ಕೋತಿಗಳ ಸಾಮ್ರಾಜ್ಯದಲ್ಲಿ ಆಕರ್ಷಕ ಪ್ರೊಬೊಸ್ಕಿಸ್ ತಳಿ – ಉದ್ದನೆಯ ಮೂಗುಳ್ಳ ಈ ಕೋತಿಯ ವಿಶೇಷತೆಯೇನು?

ಕೋತಿಗಳ ಸಾಮ್ರಾಜ್ಯದಲ್ಲಿ ಆಕರ್ಷಕ ಪ್ರೊಬೊಸ್ಕಿಸ್ ತಳಿ – ಉದ್ದನೆಯ ಮೂಗುಳ್ಳ ಈ ಕೋತಿಯ ವಿಶೇಷತೆಯೇನು?

ಮಂಗಗಳು ಬುದ್ಧಿವಂತ ಪ್ರಾಣಿಗಳು.  ಆದರೆ ಕೋತಿಗಳಲ್ಲೂ ವಿವಿಧ ರೀತಿಯ ತಳಿಗಳಿವೆ. ಇಲ್ಲಿ ಒಂದು ರೀತಿಯ ಕೋತಿಗಳಿವೆ. ಇವುಗಳು ನೋಡುವುದಕ್ಕೆ ಸ್ವಲ್ಪ ವಿಭಿನ್ನ. ತನ್ನ ನೀಳವಾದ ಮೂಗಿನಿಂದ ಎಲ್ಲರ ಹುಬ್ಬೇರಿಸುವಂತೆ ಮಾಡುವ ಈ ಕೋತಿಯೇ ಪ್ರೊಬೊಸ್ಕಿಸ್. ಇದೇನಪ್ಪಾ ಇಷ್ಟೊಂದು ಉದ್ದವಾದ ಮೂಗು ಎಂದೆನಿಸಬಹುದು. ಈ ಕುರಿತಾದ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ನಿದ್ದೆ ಮಾಡುವಾಗ ಕೈ ಮರಗಟ್ಟುತ್ತಿದೆಯಾ? – ಎಚ್ಚರ.. ಸಲ್ಪ ಎಚ್ಚರ ತಪ್ಪಿದ್ರು ಅಪಾಯ ಗ್ಯಾರೆಂಟಿ!

