ಸಫಾರಿ ಪ್ರಿಯರಿಗೆ ಗುಡ್ ನ್ಯೂಸ್ – ಫೆಬ್ರವರಿಯಿಂದ ಚೀತಾ ಪ್ರವಾಸೋದ್ಯಮ!

ಸಫಾರಿ ಪ್ರಿಯರಿಗೆ ಗುಡ್ ನ್ಯೂಸ್ – ಫೆಬ್ರವರಿಯಿಂದ ಚೀತಾ ಪ್ರವಾಸೋದ್ಯಮ!

ಭೋಪಾಲ್: ನಮೀಬಿಯಾದಿಂದ  ತರಿಸಲಾದ ಚಿರತೆಗಳು ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಆರೋಗ್ಯವಾಗಿವೆ. ಈ ಹಿನ್ನೆಲೆಯಲ್ಲಿ 2023ರ ವರ್ಷದ ಫೆಬ್ರವರಿಯಿಂದ ಕುನೊ ಪಾರ್ಕ್‌ನಲ್ಲಿ ಚೀತಾ ಪ್ರವಾಸೋದ್ಯಮ ಆರಂಭಿಸುವ ಸಾಧ್ಯತೆ ಇದೆ ಎಂದು ಕುನೊ ರಾಷ್ಟ್ರೀಯ ಉದ್ಯಾನವನದ ವಿಭಾಗೀಯ ಅರಣ್ಯಾಧಿಕಾರಿ ಪ್ರಕಾಶ್ ಕುಮಾರ್ ವರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ: ಬೇಲಿ ಹಾರಿ, ಕಾರಿನಲ್ಲಿದ್ದವನ ಮೇಲೆ ಎರಗಿದ ಚಿರತೆ – ಜೀವ ಉಳಿದಿದ್ದೇ ಹೆಚ್ಚು!

ಈ ಬಗ್ಗೆ ಮಾತನಾಡಿರುವ ಪ್ರಕಾಶ್ ಕುಮಾರ್, ಚೀತಾಗಳನ್ನು ಹಂತ-ಹಂತವಾಗಿ ದೊಡ್ಡ ಆವರಣಕ್ಕೆ ಬಿಡಲಾಗಿದೆ. ಈಗ ಅವು ವಾತಾವರಣಕ್ಕೆ ಒಗ್ಗಿಕೊಂಡಿದ್ದು, ಆರೋಗ್ಯಕರವಾಗಿವೆ. ಎಲ್ಲಾ ಚಿರತೆಗಳು ಸಂಪೂರ್ಣವಾಗಿ ಫಿಟ್ ಆಗಿದ್ದು ಮುಕ್ತವಾಗಿ ಬೇಟೆಯಾಡುತ್ತಿವೆ. ಆದರೆ ದೊಡ್ಡ ಆವರಣದಲ್ಲಿರುವ ಚಿರತೆಗಳನ್ನು ತೆರೆದ ಅರಣ್ಯಕ್ಕೆ ಬಿಡುವ ದಿನಾಂಕ ಇನ್ನೂ ಫಿಕ್ಸ್ ಆಗಿಲ್ಲ. ಚೀತಾ ಟಾಸ್ಕ್ ಫೋರ್ಸ್, ಚಿರತೆ ಪರಿಚಯಿಸುವ ಯೋಜನೆಯ ಮೇಲ್ವಿಚಾರಣೆಯ ತಜ್ಞರ ಗುಂಪು ಹಾಗೂ ಮಧ್ಯಪ್ರದೇಶ ಸರ್ಕಾರ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳಲಿದೆ ಎಂದು ಹೇಳಿದ್ದಾರೆ.

2023ರ ಫೆಬ್ರವರಿಯಿಂದ ಚೀತಾ ಪ್ರವಾಸೋದ್ಯಮ ಆರಂಭವಾಗುವ ನಿರೀಕ್ಷೆಯನ್ನು ಅಧಿಕಾರಿಗಳು ಹೊಂದಿದ್ದಾರೆ. ಅದಕ್ಕೆ ಪೂರಕ ಸಿದ್ಧತೆಗಳೂ ಬರದಲ್ಲಿ ಸಾಗುತ್ತಿವೆ. ಎಲ್ಲವೂ ಅಂದುಕೊಂಡಂತೆ ಆದ್ರೆ, 75 ವರ್ಷಗಳ ಬಳಿಕ ಕಾಡಿನಲ್ಲಿ ಚೀತಾಗಳು ಕಾಣಿಸಿಕೊಳ್ಳಲಿವೆ. ಅಲ್ಲದೇ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಲಿದೆ ಎಂದು ಅವರು ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

ಕಳೆದ ನವೆಂಬರ್ 5 ರಂದು ಎಲ್ಟನ್ ಮತ್ತು ಫ್ರೆಡ್ಡಿ ಗಂಡು ಚೀತಾ, ನವೆಂಬರ್ 18ರಂದು ಒಬಾನ್ ಗಂಡು ಚೀತಾ, ನವೆಂಬರ್ 27 ರಂದು ಆಶಾ ಮತ್ತು ಟಿಬಿಲಿಸಿ ಹೆಣ್ಣು ಚೀತಾ, ನವೆಂಬರ್ 28 ರಂದು ಸಿಯಾಯಾ, ಸವನ್ನಾ ಹಾಗೂ ಸಾಶಾ ಹೆಣ್ಣು ಚಿರತೆಗಳನ್ನ ದೊಡ್ಡ ಆವರಣಕ್ಕೆ ಬಿಡಲಾಗಿದೆ.

suddiyaana