ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಪ್ಟನ್ ಎಂ.ಎಸ್.ಧೋನಿ – ಫೈನಲ್ ಟೂರ್ನಿಗೆ ಮಾಹಿ ರೆಡಿ

ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಪ್ಟನ್ ಎಂ.ಎಸ್.ಧೋನಿ – ಫೈನಲ್ ಟೂರ್ನಿಗೆ ಮಾಹಿ ರೆಡಿ

ಚೆನ್ನೈ ಸೂಪರ ಕಿಂಗ್ಸ್​ ಕ್ಯಾಪ್ಟನ್​ ಎಂ.ಎಸ್.ಧೋನಿ ಅನ್ನೋದು ಬಹುತೇಕ ಪಕ್ಕಾ ಆಗಿದೆ. ಸಿಎಸ್​ಕೆ ಮತ್ತೊಮ್ಮೆ ಟೂರ್ನಿ ಗೆಲ್ಲುತ್ತಾ? ಧೋನಿಯೇ ಚೆನ್ನೈ ಸೂಪರ್​ ಕಿಂಗ್ಸ್​ನ್ನ ಲೀಡ್ ಮಾಡಬಹುದಾ? ಎಂಬ ಬಗ್ಗೆ ಚರ್ಚೆ ಜೋರಾಗಿಯೇ ಸಾಗುತ್ತಿದೆ.

ಇದನ್ನೂ ಓದಿ: ರೋಹಿತ್ ಶರ್ಮಾ ಕ್ಯಾಪ್ಟನ್ಸಿ ಕಮಾಲ್- 1 ಕಲ್ಲು 2 ಹಕ್ಕಿ ಹೊಡೆದ HITMAN!

ಕ್ರಿಕೆಟ್ ಅಭಿಮಾನಿಗಳನ್ನ ಇನ್ನೊಂದು ಪ್ರಶ್ನೆ ಕೂಡ ಕಾಡ್ತಾ ಇದೆ. ಈ ಬಾರಿಯ ಐಪಿಎಲ್​​ನಲ್ಲಿ ಮಹೇಂದ್ರ ಸಿಂಗ್ ಧೋನಿ ಆಡ್ತಾರಾ? ಇಲ್ವಾ? ಅನ್ನೋದು. ಎಂ.ಎಸ್​.ಡಿ ಈ ಬಾರಿಯೂ ಆಡೋದು ಆಲ್​ಮೋಸ್ಟ್ ಗ್ಯಾರಂಟಿ. ಯಾಕಂದ್ರೆ ಧೋನಿ ಈಗಾಗ್ಲೇ ನೆಟ್ ಪ್ರಾಕ್ಟೀಸ್​ ಕೂಡ ಶುರು ಮಾಡಿದ್ದಾರೆ. ಈ ಹಿಂದೆಲ್ಲಾ ಪ್ರತಿ ಬಾರಿಯೂ ಐಪಿಎಲ್​ ಟೂರ್ನಿ ಆರಂಭವಾಗೋ ಮೂರು ತಿಂಗಳ ಮುನ್ನವೇ ಧೋನಿ ನೆಟ್​ಪ್ರಾಸ್ಟೀಸ್​ಗೆ ಇಳಿತಾ ಇದ್ರು. ಈ ಬಾರಿಯೂ ಅಷ್ಟೇ, ಮೂರು ತಿಂಗಳ ಮುನ್ನವೇ ನೆಟ್​ಪ್ರಾಕ್ಟೀಸ್ ಶುರು ಮಾಡಿಕೊಂಡಿದ್ದಾರೆ. ಕಳೆದ ಐಪಿಎಲ್​​ ವೇಳೆ ಧೋನಿಯ ಕಾಲಿಗೆ ಇಂಜ್ಯೂರಿಯಾಗಿತ್ತು. ಬಳಿಕ ಮಾಹಿ ಸರ್ಜರಿಗಾಗೂ ಒಳಗಾಗಿದ್ರು. ಚೇತರಿಸಿಕೊಂಡ ಬಳಿಕ ಇಷ್ಟು ದಿನ ಫಿಟ್ನೆಸ್​ಗಾಗಿ ಜಿಮ್​ನಲ್ಲಿ ಸಾಕಷ್ಟು ವರ್ಕೌಟ್​ ಮಾಡ್ತಾ ಇದ್ರು. ಇದೀಗ ಫಿಸಿಕಲಿ ಫುಲ್ ಫಿಟ್ ಆಗಿರೋ ಧೋನಿ ನೆಟ್​​ಪ್ರಾಕ್ಟೀಸ್ ಕೂಡ ಆರಂಭಿಸಿದ್ದಾರೆ. ಧೋನಿಯ ನೆಟ್​​ಪ್ರಾಕ್ಟೀಸ್​​ನ ಲೇಟೆಸ್ಟ್ ಫೋಟೋ ಈಗ ವೈರಲ್ ಆಗಿದೆ.

ಕಳೆದ ಒಂದು ವರ್ಷದಲ್ಲಿ ಇದೇ ಫಸ್ಟ್ ಧೋನಿ ನೆಟ್ಸ್​​​ನಲ್ಲಿ ಕಾಣಿಸಿಕೊಂಡಿರೋದು. ಮೋಸ್ಟ್ಲಿ ಈ ಬಾರಿಯ ಐಪಿಎಲ್​​ ಧೋನಿಗೆ ಕೊನೆಯ ಟೂರ್ನಿಯಾಗುವ ಸಾಧ್ಯತೆ ಇದೆ. ಈಗಾಗ್ಲೇ ಒಟ್ಟು ಐದು ಬಾರಿ ಚೆನ್ನೈ ಸೂಪರ್​​ ಕಿಂಗ್ಸ್​​ನ್ನ ಚಾಂಪಿಯನ್​ ಮಾಡಿರೋ ಎಂಎಸ್​ಡಿ ದಾಖಲೆಯ 6ನೇ ಬಾರಿಗೆ ಟ್ರೋಫಿ ಗೆದ್ದು ಐಪಿಎಲ್​​ಗೆ ಗುಡ್​​ಬೈ ಹೇಳುವ ಪ್ಲ್ಯಾನ್​​ನಲ್ಲಿದ್ದಾರೆ ಅಂತಾ ಹೇಳಲಾಗ್ತಿದೆ. ಸದ್ಯ ಧೋನಿಗೆ 42 ವರ್ಷ ವಯಸ್ಸು. ಒಂದು ವೇಳೆ ಈ ಬಾರಿಯ ಐಪಿಎಲ್​​ನಲ್ಲಿ ಧೋನಿ ಆಡ್ತಾರೆ ಅಂದ್ರೆ ಕ್ಯಾಪ್ಟನ್​​ ಆಗಿಯೂ ಸಿಎಸ್​​ಕೆಯನ್ನ ಲೀಡ್ ಮಾಡೋದು ಗ್ಯಾರಂಟಿ. ಅಂತೂ ಐಪಿಎಲ್​​ನಲ್ಲಿ ಮತ್ತೊಮ್ಮೆ ಧೋನಿಯೇ ಸ್ಟಾರ್​ ಆಫ್ ಅಟ್ರಾಕ್ಷನ್​ ಆಗಿರಲಿದ್ದಾರೆ.

Sulekha