5ಜಿ ಯುಗ – ಇನ್ನು ಮುಂದೆ ಬಟ್ಟೆಯಲ್ಲೇ ಮೊಬೈಲ್ ಚಾರ್ಜ್ ಮಾಡಬಹುದು!
ಇದು 5ಜಿ ಯುಗ. ಇಂದು ಜಗತ್ತಿನಲ್ಲಿ ತಂತ್ರಜ್ಞಾನ ಊಹಿಸಲು ಸಾಧ್ಯವಾಗದಂತಹ ಮಟ್ಟಿಗೆ ಬೆಳೆಯುತ್ತಿದೆ. ದಿನ ಕಳೆದಂತೆ ವಿಭಿನ್ನ ವಿನ್ಯಾಸದೊಂದಿಗೆ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದರ ವಿನ್ಯಾಸಕ್ಕೆ ತಕ್ಕಂತೆ ಚಾರ್ಜರ್ಗಳು ಲಭ್ಯವಿದೆ. ಆದರೆ ಇನ್ನು ಮುಂದೆ ಮೊಬೈಲ್ಗಳಿಗೆ ಚಾರ್ಜ್ ಮಾಡುವ ಕಾಲ ಹೋಯಿತು. ಇನ್ನೇನಿದ್ದರೂ ಸ್ಮಾರ್ಟ್ ಚಾರ್ಜ್ಗಳದ್ದೇ ಕಾಲ. ತಮ್ಮ ಫೋನ್ಗಳನ್ನು ತಾವು ಧರಿಸಿದ ಬಟ್ಟೆಯಲ್ಲಿಟ್ಟುಕೊಂಡರೇ ಕೆಲವೇ ಕ್ಷಣದಲ್ಲಿ ಚಾರ್ಜ್ ಮಾಡಬಹುದಾಗಿದೆ.
ಇ-ಟೆಕ್ಸ್ಟೈಲ್ ಎಂಬುವುದು ವಿಶೇಷವಾದ ಬಟ್ಟೆಯಾಗಿದ್ದು, ಅದು ಸಾಮಾನ್ಯ ಬಟ್ಟೆಗಳಿಗಿಂತ ತುಂಬಾ ಭಿನ್ನವಾಗಿದೆ. ನಾಟಿಂಗ್ಹ್ಯಾಮ್ ಟ್ರೆಂಟ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಈ ವಿಶೇಷ ಬಟ್ಟೆಯನ್ನು ಸಿದ್ಧಪಡಿಸಿದ್ದಾರೆ. ವಾಸ್ತವವಾಗಿ ಈ ಬಟ್ಟೆಯು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಚಾರ್ಜ್ ಮಾಡಬಲ್ಲದು. ಈ ಬಟ್ಟೆಯು ಸೌರ ಶಕ್ತಿಯನ್ನು ತನ್ನೊಳಗೆ ಉಳಿಸುತ್ತದೆ ಮತ್ತು ನೀವು ಬಯಸಿದಾಗ ಅದನ್ನು ಬಳಸಿ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಚಾರ್ಜ್ ಮಾಡಬಹುದು. ಇದು ದೊಡ್ಡ ಬಟ್ಟೆ ಆಗಿದ್ದು, ಹೆಚ್ಚು ಸೌರ ಶಕ್ತಿಯನ್ನು ಅದು ತನ್ನೊಳಗೆ ಸಂಗ್ರಹಿಸುತ್ತದೆ ಮತ್ತು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ನೀವು ಹೆಚ್ಚಾಗಿ ಚಾರ್ಜ್ ಮಾಡಲು ಸಾಧ್ಯವಾಗುತ್ತದೆ. ಈ ಗ್ಯಾಜೆಟ್‌ಗಳು ಸ್ಮಾರ್ಟ್‌ಫೋನ್‌ಗಳು ಮತ್ತು ಸ್ಮಾರ್ಟ್‌ವಾಚ್‌ಗಳು ಮತ್ತು ಇಯರ್‌ಬಡ್‌ಗಳನ್ನು ಒಳಗೊಂಡಿವೆ.
ಈ ವಿಶೇಷ ಫ್ಯಾಬ್ರಿಕ್ ಸೌರ ಶಕ್ತಿಯನ್ನು ರಕ್ಷಿಸುತ್ತದೆ ಮತ್ತು ಇದಕ್ಕಾಗಿ ವಿಜ್ಞಾನಿಗಳು 1,200 ಸಣ್ಣ ದ್ಯುತಿವಿದ್ಯುಜ್ಜನಕ ಕೋಶಗಳನ್ನು (ಸೌರ ಫಲಕಗಳು) ಬಳಸಿದ್ದಾರೆ. ಸೌರಶಕ್ತಿಯು ಅದರೊಳಗೆ ಚೆನ್ನಾಗಿ ಸಂಗ್ರಹವಾಗಲು ಇದು ಕಾರಣವಾಗಿದೆ. ಇದನ್ನು ಬಳಸಿಕೊಂಡು ನಿಮ್ಮ ಗ್ಯಾಜೆಟ್‌ಗಳನ್ನು ಚಾರ್ಜ್ ಮಾಡಬಹುದು. ಈ ಫ್ಯಾಬ್ರಿಕ್ 400 ಮಿಲಿವ್ಯಾಟ್ ವಿದ್ಯುತ್ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ ನೀವು ನಿಮ್ಮ ಗ್ಯಾಜೆಟ್‌ಗಳನ್ನು ಸುಲಭವಾಗಿ ಚಾರ್ಜ್ ಮಾಡಲು ಸಾಧ್ಯವಾಗುತ್ತದೆ. ಈಗ ಈ ತಂತ್ರಜ್ಞಾನದ ಕೆಲಸ ನಡೆಯುತ್ತಿದೆ. ಆದರೆ ಭವಿಷ್ಯದಲ್ಲಿ ಇದು ಎಲ್ಲರಿಗೂ ಲಭ್ಯವಾಗಬಹುದು ಎಂದು ಹೇಳಲಾಗುತ್ತಿದೆ.