೇಯರ್​. ಐಪಿಎಲ್​​​ನಲ್ಲಿ ಕಳೆದ 15 ವರ್ಷಗಳಿಂದ ಕೊಹ್ಲಿ ಆರ್​ಬಿಸಿ ಟೀಂನಲ್ಲೇ ಆಡ್ತಿದ್ದಾರೆ. 2008ರಲ್ಲಿ ಫ್ರಾಂಚೈಸಿ ಸೇರಿಕೊಂಡಿದ್ದ ಕೊಹ್ಲಿ, 2013ರ ಬಳಿಕ ಸುಮಾರು 7 ವರ್ಷಗಳ ಕಾಲ ಕ್ಯಾಪ್ಟನ್ ಕೂಡ ಆಗಿದ್ರು. ಆದ್ರೆ ಇದುವರೆಗೂ ಒಂದೇ ಒಂದು ಬಾರಿ ಟ್ರೋಫಿ ಎತ್ತಿಹಿಡಿಯೋಕೆ ಕೊಹ್ಲಿಗೆ ಸಾಧ್ಯವಾಗಿಲ್ಲ. ಐಪಿಎಲ್​​ನಲ್ಲಿ ಫೈನಲ್​ವರೆಗೆ ತಲುಪಿದ್ದೇ ಕೊಹ್ಲಿ ಟೀಮ್​ನ ಸಾಧನೆ. ಹಾಗಂತಾ ಟ್ರೋಫಿ ಗೆದ್ದಿಲ್ಲ ಅನ್ನೋ ಕಾರಣಕ್ಕೆ ಕೊಹ್ಲಿ ಏನೂ ಫ್ರಾಂಚೈಸಿ ಬಿಟ್ಟಿಲ್ಲ. ಕೊಹ್ಲಿಯನ್ನು ಫ್ಯಾನ್ಸ್ ಕೂಡಾ ಬಿಟ್ಟುಕೊಟ್ಟಿಲ್ಲ. ಫ್ಯಾನ್ಸ್ ಅಂತೂ ಈ ಬಾರಿ ಕಪ್ ನಮ್ದೇ ಅಂತಾ ಟೀಮ್‌ಗೆ ಎನ್‌ಕರೇಜ್ ಮಾಡ್ತಾನೆ ಇದ್ದಾರೆ.

ಸಿಎಸ್‌ಕೆ ಟೀಮ್‌ನ ಮೈನ್ ಸ್ಟ್ರೆಂಥ್ ಅಂದ್ರೆ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ. ಧೋನಿ ಪಾಲಿಗಂತೂ ಚೆನ್ನೈ ಸೆಕೆಂಡ್ ಹೋಮ್ ಆಗಿದೆ. ಚೆನ್ನೈ ಸೂಪರ್​ ಕಿಂಗ್ಸ್​​ ಮ್ಯಾನೇಜ್ಮೆಂಟ್​ ಜೊತೆಗೆ ಧೋನಿಗೆ ತುಂಬಾ ಸ್ಪೆಷಲ್ ಬಾಂಡ್ ಇದೆ. ಇಡೀ ಫ್ರಾಂಚೈಸಿ ಜೊತೆಗೆ ಎಮೋಷನಲ್ ಅಟ್ಯಾಚ್​ಮೆಂಟ್ ಕೂಡ ಇದೆ. ಚೆನ್ನೈ ಸೂಪರ್​​ ಕಿಂಗ್ಸ್​​ ಕ್ಯಾಪ್ಟನ್ ಆಗಿ ಟೀಮ್‌ನ ಗೆಲುವಿನ ರೂವಾರಿಯಾಗಿರುವ ಧೋನಿಗೂ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ.

ಈ ಇಬ್ಬರೂ ಲೆಜಂಡರಿ ಕ್ರಿಕೆಟಿಗರು ನಾಳೆ ಮುಖಾಮುಖಿಯಾಗ್ತಾರೆ. ಅಭಿಮಾನಿಗಳ ಕಣ್ಣೆಲ್ಲಾ ಇವರಿಬ್ಬರ ಮೇಲೆ ನೆಟ್ಟಿದೆ.

