ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಸಿಲುಕಿಕೊಂಡ ಆನೆ – ಗಜರಾಜ ಬಚಾವ್ ಆಗಿದ್ಹೇಗೆ?

ದೇಶದ ಹಲವು ಭಾಗಗಳಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಉತ್ತರಪ್ರದೇಶ ಛತ್ತೀಸ್ಗಡದಲ್ಲೂ ಭಾರಿ ಮಳೆಯಾಗ್ತಿದೆ. ಅಲ್ಲಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇದೀಗ ಆನೆಯೊಂದು ಪ್ರವಾಹದಲ್ಲಿ ಸಿಲುಕಿಕೊಂಡಿದ್ದು, ಇದ್ರ ವಿಡಿಯೋ ಭಾರಿ ವೈರಲ್ ಆಗಿದೆ.
ಇದನ್ನೂಓದಿ: ಚೀನಾ ನೌಕರರ ವಿದೇಶ ಪ್ರಯಾಣಕ್ಕೆ ಬ್ರೇಕ್ – ರೂಲ್ಸ್ ಬ್ರೇಕ್ ಮಾಡಿದ್ರೆ ಕಠಿಣ ಶಿಕ್ಷೆ
ಈ ಘಟನೆ ಛತ್ತೀಸ್ಗಢದ ಸುರ್ಗಜಾ ಜಿಲ್ಲೆಯಲ್ಲಿ ಈ ನಡೆದಿದೆ. ಕಳೆದ ಕೆಲ ದಿನದಿಂದ ಛತ್ತೀಸ್ಗಢದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಎಡೆ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ತಗ್ಗು ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇದೀಗ ಉಕ್ಕಿ ಹರಿಯುತ್ತಿರುವ ಲುಂಡ್ರಾದ ಅಸ್ಕಲಾದ ಮಹೋರಾ ನದಿಯಲ್ಲಿ ಆನೆಯೊಂದು ಸಿಲುಕಿಕೊಂಡಿದ್ದು, ಆನೆ ಸದ್ಯ ಅಪಾಯದಿಂದ ಪಾರಾಗಿದೆ.
Suraj Vloger ಹೆಸರಿನ ಯೂಟ್ಯೂಬ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಆನೆಯೊಂದು ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಸಿಲುಕಿಕೊಂಡಿರುವುದನ್ನು ಕಾಣಬಹುದು. ನೋಡನೋಡುತ್ತಿದ್ದಂತೆ ಪ್ರವಾಹದಲ್ಲಿ ಆನೆಯೂ ಕೊಚ್ಚಿ ಹೋಗುತ್ತಿದೆ. ನೀರಿನ ತೀವ್ರತೆಯೂ ಆನೆಯನ್ನು ನದಿಯ ಮಧ್ಯ ಎಳೆಯಲ್ಪಟ್ಟಿದ್ದರೂ ಅಲ್ಲೇ ನಿಂತಿದ್ದ ಸ್ಥಳೀಯರು ಜೋರಾಗಿ ಸದ್ದು ಮಾಡುವ ಮೂಲಕ ಆನೆಯನ್ನು ಓಡಿಸುವ ಪ್ರಯತ್ನ ಮಾಡಿದ್ದಾರೆ.
ಸ್ಥಳೀಯರು ಜೋರಾಗಿ ಕಿರುಚುವುದನ್ನು ಕಂಡ ಆನೆಯೂ ಭಯಗೊಂಡಿದೆ. ಕೊನೆಗೆ ಉಕ್ಕಿ ಹರಿಯುತ್ತಿರುವ ನೀರಿನ ಮಧ್ಯೆ ಸಿಲುಕಿದ್ದ ಆನೆಯೂ ಓಡಿ ಹೋಗುವ ಮೂಲಕ ಅಪಾಯದಿಂದ ಪಾರಾಗಿದೆ. ಜೀವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಆನೆಯನ್ನು ಕಣ್ಣಾರೆ ಕಂಡ ಸ್ಥಳೀಯ ನಿವಾಸಿಯೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ನೋಡಿದ ಬಳಕೆದಾರರು, ಜೀವ ಉಳಿಸಕೊಳ್ಳಬೇಕು ಎಂದು ಒದ್ದಾಡುತ್ತಿರುವುದನ್ನು ಕಂಡು ನಿಜಕ್ಕೂ ಬೇಸರವಾಯಿತು ಎಂದಿದ್ದಾರೆ. ಇನ್ನೊಬ್ಬರು, ಸ್ಥಳೀಯರು ಆನೆಯನ್ನು ಹೆದರಿಸುವ ಮೂಲಕ ಅದರ ಜೀವ ಉಳಿಸಲು ನೆರವಾಗಿದ್ದೀರಿ ಧನ್ಯವಾದಗಳು ಎಂದು ಹೇಳಿದ್ದಾರೆ.

ನೋಡಿರಿ

