ಮಹಿಳೆಯ ಬ್ಯಾಗ್ ನಲ್ಲಿತ್ತು 22 ಜೀವಂತ ಹಾವುಗಳು, 1 ಗೋಸುಂಬೆ!

ಮಹಿಳೆಯ ಬ್ಯಾಗ್ ನಲ್ಲಿತ್ತು 22 ಜೀವಂತ ಹಾವುಗಳು, 1 ಗೋಸುಂಬೆ!

ಚೆನ್ನೈ ಏರ್​ಪೋರ್ಟ್​ನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಬ್ಯಾಗ್ ಅನ್ನು ಸಿಬ್ಬಂದಿ ತಪಾಸಣೆಗೆ ಒಳಪಡಿಸಿದಾಗ 22 ಜೀವಂತ ಹಾವುಗಳು, 1 ಗೋಸುಂಬೆ ಪತ್ತೆಯಾಗಿವೆ.

ಮಲೇಷ್ಯಾದಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಮಹಿಳಾ ಪ್ರಯಾಣಿಕರೊಬ್ಬರು ಬಂದಿಳಿದಿದ್ದಾರೆ. ಈ ವೇಳೆ ಆಕೆಯ ಬ್ಯಾಗ್ ಅನುಮಾನಸ್ಪದ ರೀತಿಯಲ್ಲಿ ಕಂಡುಬಂದಿದೆ. ಹೀಗಾಗಿ ಕಸ್ಟಮ್ ಇಲಾಖೆಯ ಅಧಿಕಾರಿಗಳು ಮಹಿಳೆಯ ಬ್ಯಾಗ್ ತಪಾಸಣೆಗೆ ಒಳಪಡಿಸಿದ್ದಾರೆ. ಬ್ಯಾಗ್ ತೆರೆಯುತ್ತಿದ್ದಂತೆ ಒಂದೊಂದೇ ಹಾವುಗಳು ಹೊರಬರಲು ಆರಂಭಿಸಿವೆ. ಇದನ್ನು ಕಂಡ ಅಧಿಕಾರಿಗಳು ಶಾಕ್ ಆಗಿದ್ದಾರೆ.

ಇದನ್ನೂ ಓದಿ: ವಿಶ್ವ ನಕ್ಷೆಯಿಂದ ಕಣ್ಮರೆಯಾಗುತ್ತವಾ ಈ ರಾಷ್ಟ್ರಗಳು? – 2100 ರಲ್ಲಿ ಭಾರತದ ಕತೆಯೇನು?

ಬ್ಯಾಗ್ ತಪಾಸಣೆ ವೇಳೆ ಪತ್ತೆಯಾದ  22 ಜೀವಂತ ಹಾವುಗಳು ಈ  ಹಾವು ವಿಷಕಾರಿಯಾಗಿರುವುದರಿಂದ ಜನರು ಅದರಿಂದ ದೂರವೇ ಇರುತ್ತಾರೆ. ಇತ್ತೀಚಿನ ದಿನಗಳಲ್ಲಿ ವಿಷದ ಹಾವು  ಖರೀದಿ ಹಾಗೂ ಮಾರಾಟ ಎಲ್ಲೆಡೆ ಜೋರಾಗಿಯೇ ನಡೆಯುತ್ತಿದೆ. ಮಹಿಳೆಯೂ ಕೂಡ ಮಾರಾಟ ಮಾಡಲು ಈ ಹಾವುಗಳನ್ನು ಅಕ್ರಮವಾಗಿ ಸಾಗಿಸುತ್ತಿರಬಹುದು ಎಂದು ಶಂಕಿಸಲಾಗಿದೆ. ಇದೀಗ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಾಹಿತಿ ಪ್ರಕಾರ ಎಲ್ಲಾ ಹಾವುಗಳು ವಿವಿಧ ಜಾತಿಯ ಹಾವುಗಳಾಗಿದ್ದು, ಅವುಗಳನ್ನು ವಿವಿಧ ಪ್ಲಾಸ್ಟಿಕ್ ಪಾತ್ರೆಗಳಲ್ಲಿ ತರಲಾಗಿದೆ. ಕಸ್ಟಮ್ಸ್​ ಅಧಿಕಾರಿಗಳು ನೀಡಿದ ಮಾಹಿತಿಯಲ್ಲಿ, ಮಹಿಳೆ ಏಪ್ರಿಲ್ 28 ರಂದು ಮಲೇಷ್ಯಾದ ರಾಜಧಾನಿ ಕೌಲಾಲಂಪುರದಿಂದ AK 13 ಸಂಖ್ಯೆಯ ವಿಮಾನದಿಂದ ಭಾರತದ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು ಎಂದು ಹೇಳಲಾಗಿದೆ.

ಬ್ಯಾಗ್‌ನಿಂದ ಹಾವುಗಳು ಹೊರಬರುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ. ಕಸ್ಟಮ್ಸ್ ಇಲಾಖೆ ತಂಡವು ಕಸ್ಟಮ್ಸ್ ಆಕ್ಟ್ 1962 ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 ರ ಅಡಿಯಲ್ಲಿ ಚೀಲಗಳನ್ನು ಪರಿಶೀಲಿಸುವಾಗ ಪತ್ತೆಯಾದ 22 ಜೀವಂತ ಹಾವುಗಳೊಂದಿಗೆ ಗೋಸುಂಬೆಯನ್ನು ವಶಪಡಿಸಿಕೊಂಡಿದೆ ಎಂದು ಮಾಹಿತಿ ನೀಡಿದೆ.

suddiyaana