ಒಂದು ತಂಡದ ಯಶ್ಸಸಿಗೆ ಓಪನಿಂಗ್ ಪಾರ್ಟನರ್ಶಿಪ್ ಅನ್ನೋದು ಕ್ರೂಶಿಯಲ್. ಇದಕ್ಕೆ ತಕ್ಕಂತೆ ಕಳೆದ ಸೀಸನ್ನಲ್ಲಿ ಕ್ಯಾಪ್ಟನ್ ಫಾಫ್ ಹಾಗೂ ವಿರಾಟ್ ಅದ್ಭುತ ಪ್ರದರ್ಶನ ನೀಡಿದ್ರು. ಆದ್ರೀಗ ಸ್ಫೋಟಕ ಬ್ಯಾಟ್ಸ್ಮನ್ ಕಮರೂನ್ ಗ್ರೀನ್ ಆಗಮನದಿಂದ ಸ್ಟ್ರಾಟರ್ಜಿ ಬದಲಿಸುವ ತಂತ್ರಕ್ಕೆ ಆರ್ಸಿಬಿ ಕೈಹಾಕೋ ಸಾಧ್ಯತೆ ಇದೆ. ಆರಂಭಿಕನಾಗಿ ಸಕ್ಸಸ್ ಕಂಡಿರುವ ವಿರಾಟ್‌ಗೆ ಹಿಂಬಡ್ತಿ ನೀಡೋದು ಡೌಟ್. ಐಪಿಎಲ್ನಲ್ಲಿ ಆರಂಭಿಕನಾಗಿ ವಿರಾಟ್ ಆರಂಭಿಕನಾಗಿ 98 ಪಂದ್ಯಗಲ್ಲಿ ಬ್ಯಾಟ್ ಬೀಸಿರುವ ವಿರಾಟ್, 3611 ರನ್ ಹೊಡೆದಿದ್ದಾರೆ. 26 ಅರ್ಧಶತಕ, 7 ಶತಕ ಸಿಡಿಸಿರುವ ವಿರಾಟ್, 135.44ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಹೀಗಾಗಿ ಫಾಫ್ ಜೊತೆ ಕಿಂಗ್ ಕೊಹ್ಲಿ ಆರಂಭಿಕನಾಗಿ ಆಡೋದು ಕನ್ಫರ್ಮ್. ಹೊಡಿಬಡಿ ಆಟಕ್ಕೆ ಹೆಸರುವಾಸಿಯಾಗಿರೋ ಕಮರೂನ್ ಗ್ರೀನ್, ಯಾವುದೇ ಕ್ರಮಾಂಕದಲ್ಲಾದರೂ ಬ್ಯಾಟಿಂಗ್ ಮಾಡೋ ಕೆಪಾಸಿಟಿ ಇದೆ. ಓಪನರ್, ಮಿಡಲ್ ಆರ್ಡರ್, ಫಿನಿಷರ್.. ಹೀಗೆ ಹಲವು ರೋಲ್ ಪ್ಲೇ ಮಾಡಬಲ್ಲ ಗ್ರೀನ್, ಕಳೆದ ಸೀಸನ್ನಲ್ಲಿ 3ನೆ ಕ್ರಮಾಂಕದಲ್ಲೇ ಅತಿ ಹೆಚ್ಚು ರನ್ ಸಿಡಿಸಿದ್ದಾರೆ. ಹೀಗಾಗಿ ಗ್ರೀನ್ 3ನೇ ಕ್ರಮಾಂಕದಲ್ಲೇ ಬ್ಯಾಟಿಂಗ್ ಮಾಡಬಹುದು. ನ್ನು ಆರ್‌ಸಿಬಿ ಕೀ ಬ್ಯಾಟ್ಸ್‌ಮನ್‌ ಗ್ಲೆನ್‌ ಮ್ಯಾಕ್ಸ್‌ವೆಲ್ ಅವರು ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದಾರೆ.

ಆದ್ರೆ, ಆರ್‌ಸಿಬಿ ಟೀಮ್ ತಂಡದ ವೀಕ್‌ನೆಸ್ ಅಂದ್ರೆ ಆರಂಭಿಕ ಆಟಗಾರರ ಮೇಲೆ ಡಿಪೆಂಡ್ ಆಗಿರೋದು. ಜೊತೆಗೆ ಸ್ಪಿನ್ ಬೌಲರ್‌ಗಳ ವೈಫಲ್ಯ ಕೂಡಾ ಆರ್‌ಸಿಬಿಗೆ ಹೊಡೆತ ನೀಡುವ ಚಾನ್ಸಸ್‌ ಇದೆ. ಆದ್ರೂ, ಈ ಬಾರಿ ಆರ್‌ಸಿಬಿ ಟೀಮ್ ಬ್ಯಾಲೆನ್ಸಡ್ ಆಗಿದೆ.

