ಸಿಡಿದೆದ್ರೆ ಮಾತ್ರ CSK ಸೇಫ್ – ಸಂಜು & ರುತುರಾಜ್ ಗೆ ಅಗ್ನಿಪರೀಕ್ಷೆ
ಬೌಲರ್ ಗಳೇ ಇಲ್ಲದ ಟೀಂ ಗೆಲ್ಲುತ್ತಾ?

ಬ್ಯಾಟಿಂಗ್ನಲ್ಲಿ ಟಾಪ್ ಆರ್ಡರ್ ಕಂಪ್ಲೀಟ್ ಹಳ್ಳ ಹಿಡಿದಿದೆ. ಹೋಗ್ಲಿ ಬೌಲಿಂಗ್ನಲ್ಲಾದ್ರೂ ಪ್ರೆಶರ್ ಹಾಕ್ತಾರೆ ಅಂದ್ರೆ ಬ್ರೇಕ್ ಥ್ರ್ಯೂ ತಂದುಕೊಡುವಂಥ ಬೌಲರ್ ಕೂಡ ಇಲ್ಲ. ಕೊನೆಗೆ ಇಡೀ ತಂಡಕ್ಕೆ ಇನ್ಪಿರೇಷನ್ ಆಗಿದ್ದ ಮಹೇಂದ್ರ ಸಿಂಗ್ ಧೋನಿಯೂ ಇಲ್ಲ. ಟೋಟಲಿ ಈ ಸೀಸನ್ನಲ್ಲಿ ಸಿಎಸ್ಕೆ ಫ್ಲ್ಯಾಪ್ ಶೋನಿಂದಲೇ ಸ್ಟಾರ್ಟ್ ಮಾಡಿದೆ. ಹ್ಯಾಟ್ರಿಕ್ ಸೋಲಿನಿಂದಾಗಿ ಸಂಜು ಸ್ಯಾಮ್ಸನ್ ಮತ್ತು ರುತುರಾಜ್ ಗಾಯಕ್ವಾಡ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಚೆನ್ನೈ ಸಿಡಿದೆದ್ರೆ ಮಾತ್ರನೇ ಸೇಫ್ ಆಗೋದು.
ಇದನ್ನೂ ಓದಿ : ಕೊಹ್ಲಿ Vs ಸಂದೀಪ್ IPL ಜಿದ್ದಾಜಿದ್ದಿ – KING ಆಟಕ್ಕೆ ಮತ್ತೆ ವಿಲನ್ ಆಗ್ತಾರಾ?
ಈ ಬಾರಿಯ ಐಪಿಎಲ್ ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್ ಆಗಿದೆ. ಲಾಸ್ಟ್ ಓವರ್ ಡ್ರಾಮಾ, ಲಾಸ್ಟ್ ಬಾಲ್ ಥ್ರಿಲ್ಲರ್, ಗೇಮ್ ಚೇಂಜಿಂಗ್ ಪರ್ಫಾಮೆನ್ಸ್ ಎಲ್ಲವನ್ನೂ ಫ್ಯಾನ್ಸ್ ಎಂಜಾಯ್ ಮಾಡ್ತಿದ್ದಾರೆ. ತಂಡಗಳು ಅಂತಾ ಬಂದಾಗ ಈ ಸೀಸನ್ನಲ್ಲಿ ಇನ್ನೂ ಸೋಲನ್ನೇ ಕಾಣದವರೂ ಇದ್ದಾರೆ ಹಾಗೇ ಗೆಲುವಿನ ರುಚಿಯನ್ನ ನೋಡದವರೂ ಇದ್ದಾರೆ. ಬಾಟಮ್ನಲ್ಲಿ ಇರೋ ಕೆಕೆಆರ್ ಮತ್ತು ಚೆನ್ನೈ ಇದುವರೆಗೂ ಒಂದೇ ಒಂದು ಪಂದ್ಯ ಗೆದ್ದಿಲ್ಲ. ಅತ್ತ ಕೊಲ್ಕತ್ತಾ ತಂಡಕ್ಕೆ ಮಳೆಯಿಂದಾಗಿ ಪಂಜಾಬ್ ವಿರುದ್ಧದ ಮ್ಯಾಚ್ ರದ್ದಾಗಿ ಬೋನಸ್ ಅಂತಾ ಒಂದು ಪಾಯಿಂಟ್ಸ್ ಆದ್ರೂ ಸಿಕ್ಕಿದೆ. ಬಟ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹ್ಯಾಟ್ರಿಕ್ ಸೋಲಿನೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದೆ. ಅದ್ರಲ್ಲೂ ನೆಟ್ ರನ್ ರೇಟ್ ಅಂತೂ ಪಾತಾಳಕ್ಕೆ ಕುಸಿದಿದೆ. ನೆಕ್ಸ್ಟ್ ಪ್ಲೇ ಆಫ್ ರೇಸ್ನಲ್ಲಿ ಉಳೀಬೇಕು ಅಂದ್ರೆ ಪ್ರತೀ ಮ್ಯಾಚಲ್ಲೂ ಮಸ್ಟ್ ವಿನ್ ಗೇಮ್ನಂತೆಯೇ ಆಡ್ಬೇಕಿದೆ.
ನೆಟ್ ರನ್ ರೇಟ್ ಕುಸಿತ.. ಪಾಯಿಂಟ್ಸ್ ಬಂದ್ರಷ್ಟೇ ಪ್ಲೇ ಆಫ್ಸ್ ರೇಸ್!
