ಚೆಕ್ ಬೌನ್ಸ್ ಕೇಸ್ – ನಿರ್ದೇಶಕ ಗುರುಪ್ರಸಾದ್ ಬಂಧನ

ಚೆಕ್ ಬೌನ್ಸ್ ಕೇಸ್ – ನಿರ್ದೇಶಕ ಗುರುಪ್ರಸಾದ್ ಬಂಧನ

ಮಠ, ಎದ್ದೇಳು ಮಂಜುನಾಥ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿರುವ  ನಿರ್ದೇಶಕ ಗುರುಪ್ರಸಾದ್ ಅವರನ್ನು ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ  ಬೆಂಗಳೂರಿನ ಗಿರಿನಗರ ಪೊಲೀಸರು ಬಂಧಿಸಿದ್ದಾರೆ.

ಶ್ರೀನಿವಾಸ್ ಎನ್ನುವವರ ಜೊತೆ ಗುರುಪ್ರಸಾದ್ ಹಣಕಾಸು ವ್ಯವಹಾರ ನಡೆಸಿದ್ದರು. ಗುರುಪ್ರಸಾದ್ ಅವರು ನೀಡಿದ್ದ ಚೆಕ್ ಬೌನ್ಸ್ ಆಗಿದೆ. ಗುರುಪ್ರಸಾದ್ ವಿರುದ್ಧ ವಂಚನೆ ಆರೋಪದಡಿ ಕೇಸ್ ದಾಖಲಾಗಿತ್ತು. ಈ ಸಂಬಂಧ ಕೋರ್ಟ್ ಮುಂದೆ ಹಾಜರಾಗದಿದ್ದಕ್ಕೆ ಎನ್ ಐ ಆಕ್ಟ್ ಅಡಿ ಜಾಮೀನು ರಹಿತ ವಾರಂಟ್ ಜಾರಿಗೊಳಿಸಲಾಗಿತ್ತು. ವಾರಂಟ್ ಪಡೆದ ಗಿರಿನಗರ ಪೊಲೀಸರು ಇಂದು ವಂಚನೆ ಹಾಗೂ ಮೋಸ ಮಾಡಿದ ಪ್ರಕರಣದ ಅಡಿಯಲ್ಲಿ ಗುರುಪ್ರಸಾದ್ ಅವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದೀಗ ಜಾಮೀನು ಮೂಲಕ ಗುರುಪ್ರಸಾದ್ ಹೊರ ಬಂದಿದ್ದಾರೆ.

ಇದನ್ನೂ ಓದಿ: ಬಾಲಿವುಡ್ ಅಂಗಳಕ್ಕೆ ಹಾರಿದ ಕಾಂತಾರ ಸಿನಿಮಾದ ‘ಸಿಂಗಾರ ಸಿರಿ’ – ವಿವೇಕ್ ಅಗ್ನಿಹೋತ್ರಿ ಸಿನಿಮಾದಲ್ಲಿ ಸಪ್ತಮಿ ಗೌಡ 

ಈ ಕುರಿತು ದೂರುದಾರ  ಶ್ರೀನಿವಾಸ್ ಮಾತನಾಡಿದ್ದು, “2015 ರಲ್ಲಿ ನಾನು ಅಭಿಮಾನಿಯಾಗಿ ನಿರ್ದೇಶಕ ಗುರುಪ್ರಸಾದ್ ಅವರಿಗೆ ಪರಿಚಯ ಆಗಿದ್ದೆ. 2016 ರಲ್ಲಿ ಸಾಲ ಅಂತ 30 ಲಕ್ಷ ರೂ. ಕೊಡಿಸಿದ್ದೆ. ಆದ್ರೆ, ಸಾಲ ವಾಪಸ್ ಕೇಳಿದಾಗ ಕೆಟ್ಟ ರೀತಿಯಲ್ಲಿ ವರ್ತಿಸಿದ್ರು. ಈ ಬಗ್ಗೆ ಕಳೆದ ಆಗಸ್ಟ್​ನಲ್ಲಿ ದೂರು ನೀಡಿದ್ದೆ. ನಿರ್ದೇಶಕ ಗುರುಪ್ರಸಾದ್ ಅವರನ್ನು ಇಂದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೋರ್ಟ್ ಮೂಲಕ ನ್ಯಾಯ ಕೇಳುತ್ತಿದ್ದೇನೆ” ಎಂದು ಹೇಳಿದ್ದಾರೆ.

“ಈಗಲೂ ದುಡ್ಡು ಕೊಟ್ರೆ ಅವರ ಕಾಲಿಗೆ ಬಿದ್ದು ದೂರು ವಾಪಸ್ ತೆಗೆದುಕೊಳ್ಳುತ್ತೇನೆ. ಚೆಕ್ ಬೌನ್ಸ್ ಕೇಸ್ ಹಾಕಿದ ಮೇಲೆ ನನ್ನ ಮೇಲೆ ಎರಡನೇ ಹೆಂಡತಿ ಜೊತೆ ಅನುಚಿತವಾಗಿ ವರ್ತಿಸಿದ್ದೀನಿ ಎಂದು ದೂರು ದಾಖಲು ಮಾಡಿದ್ರು. ಗುರುಗಳನ್ನುಇಲ್ಲಿಗೆ ತರುವುದಕ್ಕೆ ನನಗೆ ಈಗಲೂ ಬೇಜಾರಿದೆ, ಆದ್ರೆ, ಅವರಿಗೆ ಆ ಭಾವನೆ ಇಲ್ಲ” ಎಂದರು.

suddiyaana