ಲಕ್ನೋ ವಿರುದ್ಧ ಚೆನ್ನೈಗೆ ಹೀನಾಯ ಸೋಲು – CSK ಪ್ಲೇಆಫ್ ಹಾದಿಯ ಕನಸು ಭಗ್ನ

ಲಕ್ನೋ ವಿರುದ್ಧ ಚೆನ್ನೈಗೆ ಹೀನಾಯ ಸೋಲು – CSK ಪ್ಲೇಆಫ್ ಹಾದಿಯ ಕನಸು ಭಗ್ನ

ಲಕ್ನೋ ಸೂಪರ್ ಜೈಂಟ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 7 ವಿಕೆಟ್​ಗಳಿಂದ ಸೋಲಿಸಿ ಭರ್ಜರಿ ಜಯ ಸಾಧಿಸಿದೆ. ಚೆನ್ನೈ ತಂಡಕ್ಕೆ ಇದು ಹೀನಾಯ ಸೋಲು. ಚೆನ್ನೈ ತಂಡದ ಬೌಲರ್‌ಗಳಂತೂ ಲಕ್ನೋ ಬ್ಯಾಟರ್ಸ್ ಪ್ರತಾಪಕ್ಕೆ ಬಳಲಿ ಬೆಂಡಾಗಿ ಹೋದರು.

ಇದನ್ನೂ ಓದಿ:12 ಮ್ಯಾಚ್.. 8 ತಂಡಗಳ ಫೈಟ್ – RCB & GT ಹಾದಿ ಕ್ಲಿಯರ್

ಲಕ್ನೋ ಸೂಪರ್ ಜೈಂಟ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲೂ ಆರ್ಭಟ ತೋರಿತು. ಲಕ್ನೋ ತಂಡದ ಸಂಘಟಿತ ಪ್ರದರ್ಶನಕ್ಕೆ ಚೆನ್ನೈ ತಂಡ ಸೋತು ಸುಣ್ಣವಾಯಿತು. ಲಕ್ನೋ ತಂಡಕ್ಕೆ ಈ ಆವೃತ್ತಿಯಲ್ಲಿ ಸಿಕ್ಕ 4ನೇ ಗೆಲುವು ಇದಾಗಿದೆ. ಇತ್ತ ಲಕ್ನೋ ವಿರುದ್ಧ ಸೋತ ಸಿಎಸ್​ಕೆಗೆ ಪ್ಲೇಆಫ್ ಹಾದಿ ಮತ್ತಷ್ಟು ಕಠಿಣವಾಗಿದ್ದು, ಉಳಿದೆರಡು ಪಂದ್ಯಗಳನ್ನು ಗೆದ್ದರೂ ಅದು ಪ್ಲೇಆಫ್ ತಲುಪುವುದು ಕಷ್ಟಕರವಾಗಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸಿಎಸ್​ಕೆ, ಅಷ್ಟೇನು ಉತ್ತಮ ಸ್ಕೋರ್ ಗಳಿಸಿರಲಿಲ್ಲ. ಚೆನ್ನೈ ತಂಡದ ಪರ ಕಾರ್ತಿಕ್ ಶರ್ಮಾ ಅವರೊಬ್ಬರೇ ಅರ್ಧಶತಕ ಸಿಡಿಸಿದರು. ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಸಿಎಸ್‌ಕೆ ಪರ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ 20 ರನ್ ಗಳಿಸಿ ಔಟಾದರೆ, ನಾಯಕ ರುತುರಾಜ್ ಗಾಯಕ್ವಾಡ್ ಕೂಡ 13 ರನ್​ಗಳಿಗೆ ಸುಸ್ತಾದರು. ಕಳೆದ ಪಂದ್ಯದಲ್ಲಿ 13 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದ ಉರ್ವಿಲ್ ಪಟೇಲ್ ಕೇವಲ 6 ರನ್​ಗಳಿಗೆ ಸುಸ್ತಾದರು. ಕಾರ್ತಿಕ್ ಅರ್ಧಶತಕ ತಂಡದ ಪರ ಏಕಾಂಗಿ ಹೋರಾಟ ನೀಡಿದ ಕಾರ್ತಿಕ್ ಶರ್ಮಾ 35 ಎಸೆತಗಳಲ್ಲಿ ಸಿಕ್ಸರ್ ಬಾರಿಸುವ ಮೂಲಕ ಅರ್ಧಶತಕ ಬಾರಿಸಿ, 71 ರನ್​ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಡೆವಾಲ್ಡ್ ಬ್ರೆವಿಸ್ 25 ರನ್ ಗಳಿಸಿ ಔಟಾದರೆ, ಶಿವಂ ದುಬೆ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ 32 ರನ್ ಮತ್ತು ಪ್ರಶಾಂತವೀರ್ 13 ರನ್ ಬಾರಿಸಿದರು.

ಚೆನ್ನೈ ತಂಡ ನೀಡಿದ 188ರನ್‌ಗಳ ಗುರಿ ಬೆನ್ನಟ್ಟಿದ ಲಕ್ನೋ ತಂಡದ ಆರಂಭಿಕರು ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಬಾರಿಸಿದರು. ಮಿಚೆಲ್ ಮಾರ್ಷ್ ಮತ್ತು ಜೋಶ್ ಇಂಗ್ಲಿಸ್ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದರು. ಇಬ್ಬರು ಆಟಗಾರರು ಮೊದಲ ವಿಕೆಟ್‌ಗೆ 135 ರನ್‌ಗಳನ್ನು ಸೇರಿಸುವ ಮೂಲಕ ಪಂದ್ಯವನ್ನು ಗೆಲುವಿನ ದಡ ಸೇರಿಸಿದರು. ಮಿಚೆಲ್ ಮಾರ್ಷ್ 38 ಎಸೆತಗಳಲ್ಲಿ 9 ಬೌಂಡರಿ ಮತ್ತು 7 ಸಿಕ್ಸರ್‌ಗಳು ಸೇರಿದಂತೆ 236.84 ಸ್ಟ್ರೈಕ್ ರೇಟ್‌ನಲ್ಲಿ 90 ರನ್ ಗಳಿಸಿ ಔಟಾದರು. ಇಂಗ್ಲಿಸ್ 36 ರನ್‌ಗಳ ಕೊಡುಗೆ ನೀಡಿದರು. ನಂತರ ನಿಕೋಲಸ್ ಪೂರನ್ 17 ಎಸೆತಗಳಲ್ಲಿ ಅಜೇಯ 32 ರನ್ ಗಳಿಸಿ, ಲಕ್ನೋ 16.4 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ ಗುರಿಯನ್ನು ತಲುಪಲು ಸಹಾಯ ಮಾಡಿದರು.

Sulekha

Leave a Reply

Your email address will not be published. Required fields are marked *