ಪ್ಯಾಕೆಟ್‌ನಲ್ಲಿ ಒಂದೇ ಒಂದು ಬಿಸ್ಕೆಟ್‌ ಕಡಿಮೆ ಕೊಟ್ಟ ಕಂಪನಿ – 1 ಲಕ್ಷ ರೂಪಾಯಿ ಪರಿಹಾರ ಪಡೆದ ಗ್ರಾಹಕ!

ಪ್ಯಾಕೆಟ್‌ನಲ್ಲಿ ಒಂದೇ ಒಂದು ಬಿಸ್ಕೆಟ್‌ ಕಡಿಮೆ ಕೊಟ್ಟ ಕಂಪನಿ – 1 ಲಕ್ಷ ರೂಪಾಯಿ ಪರಿಹಾರ ಪಡೆದ ಗ್ರಾಹಕ!

ಅಂಗಡಿಗಳಲ್ಲಿ ಯಾವುದಾದರೂ ತಿಂಡಿ ತಿನಿಸುಗಳನ್ನು ಖರೀದಿಸಿದರೆ ಅದನ್ನು ನಾವು ಅಷ್ಟೊಂದಾಗಿ ಪರೀಕ್ಷಿಸಲು ಹೋಗುವುದಿಲ್ಲ. ಹೆಚ್ಚೆಂದರೆ ಎಕ್ಸ್‌ಪೆರಿ ಡೇಟ್ ಆಗಿದ್ಯಾ ಅಂತಾ ಪರೀಕ್ಷಿಸುತ್ತಾರೆ. ಪ್ಯಾಕ್‌ನಲ್ಲಿ ತಿಂಡಿ ಹೆಚ್ಚಿದ್ಯಾ. ಕಡಿಮೆ ಇದ್ಯಾ ಅಂತಾ ಪರೀಕ್ಷಿಸಲು ಹೋಗುವುದಿಲ್ಲ. ಇಲ್ಲೊಬ್ಬ ವ್ಯಕ್ತಿ ಬೀದಿ ನಾಯಿಗಳಿಗೆ ಆಹಾರ ನೀಡಲೆಂದು ಬಿಸ್ಕೆಟ್‌ ಪ್ಯಾಕ್‌ ಒಂದನ್ನು ಖರೀದಿಸಿದ್ದಾನೆ. ಪೊಟ್ಟಣ ತೆರೆದಾಗ ಒಂದು ಬಿಸ್ಕತ್ತು ಕಾಣೆಯಾಗಿದೆ ಎಂದು ಕೋರ್ಟ್‌ ಮೆಟ್ಟಿಲೇರಿದ್ದಾನೆ!

ಏನಿದು ವಿಚಿತ್ರ ಪ್ರಕರಣ?

ಚೆನ್ನೈನ ವ್ಯಕ್ತಿಯೊಬ್ಬ ಬೀದಿ ನಾಯಿಗಳಿಗೆ ಆಹಾರ ನೀಡಲು ಸನ್ ಫೀಸ್ಟ್ ಮಾರಿ ಲೈಟ್ ಬಿಸ್ಕೆಟ್ ಪ್ಯಾಕೆಟ್ ಖರೀದಿಸಿದ್ದಾನೆ. ಪೊಟ್ಟಣ ತೆರೆದಾಗ ಒಂದು ಬಿಸ್ಕತ್ತು ಕಾಣೆಯಾಗಿತ್ತು. ಅಂಗಡಿಗೆ ಹೋಗಿ ವಿಚಾರಿಸಿದಾಗ ಸರಿಯಾದ ಉತ್ತರ ಸಿಗಲಿಲ್ಲ. ಅವರು ನೇರವಾಗಿ ಐಟಿಸಿ ಕಂಪನಿಯನ್ನು ಸಂಪರ್ಕಿಸಿದ್ದಾನೆ. ಅಲ್ಲೂ.. ಸೂಕ್ತ ಉತ್ತರ ಸಿಗದ ಕಾರಣ ಗ್ರಾಹಕ ವ್ಯವಹಾರಗಳ ಇಲಾಖೆಗೆ ದೂರು ನೀಡಿದ್ದನು. ಇದೀಗ ಆತನಿಗೆ ಈ ಪ್ರಕರಣದಲ್ಲಿ ಜಯ ಸಿಕ್ಕಿದ್ದು, ಕೋರ್ಟ್‌ ಕಂಪನಿಗೆ ಗ್ರಾಹನಿಗೆ ಭಾರಿ ಮೊತ್ತದ ಪರಿಹಾರ ನೀಡಿದೆ.

ಇದನ್ನೂ ಓದಿ: ಪ್ರಿಯಕರನ ಜೊತೆ ಮದುವೆಯಾಗಿದ್ದಕ್ಕೆ ಹೆತ್ತವರ ಸಿಟ್ಟು – ಮಗಳು ಬದುಕಿದ್ದಾಗಲೇ ಅಂತ್ಯಸಂಸ್ಕಾರ ಮಾಡಿ ಪಿಂಡ ಬಿಟ್ಟ ಹೆತ್ತವರು

ಪ್ರಕರಣ ನಡೆದಿದ್ದು ಯಾವಾಗ?

