ಮೇ 10 ರಿಂದ ಚಾರ್ ಧಾಮ್ ಯಾತ್ರೆ ಆರಂಭ – ನೊಂದಣಿ ಪ್ರಕ್ರಿಯೆ ಆರಂಭ
ಚಾರ್ಧಾಮ್ ಯಾತ್ರೆ ಹಿಂದೂಗಳಿಗೆ ಅತ್ಯಂತ ಪವಿತ್ರ ಯಾತ್ರೆಯಾಗಿದೆ. ಪ್ರತಿವರ್ಷ ಲಕ್ಷಾಂತರ ಭಕ್ತರು ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಚಾರ್ಧಾಮ್ ಯಾತ್ರೆಗೆ ಈಗಾಗಲೇ ನೋಂದಣಿ ಆರಂಭವಾಗಿದ್ದು, ಯಾತ್ರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಭಾರತೀಯರು ಮಾತ್ರವಲ್ಲದೇ ವಿದೇಶಿಗರು ಕೂಡ ಉತ್ತರಖಂಡದಲ್ಲಿ ಇರುವ ಕೇದಾರನಾಥ, ಬದರಿನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ಧಾಮಕ್ಕೆ ಭೇಟಿ ನೀಡಲು ಬಯಸುತ್ತಾರೆ. ಜೀವನದಲ್ಲಿ ಒಮ್ಮೆಯಾದರೂ ಈ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಬೇಕೆಂದು ಬಯಸುತ್ತಾರೆ. ಈ ಬಾರಿ ಕೇದಾರನಾಥ ದೇವಸ್ಥಾನದ ಬಾಗಿಲು ಮೇ10ರಂದು ತೆರೆಯಲಿದೆ. ಅಂದೇ ಭಕ್ತಾಧಿಗಳಿಗೆ ಕೇದಾರನಾಥನ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಇದೀಗ ಚಾರ್ ಧಾಮ್ ಯಾತ್ರೆಗೆ ಬುಕ್ಕಿಂಗ್ ಆರಂಭವಾಗಿದ್ದು, ಮೊದಲ ದಿನವೇ 2 ಲಕ್ಷಕ್ಕೂ ಹೆಚ್ಚು ಜನ ನೋಂದಣಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಜೆಡಿಎಸ್ ಭದ್ರಕೋಟೆಯಲ್ಲಿ ರಾಹುಲ್ ಗಾಂಧಿ ಮತಶಿಕಾರಿ – ಸ್ಟಾರ್ ಚಂದ್ರು ಪರ ಅಬ್ಬರದ ಪ್ರಚಾರ
ಮೇ 12 ರಂದು ಬದರಿನಾಥ ಧಾಮ ಮತ್ತು ಮೇ 25 ರಂದು ಹೇಮಕುಂಡ್ ಸಾಹಿಬ್ನ ದೇವಸ್ಥಾನಗಳ ಬಾಗಿಲುಗಳು ಸಹ ತೆರೆಯಲಿವೆ. ಎಲ್ಲಾ ಧಾಮಗಳ ಬಾಗಿಲು ತೆರೆಯುವ ದಿನಾಂಕವನ್ನು ನಿರ್ಧರಿಸಿದ ನಂತರ, ಪ್ರವಾಸೋದ್ಯಮ ಇಲಾಖೆ ಸೋಮವಾರದಿಂದ ಚಾರ್ ಧಾಮ್ ಯಾತ್ರೆಗೆ ಆನ್ಲೈನ್ ನೋಂದಣಿಯನ್ನು ಪ್ರಾರಂಭಿಸಿದೆ. ಚಾರ್ ಧಾಮ್ ಯಾತ್ರಾ ಆಡಳಿತ ಸಂಸ್ಥೆ ಹೊರಡಿಸಿದ ನೋಂದಣಿ ಬುಲೆಟಿನ್ ಪ್ರಕಾರ, ಒಟ್ಟು 2,01,851 ನೋಂದಣಿಗಳು ಬೆಳಿಗ್ಗೆಯಿಂದ ಸಂಜೆ 4 ಗಂಟೆಯವರೆಗೆ ಮಾಡಲಾಗಿದೆ ಎಂದು ವರದಿಯಾಗಿದೆ.
ಚಾರ್ ಧಾಮ್ ಗೆ ಮೊದಲ ದಿನವೇ ಎರಡು ಲಕ್ಷಕ್ಕೂ ಹೆಚ್ಚು ನೋಂದಣಿಯಾಗಿದೆ. ಕೇದಾರನಾಥ ಧಾಮಕ್ಕೆ 69 ಸಾವಿರ ನೋಂದಣಿಯಾಗಿದೆ. ಇದಲ್ಲದೇ ಈ ಬಾರಿ ಚಾರ್ಧಾಮ್ ಹಾಗೂ ಹೇಮಕುಂಡ್ ಸಾಹಿಬ್ಗೆ ನೋಂದಣಿ ಆರಂಭಿಸಲಾಗಿದೆ. ಕೇದಾರನಾಥಕ್ಕೆ ಹೆಲಿ ಸೇವೆಯ ಬುಕ್ಕಿಂಗ್ ಕೂಡ ಏಪ್ರಿಲ್ 18ರಿಂದ ಪ್ರಾರಂಭವಾಗಲಿದೆ.
ಯಾತ್ರೆಗೆ ನೋಂದಣಿ ಮಾಡಿಕೊಳ್ಳುವುದು ಹೇಗೆ?
ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿ (ಬಿಕೆಟಿಸಿ) ಆನ್ಲೈನ್ ಪೂಜೆ ಬುಕಿಂಗ್ ಅನ್ನು ಪ್ರಾರಂಭಿಸಿದೆ. ಯಾತ್ರೆಗೆ ತೆರಳು ಆಗದ ಭಕ್ತರು ಇದನ್ನು ಬುಕ್ ಮಾಡಿಕೊಳ್ಳಬಹುದು. ಜೊತೆಗೆ ನೀವುರುವ ಸ್ಥಳದಲೇ ಕುಳಿತು ಚಾರ್ಧಾಮ್ ಪೂಜೆಯನ್ನು ವೀಕ್ಷಿಸಬಹುದು. ಜೂನ್ 30 ರವರೆಗೆ BKTC ವೆಬ್ಸೈಟ್ನಲ್ಲಿ ಆನ್ಲೈನ್ನಲ್ಲಿ ಪೂಜೆಯನ್ನು ಬುಕ್ ಮಾಡಬಹುದು.