ಚೆನ್ನೈ ಟೀಂ ಆಡಿರೋದೇ ಮೂರು ಮ್ಯಾಚ್. ಆಲ್ರೆಡಿ ಪ್ಲೇಆಫ್ ಬಗ್ಗೆ ಮಾತಾಡ್ತಿದ್ದಾರೆ ಅನ್ಬೋದು. ರಿಯಾಲಿಟಿ ಏನಂದ್ರೆ ಚೆನ್ನೈಗೆ ಈಗ ಮುಂದಿನ ಪಂದ್ಯಗಳನ್ನ ಗೆಲ್ಲೋದಷ್ಟೇ ಟಾರ್ಗೆಟ್ ಅಲ್ಲ. ನೆಟ್ ರನ್ ರೇಟ್ ಜಾಸ್ತಿ ಮಾಡಿಕೊಳ್ಳೋ ಸವಾಲೂ ಇದೆ. ಯಾಕಂದ್ರೆ ಪಾಯಿಂಟ್ಸ್ ಈಕ್ವಲ್ ಆದಾಗ ನೆಟ್ ರನ್ ರೇಟ್ ಮುಖ್ಯ ಆಗುತ್ತೆ. ಆದ್ರೆ ಚೆನ್ನೈ ತಂಡ ರಾಜಸ್ಥಾನ ಹಾಗೇ ಬೆಂಗಳೂರು ತಂಡಗಳ ವಿರುದ್ಧ ಹೀನಾಯವಾಗಿ ಸೋತಿರೋದ್ರಿಂದ -2.517 ನೆಟ್ ರನ್ ರೇಟ್ ಇದೆ. ಹೀಗಾಗಿ ಮುಂದಿನ ಪಂದ್ಯಗಳನ್ನ ಗೆಲ್ಲೋದ್ರ ಜೊತೆಗೆ ಬಿಗ್ ಮಾರ್ಜಿನ್ನಿಂದ ಗೆಲ್ಲೋ ಅನಿವಾರ್ಯತೆಯೂ ಇದೆ. ಈಗ ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಫೈಟ್ ನಡೆಯಲಿದ್ದು ಇಲ್ಲಾದ್ರೂ ಗೆಲುವಿನ ಖಾತೆ ತೆರೆಯಬೇಕಿದೆ.
ಗೆದ್ರಷ್ಟೇ ಚೆನ್ನೈ ಸೇಫ್!
ಚೆನ್ನೈನ ಚಿದಂಬರಂ ಸ್ಟೇಡಿಯಮ್ ನಲ್ಲಿ ಸಿಎಸ್ಕೆ ವರ್ಸಸ್ ಡೆಲ್ಲಿ ಮ್ಯಾಚ್
ನಾಲ್ಕನೇ ಪಂದ್ಯದಲ್ಲಾದ್ರೂ ಗೆಲ್ಲಲು ಚೆನ್ನೈ ಸೂಪರ್ ಕಿಂಗ್ಸ್ ಪ್ಲ್ಯಾನ್
ಸಂಜು ಸ್ಯಾಮ್ಸನ್, ರುತುರಾಜ್ ಕಡೆಯಿಂದ ಬರ್ತಿಲ್ಲ ಜೊತೆಯಾಟ
ಬೌಲಿಂಗ್ ನಲ್ಲೂ ಮೂರು ಪಂದ್ಯಗಳಲ್ಲೂ ಕಂಟ್ರೋಲ್ ಕಾಣಿಸಿಲ್ಲ
ಕಲೀಲ್ ಅಹ್ಮದ್ ಹೊರತುಪಡಿಸಿದ್ರೆ ಉಳಿದೆಲ್ಲಾ ಬೌಲರ್ಸ್ ದುಬಾರಿ
ಮಹೇಂದ್ರ ಸಿಂಗ್ ಧೋನಿ, ಡೆವಾಲ್ಡ್ ಬ್ರೇವಿಸ್ ಇಂಜುರಿ ಹೊಡೆತ
ಚೆನ್ನೈ ತಂಡಕ್ಕೆ ಆರಂಭದಲ್ಲೇ ಸಾಲು ಸಾಲು ಸವಾಲುಗಳು ಎದುರಾಗ್ತಿದೆ. ಈಗ ಡೆಲ್ಲಿ ವಿರುದ್ಧನಾದ್ರೂ ಗೆಲ್ಲೋಣ ಅಂತಾ ಬರ್ತಾರೆ. ಆದ್ರೆ ಡೆಲ್ಲಿ ಟೀಂ ಈ ಸಲ ಸ್ಟ್ರಾಂಗ್ ಆಗೇ ಪರ್ಫಾಮ್ ಮಾಡ್ತಿದೆ. ಮೊದಲ ಎರಡು ಪಂದ್ಯಗಳನ್ನ ಗೆದ್ದಿದ್ದ ಡೆಲ್ಲಿ ಮೂರನೇ ಮ್ಯಾಚಲ್ಲಿ ಜಸ್ಟ್ ಒಂದು ರನ್ನಿಂದ ಅದೂ ಕೂಡ ಡೇವಿಡ್ ಮಿಲ್ಲರ್ ಅವ್ರ ಓವರ್ ಕಾನ್ಫಿಡೆನ್ಸ್ನಿಂದ ಮ್ಯಾಚ್ ಸೋತಿದ್ರು. ಈಗ ಚೆನ್ನೈ ವಿರುದ್ಧ ಗೆದ್ದು ಮತ್ತೆ ಟ್ರ್ಯಾಕ್ಗೆ ಬರೋಕೆ ಕಾಯ್ತಾ ಇರ್ತಾರೆ.

ನೋಡಿರಿ