5 ಬಾರಿ ಚಾಂಪಿಯನ್ ಆಗಿ ಮೆರೆದ ಸಿಎಸ್‌ಕೆ ಒಂದು ಕಾಲದ ಟೀಮ್ ಆಫ್ ಡ್ಯಾಡ್ಸ್. ಕ್ಯಾಪ್ಟನ್ ಧೋನಿಯೇ ಟೀಮ್‌ನ ಹೈಲೆಟ್ಸ್. ತಂಡದಲ್ಲಿ ಇಂಜುರಿ ಪ್ರಾಬ್ಲಂ ಒಂದೇ ಟೆನ್ಷನ್. ಆದ್ರೆ, ರಚಿನ್ ರವೀಂದ್ರ ಸೇರ್ಪಡೆ, ಡ್ಯಾರಿಲ್ ಮಿಚೆಲ್ ಎಂಟ್ರಿ, ಶಾರ್ದೂಲ್ ಠಾಕೂರ್ ಕಮ್‌ಬ್ಯಾಕ್ ತಂಡದ ಸ್ಟ್ರೆಂಥ್ ಹೆಚ್ಚಿಸಿದೆ. ಯುವ ಮತ್ತು ಅನುಭವಿ ಆಟಗಾರರ ಸಮ್ಮಿಶ್ರಣವೇ ತಂಡದ ಬಲ. ಋತುರಾಜ್ ಗಾಯಕ್ವಾಡ್, ದೀಪಕ್ ಚಹರ್ ಮತ್ತು ಶಿವಂ ದುಬೇ ಟೀಮ್ ಗೆ ಶಕ್ತಿ ತುಂಬಲಿದ್ದಾರೆ. ಸಿಎಸ್ಕೆ ಪರ ರಚಿನ್ ರವೀಂದ್ರ ಓಪನರ್ ಆಗಿ ಆಡುವುದು ಬಹುತೇಕ ಕನ್ಪರ್ಮ್. ಚೆನ್ನೈ ಸೂಪರ್ ಕಿಂಗ್ಸ್ ತನ್ನ ಮೊದಲ ಪಂದ್ಯವನ್ನು ತವರಿನಲ್ಲಿ ಆಡುತ್ತಿರುವುದು ಪ್ಲಸ್ ಪಾಯಿಂಟ್ ಆಗಲಿದೆ. ಏಕೆಂದರೆ ಸಿಎಸ್​ಕೆ ತಂಡವು ಎಂಎ ಚಿದಂಬರಂ ಮೈದಾನದಲ್ಲಿ ಸೋತಿದಕ್ಕಿಂತ ಗೆದ್ದಿದ್ದೇ ಹೆಚ್ಚು. ಅದರಲ್ಲೂ ಸಿಎಸ್​ಕೆ ತವರಿನಲ್ಲಿ ಆರ್​ಸಿಬಿ ವಿರುದ್ಧ ಸೋತಿರುವುದು ಕೂಡಾ ಕೇವಲ 1 ಬಾರಿಯಷ್ಟೇ.

CSK ಮತ್ತು RCB ಐಪಿಎಲ್ ಇತಿಹಾಸದಲ್ಲಿ 31 ಬಾರಿ ಮುಖಾಮುಖಿಯಾಗಿವೆ. ಚೆನ್ನೈ ಸೂಪರ್ ಕಿಂಗ್ಸ್ 20 ಬಾರಿ ಗೆಲುವು ದಾಖಲಿಸಿದೆ. RCB ಹತ್ತು ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಮಾತ್ರ ಯಾವುದೇ ಫಲಿತಾಂಶ ಕಂಡಿಲ್ಲ.

ಉಭಯ ತಂಡಗಳು ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಇದುವರೆಗೆ 8 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಈ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು 7 ಬಾರಿ ಭರ್ಜರಿ ಜಯ ಸಾಧಿಸಿದೆ. ಇನ್ನು ಆರ್​ಸಿಬಿ ತಂಡ ಗೆದ್ದಿರುವುದು ಕೇವಲ 1 ಬಾರಿ ಮಾತ್ರ. ಅದು ಕೂಡ 2008 ರಲ್ಲಿ. ಇದಾದ ಬಳಿಕ ಚೆನ್ನೈನಲ್ಲಿ ಸಿಎಸ್​ಕೆ ವಿರುದ್ಧ ಆರ್​ಸಿಬಿ ಗೆಲುವಿನ ನಗೆ ಬೀರಿಲ್ಲ. ಇತ್ತ ಉದ್ಘಾಟನಾ ಪಂದ್ಯಕ್ಕೂ ಮುನ್ನವೇ ಈ ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಳ್ಳಲಿರುವ ತಂಡ ಯಾವುದೆಂದು ಸೌತ್ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಭವಿಷ್ಯ ಬೇರೆ ನುಡಿದಿದ್ದಾರೆ. ಎಬಿಡಿ ಪ್ರಕಾರ, ಈ ಬಾರಿ ಕೂಡ ಐಪಿಎಲ್ನಲ್ಲಿ ಭರ್ಜರಿ ಪೈಪೋಟಿ ಕಂಡು ಬರಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಳೆದ ಬಾರಿಯ ಪ್ಲೇಯಿಂಗ್ ಇಲೆವೆನ್ನ ಹೆಚ್ಚಿನ ಆಟಗಾರರನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Sulekha