ಸಾಮಾನ್ಯವಾಗಿ ಅತಿಯಾಗಿ ಆಡಿದ್ರೆ, ಮಂಗನಂತೆ (Monkey) ವರ್ತಿಸಬೇಡ ಎಂದು ಹೇಳುತ್ತೇವೆ. ನೀವು ಸಾಮಾನ್ಯವಾಗಿ ಮಂಗಗಳನ್ನು ನೋಡಿರುತ್ತೀರಿ. ಆದರೆ ಈ ಮಂಗ ಮಾತ್ರ ನೋಡಲು ಆಕರ್ಷಕ ಹಾಗೂ ಇದರ ದೇಹಾಕೃತಿಯೂ ಸ್ವಲ್ಪ ವಿಭಿನ್ನ. ಹೌದು, ಈ ವಿಶೇಷ ತಳಿಯ ಹೆಸರು ಪ್ರೊಬೊಸ್ಕಿಸ್ (Proboscis). ಈ ಕೋತಿಯನ್ನು ನೋಡಿದ ತಕ್ಷಣ ಇದೇನು ಮೂಗಾ ಎನ್ನುವ ಪ್ರಶ್ನೆಯೊಂದು ಮೂಡುತ್ತದೆ. ನೀಳವಾದ ಮೂಗು ಈ ಕೋತಿಯ ಅತ್ಯಂತ ಆಕರ್ಷಕ ಭಾಗವಾಗಿದೆ. ಹಾಗಾದ್ರೆ ಏನಿದರ ವಿಶೇಷತೆಯೇನು? ಈ ಕೋತಿಗಳು ಹೆಚ್ಚಾಗಿ ಎಲ್ಲಿ ಕಾಣಸಿಗುತ್ತದೆ? ಇದರ ಜೀವನ ಕ್ರಮ ಇತರ ಕೋತಿಗಳಿಗಿಂತ ಹೇಗೆ ಭಿನ್ನವಾಗಿರುತ್ತದೆ? ಈ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ. ನೋಡಲು ಆಕರ್ಷಕ ಏಕೆ? ಪ್ರೊಬೊಸ್ಕಿಸ್ ಮಂಗ ಅಥವಾ ಕೋತಿಯೂ ನೋಡಲು ತನ್ನ ನೀಳವಾದ ಮೂಗಿನಿಂದಲೇ ಆಕರ್ಷಕವಾಗಿದೆ. ಮುಖದ ತುಂಬಾ ಆವರಿಸಿಕೊಂಡಿರುವ ಉದ್ದನೆಯ ಮೂಗು, ಗಂಡು ಹೆಣ್ಣಿಗಿಂತ ಸ್ವಲ್ಪ ಉದ್ದನೆಯ ಮೂಗನ್ನು ಹೊಂದಿರುತ್ತವೆ. ತಿಳಿ ಕಂದು, ಕಪ್ಪು ಹಾಗೂ ಬಿಳಿ ಬಣ್ಣದ ತುಪ್ಪಳವನ್ನು ಹೊಂದಿದ್ದು, ಅಂಗೈಯ ಬಣ್ಣ ಕಪ್ಪು. ಉದ್ದನೆಯ ಬಾಲ, ತಲೆಭಾಗದಲ್ಲಿ ಕಂದು ಬಣ್ಣದ ಕೂದಲು ಹಾಗೂ ಮನುಷ್ಯಂತೆ ಹೋಲುವ ಕಿವಿಗಳು. ಹೀಗಾಗಿ ಬೇರೆ ತಳಿಯ ಕೋತಿಗಳಿಗೆ ಹೋಲಿಸಿದರೆ ಇದು ಸ್ವಲ್ಪ ವಿಭಿನ್ನ ಎನ್ನಬಹುದು. ಹೆಚ್ಚಾಗಿ ಎಲ್ಲಿ ಕಾಣಸಿಗುತ್ತದೆ? ಜೀವ ಸಂಕುಲಗಳಲ್ಲಿ ವಿಶೇಷ ಹಾಗೂ ಆಕರ್ಷಕ ಪ್ರಾಣಿಗಳ ಸಾಲಿಗೆ ಸೇರುವ ಈ ಪ್ರೊಬೊಸ್ಕಿಸ್ ಮಂಗವೂ ಇದು ಏಷ್ಯಾದ ಅತಿ ದೊಡ್ಡದಾದ ಕೋತಿಯ ತಳಿಗಳಲ್ಲಿ ಒಂದು. ಇಂಡೊನೇಷ್ಯಾದ ಬೊರ್ನೋಯೊ ಕಾಡುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಇನ್ನು, ನದಿ ಸುತ್ತಮುತ್ತಲಿನ ಪ್ರದೇಶ, ಜೌಗು ಪ್ರದೇಶಗಳು ಇವುಗಳ ಪ್ರಮುಖ ನೆಲೆಗಳಾಗಿವೆ. ನೋಡಲು ಆಕರ್ಷಕ ಎನಿಸುವ ಪ್ರೊಬೊಸ್ಕಿಸ್ ಮಂಗಗಳು ಎಲೆಗಳು, ಕಾಳುಗಳು ಹಾಗೂ ಹಣ್ಣುಗಳನ್ನು ತಿಂದು ಬದುಕುತ್ತವೆ. ಸದಾ ಮರದ ಮೇಲೆ ಇರುವ ಈ ಪ್ರೊಬೊಸ್ಕಿಸ್ ಆಹಾರ ಹುಡುಕಾಟಕ್ಕಾಗಿ ಮಾತ್ರ ಮರದಿಂದ ಕೆಳಗೆ ಇಳಿಯುವುದು ವಿಶೇಷ. ಸದಾ ತನ್ನ ಸಂಗಾತಿ ಹಾಗೂ ಬಳಗದೊಂದಿಗೆ ಗುಂಪಿನಲ್ಲಿ ವಾಸಿಸಲು ಬಯಸುವ ಈ ಪ್ರೊಬೊಸ್ಕಿಸ್ ಮಂಗಗಳು ಅಪಾಯಗಳು ಎದುರಾದಾಗ ತನ್ನ ಬಳಗಕ್ಕೆ ಕಿರುಚಿ ಕೂಗಿ ಕರೆಯುತ್ತವೆ. ಈ ಕೋತಿಗಳಿಗೆ ಈಜುವ ಕಲೆ ಚೆನ್ನಾಗಿ ಗೊತ್ತಿದೆ. ಸದಾ ಚುರುಕಿನಿಂದ ಕೂಡಿದ್ದು ರಾತ್ರಿಯ ವೇಳೆಯಲ್ಲಿ ಮರಗಳೇ ಇವುಗಳ ವಾಸಸ್ಥಾನ. ರೆಂಬೆ ಕೊಂಬೆಗಳ ಮೇಲೆ ನಿದ್ರಿಸುವ ಈ ಕೋತಿಗಳು ಒಂಟಿಯಾಗಿ ಇರುವುದಿಲ್ಲ. ಇನ್ನು, ತನ್ನ ಆಕರ್ಷಕ ಮೂಗಿನ ಮೂಲಕವೇ ಗಂಡು ಪ್ರೊಬೊಸ್ಕಿಸ್ ಗಳು ಹಾಗೂ ಹೆಣ್ಣುಗಳನ್ನು ಸೆಳೆಯುತ್ತವೆ. ಆಹಾರ ಸಿಗುವ ಸಮಯದಲ್ಲಿ ಮಾತ್ರ ಹೆಣ್ಣು ಪ್ರೊಬೊಸ್ಕಿಸ್ ಗಳು ಸಂತಾನೋತ್ಪತ್ನಿ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತವೆ. ಇನ್ನು ಕೋತಿಗಳ ಜೀವಿತಾವಧಿ ಹದಿನೈದರಿಂದ ಇಪ್ಪತ್ತು ವರ್ಷಗಳ ಕಾಲ ಮಾತ್ರ. ಹೀಗಾಗಿ ತನ್ನದೇ ಆಹಾರ ಹಾಗೂ ಜೀವನಕ್ರಮದಿಂದ ಈ ಪ್ರೊಬೊಸ್ಕಿಸ್ ಕೋತಿಗಳು ವಿಭಿನ್ನ ಎನಿಸುತ್ತದೆ.

Sulekha

Leave a Reply

Your email address will not be published. Required fields are marked *