ಇನ್ನು ಮುಂದೆ ಪ್ಲೇಸ್ಟೋರ್‌ನಲ್ಲೂ ಲಭ್ಯವಾಗಲಿದೆ ‘ಚಾಟ್ ಜಿಟಿಪಿ’!
ವಿಶ್ವದಾದ್ಯಂತ ತಂತ್ರಜ್ಞಾನ ಲೋಕದಲ್ಲಿ ಇತ್ತೀಚಿಗೆ ಹರಿದಾಡುತ್ತಿರುವ ಹಾಗೂ ಭಾರೀ ಸಂಚಲನ ಮೂಡಿಸುತ್ತಿರುವ ವಿಷಯ ಎಂದರೆ ‘ಚಾಟ್ ಜಿಟಿಪಿ’ (ChatGPT). ಈ ಅಪ್ಲಿಕೇಷನ್ ಈವರೆಗೆ ಕೇವಲ ವೆಬ್‌ಸೈಟ್‌ಗಳಲ್ಲಿ ಮಾತ್ರ ಲಭ್ಯವಿತ್ತು. ಇದೀಗ ಆ್ಯಪ್‌ರೂಪದಲ್ಲಿ ಬಳಕೆದಾರರಿಗೆ ಲಭ್ಯವಾಗಲಿದೆ.
ಇದನ್ನೂ ಓದಿ: ‘ಚಾಟ್‌ಜಿಪಿಟಿ’ ಎಡವಟ್ಟು – ಇಡೀ ತರಗತಿಯನ್ನೇ ಫೇಲ್ ಮಾಡಿದ ಪ್ರಾಧ್ಯಾಪಕ!
ಈ ಬಗ್ಗೆ ಚಾಟ್‌ಜಿಪಿಟಿಯ ಸಂಸ್ಥೆ ಓಪನ್ ಎಐ ಮಾಹಿತಿ ನೀಡಿದ್ದು, ಈವರೆಗೆ ವೆಬ್‌ಸೈಟ್‌ಗಳಲ್ಲಿ ಮಾತ್ರವೇ ಲಭ್ಯವಿದ್ದ ಎಐ ಆಧಾರಿತ ಚಾಟ್‌ಬೋಟ್ ಚಾಟ್‌ಜಿಪಿಟಿ ಇನ್ನುಮುಂದೆ ಆ್ಯಪ್‌ರೂಪದಲ್ಲಿ ಲಭ್ಯವಾಗಲಿದೆ. ಆರಂಭಿಕ ಹಂತದಲ್ಲಿ ಆ್ಯಪಲ್‌ಫೋನ್ ಬಳಕೆದಾರರಿಗೆ ಈ ಸೇವೆ ದೊರೆಯಲಿದೆ ಎಂದು ತಿಳಿಸಿದೆ.
ಆ್ಯಪಲ್ ಹಾಗೂ ಆ್ಯಂಡ್ರಾಯ್ಡ್ ಬಳಕೆದಾರರಿಗಾಗಿ ಚಾಟ್‌ಜಿಪಿಟಿಯ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಲಾಗಿದೆ. ಆದರೆ, ಪ್ರಸಕ್ತ ಅಮೆರಿಕದಲ್ಲಿರುವ ಆ್ಯಪಲ್ ಫೋನ್ ಬಳಕೆದಾರರಿಗೆ ಮಾತ್ರ ಆ್ಯಪ್ ಲಭ್ಯವಿದೆ. ಶೀಘ್ರದಲ್ಲೇ, ಬೇರೆ ರಾಷ್ಟ್ರಗಳ ಆ್ಯಪಲ್ ಬಳಕೆದಾರರಿಗೂ ಸೇವೆ ಒದಗಿಸಲಾಗುತ್ತದೆ. ಇದರ ಜೊತೆಗೆ ಆ್ಯಂಡ್ರಾಯ್ಡ್ ಬಳಕೆದಾರರೂ ಕೂಡ ಆ್ಯಪ್ ಬಳಸಬಹುದಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ಗೂಗಲ್ ಪ್ಲೇಸ್ಟೋರ್‌ನಲ್ಲಿ ಚಾಟ್‌ಜಿಪಿಟಿ ಆ್ಯಪ್ ಸಿಗಲಿದೆ ಎಂದು ಮಾಹಿತಿ ನೀಡಿದೆ.