ಈ ಪ್ರಕರಣ ನಡೆದು ಸುಮಾರು ಎರಡು ವರ್ಷಗಳೇ ಕಳೆದಿವೆ. ಚೆನ್ನೈನ ಎಂಎಂಡಿಎ ಮಾಥೂರ್‌ನ ಪಿ ದಿಲ್ಲಿಬಾಬು ಎಂಬಾತ ಡಿಸೆಂಬರ್ 2021 ರಲ್ಲಿ ಈ ಬಿಸ್ಕತ್​ ಪ್ಯಾಕೆಟ್‌ ಖರೀದಿಸಿದ್ದ. ಪ್ಯಾಕೆಟ್‌ನಲ್ಲಿ 16 ಬಿಸ್ಕತ್ತುಗಳಿವೆ ಎಂದು ಹೇಳಲಾಗಿದೆ. ಆದರೆ ಪ್ಯಾಕೆಟ್‌ ಒಪನ್‌ ಮಾಡಿ ಎಣಿಸಿ ನೋಡಿದಾಗ ಒಳಗೆ ಕೇವಲ 15  ಬಿಸ್ಕೆಟ್‌ ಇತ್ತು. ಹೀಗಾಗಿ ಆತ ಗ್ರಾಹಕರ ವೇದಿಕೆಗೆ ದೂರು ನೀಡಿದ್ದಾನೆ.  ಕಂಪನಿಯು ಜನರನ್ನು ಹೇಗೆ ವಂಚಿಸುತ್ತದೆ ಎಂಬುದನ್ನು ನೀಡಿರುವ ದೂರಿನಲ್ಲಿ ದಿಲ್ಲಿಬಾಬು ಮನವರಿಕೆ ಮಾಡಿಕೊಟ್ಟಿದ್ದಾನೆ.

ದೂರಿನಲ್ಲಿ ಏನಿದೆ?

ಒಂದು ಬಿಸ್ಕತ್​​ ತಯಾರಿಕೆಯ ಬೆಲೆ 75 ಪೈಸೆ ಎಂದು ಅಂದಾಜಿಸಬಹುದು. ಇದರ ಪ್ರಕಾರ ಕಂಪನಿ ದಿನಕ್ಕೆ 50 ಲಕ್ಷ ಬಿಸ್ಕತ್ ಪ್ಯಾಕೆಟ್​​ ತಯಾರಿಸುತ್ತಿದ್ದರೆ. ಪ್ರತಿ ಪ್ಯಾಕೆಟ್ ಗೆ ಒಂದು ಬಿಸ್ಕತ್ ದರದಲ್ಲಿದಿನಕ್ಕೆ 29 ಲಕ್ಷ ರೂಪಾಯಿ ಉಳಿತಾಯವಾಗುತ್ತಿದೆ. ಕಂಪನಿಯವರು ಗ್ರಾಹಕರಿಂದ ಹಗಲು ದರೋಡೆ ಮಾಡುತ್ತಿದ್ದು, ಹಣ ದೋಚುತ್ತಿದ್ದಾರೆ ಎಂದು ದೆಹಲಿ ಬಾಬು ದೂರಿನಲ್ಲಿ ಉಲ್ಲೇಖಿಸಿದ್ದರು. ಇದೀಗ ಕೋರ್ಟ್‌ ಈ ಪ್ರಕರಣವನ್ನು ಇತ್ಯರ್ಥ ಮಾಡಿದೆ.

ಕಂಪನಿಗೆ ಪರಿಹಾರ ಕೊಟ್ಟಿದ್ದೆಷ್ಟು?

ಈ ಬಗ್ಗೆ ತನಿಖೆ ನಡೆಸಿದ ಗ್ರಾಹಕರ ವೇದಿಕೆ ಕಂಪನಿಯಿಂದ ವಿವರಣೆ ಕೇಳಿದೆ. ಪ್ಯಾಕಿಂಗ್ ಬಿಸ್ಕತ್ತುಗಳ ಸಂಖ್ಯೆಯನ್ನು ಆಧರಿಸಿಲ್ಲ, ಆದರೆ ಅವುಗಳ ತೂಕವನ್ನು ಆಧರಿಸಿದೆ ಎಂದು ಕಂಪನಿ ಸಬೂಬು ಹೇಳಿದೆ. ಹಾಗಾಗಿಯೂ 15 ಬಿಸ್ಕತ್ ತೂಕ ಮಾಡಿದಾಗ 74 ಗ್ರಾಂ ಇರಬೇಕು. ಆದರೆ ಕಂಪನಿಯು ಪ್ಯಾಕೆಟ್‌ನಲ್ಲಿ 76 ಗ್ರಾಂ ಎಂದು ನಮೂದಿಸಿದೆ. ಇದರೊಂದಿಗೆ ಕಂಪನಿಯ ಉತ್ತರವೂ ಸಮಂಜಸವಾಗಿಲ್ಲ. ವಿಚಾರಣೆ ನಡೆಸಿದ ಗ್ರಾಹಕ ನ್ಯಾಯಾಲಯವು ಕಂಪನಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿ, ಕಡಿಮೆ ಪ್ಯಾಕ್ ಬಿಸ್ಕೆಟ್ ಮಾರಾಟವನ್ನು ತಕ್ಷಣ ನಿಲ್ಲಿಸುವಂತೆ ಆದೇಶಿಸಿದೆ.

suddiyaana