ಈ ವರ್ಷದ ಚಾರ್‌ಧಾಮ್‌ ಯಾತ್ರೆ ಮುಕ್ತಾಯ – ಪುಣ್ಯಕ್ಷೇತ್ರಗಳ ದರ್ಶನ ಪಡೆದ ಬರೋಬ್ಬರಿ 56 ಲಕ್ಷ ಯಾತ್ರಿಕರು!

ಈ ವರ್ಷದ ಚಾರ್‌ಧಾಮ್‌ ಯಾತ್ರೆ ಮುಕ್ತಾಯ – ಪುಣ್ಯಕ್ಷೇತ್ರಗಳ ದರ್ಶನ ಪಡೆದ ಬರೋಬ್ಬರಿ 56 ಲಕ್ಷ ಯಾತ್ರಿಕರು!

ಹಿಂದೂಗಳ ಪವಿತ್ರ ಯಾತ್ರೆಗಳಲ್ಲಿ ಚಾರ್ ಧಾಮ್‌ ಯಾತ್ರೆ ಕೂಡ ಒಂದಾಗಿದೆ. 6 ತಿಂಗಳಿಗೆ ಒಮ್ಮೆ ತೆರೆಯುವ ಈ ಯಾತ್ರಾ ಸ್ಥಳಗಳಿಗೆ ದೇಶ-ವಿದೇಶಗಳಿಂದ ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ. ಪ್ರಸಕ್ತ ಸಾಲಿನ ಚಾರ್‌ಧಾಮ್‌ ಯಾತ್ರೆ ಶನಿವಾರ (ನ.18) ರಂದು ಮುಕ್ತಾಯವಾಗಿದೆ. ಈ ಬಾರಿ ಚಾರ್‌ಧಾಮ್‌ ಯಾತ್ರೆಯಲ್ಲಿ ದಾಖಲೆ ಪ್ರಮಾಣದಲ್ಲಿ ಯಾತ್ರಿಕರ ಪಾಲ್ಗೊಂಡಿದ್ದಾರೆ ಎಂದು ವರದಿಯಾಗಿದೆ.

ಬದರಿನಾಥ ಧಾಮದ ಪೋರ್ಟಲ್‌ಗಳನ್ನು ಶನಿವಾರ ಅಧಿಕೃತವಾಗಿ ಬಂದ್ ಮಾಡಲಾಗಿದೆ. ಶನಿವಾರದ ವೇಳೆಗೆ ಬರೋಬ್ಬರಿ  56,13,635 ಯಾತ್ರಿಕರು ಹಿಮಾಲಯದ ಪುಣ್ಯಕ್ಷೇತ್ರಗಳ ದರ್ಶನ ಪಡೆದಿದ್ದಾರೆ.  ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 10 ಲಕ್ಷದಷ್ಟು ಹೆಚ್ಚಳವಾಗಿದೆ  ಎಂದು ವರದಿಯಾಗಿದೆ.

ಇದನ್ನೂ ಓದಿ: ಬರದಲ್ಲಿ ಬೆಳೆ ಉಳಿಸಲು ರೈತರ ಪರದಾಟ –  ಈರುಳ್ಳಿ ಬೆಲೆಗೆ ಗ್ರಾಹಕರು ಕಣ್ಣೀರು!

ಈ ವರ್ಷ ಚಾರ್‌ಧಾಮ್ ಮತ್ತು ಹೇಮಕುಂಡ್ ಸಾಹಿಬ್‌ಗೆ ಭೇಟಿ ನೀಡಲು ದಾಖಲೆಯ 56,13,635 ಯಾತ್ರಾರ್ಥಿಗಳು ಉತ್ತರಾಖಂಡಕ್ಕೆ ಬಂದಿದ್ದಾರೆ. ಕಳೆದ ವರ್ಷ ಚಾರ್ಧಾಮ್ ಯಾತ್ರೆಗೆ 46 27 292″ ಭಕ್ತರು ಬಂದಿದ್ದರು. ಎಂದು ಬದ್ರಿ ಕೇದಾರ್ ದೇವಾಲಯ ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್ ಅವರು ಮಾಹಿತಿ  ನೀಡಿದ್ದಾರೆ.

ಈ ಬಾರಿ ಯಮುನೋತ್ರಿ ಧಾಮಕ್ಕೆ 735244, ಗಂಗೋತ್ರಿ ಧಾಮಕ್ಕೆ 9,05,174, ಕೇದಾರನಾಥ ಧಾಮಕ್ಕೆ 1961025, ಬದರಿನಾಥ ಧಾಮಕ್ಕೆ 1834729 ಮತ್ತು ಹೇಮಕುಂಡ್ ಸಾಹಿಬ್‌ಗೆ 177463 ಯಾತ್ರಿಕರು ಭೇಟಿ ನೀಡಿದ್ದಾರೆ ಎಂದು ಹೇಳಿದರು.

Shwetha M