ಚಾರ್‌ಧಾಮ್‌ ಯಾತ್ರೆಗೆ ಹರಿದು ಬಂದ ಭಕ್ತ ಸಾಗರ –  10 ದಿನಗಳಲ್ಲಿ 6 ಲಕ್ಷಕ್ಕೂ ಅಧಿಕ ಭಕ್ತರು ಭೇಟಿ

ಚಾರ್‌ಧಾಮ್‌ ಯಾತ್ರೆಗೆ ಹರಿದು ಬಂದ ಭಕ್ತ ಸಾಗರ –  10 ದಿನಗಳಲ್ಲಿ 6 ಲಕ್ಷಕ್ಕೂ ಅಧಿಕ ಭಕ್ತರು ಭೇಟಿ

ಹಿಂದೂಗಳ ಪ್ರಮುಖ ಯಾತ್ರೆಯಲ್ಲಿ ಚಾರ್ ಧಾಮ್ ಯಾತ್ರೆಯೂ ಒಂದು. 6 ತಿಂಗಳಿಗೊಮ್ಮೆ ಈ ಯಾತ್ರೆ ಆರಂಭವಾಗಲಿದ್ದು, ಈ ಬಾರಿ ಮೇ 10 ರಿಂದ ಚಾರ್ ಧಾಮ್ ಯಾತ್ರೆ ಆರಂಭವಾಗಿದೆ. ಕೇದಾರನಾಥ, ಬದರಿನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ಧಾಮಗಳಿಗೆ ಭಕ್ತ ಸಾಗರವೇ ಹರಿದುಬರುತ್ತಿದೆ. ನಿತ್ಯ ಸಾವಿರಾರು ಭಕ್ತರು ದೇಗುಲಕ್ಕೆ ಆಗಮಿಸುತ್ತಿದ್ದಾರೆ. ಕೇವಲ 10 ದಿನಗಳಲ್ಲಿ ಚಾರ್ ಧಾಮ್‌ ಕ್ಷೇತ್ರಗಳಿಗೆ 6 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌ – ಒಂದಾಗುತ್ತಿದೆ ನಮ್ಮ ಯಾತ್ರಿ ಮತ್ತು ಬಿಎಂಆರ್‌ಸಿಎಲ್!

ಹೌದು,  ಚಾರ್ ಧಾಮ್ ಯಾತ್ರೆಯಲ್ಲಿ ಕೇವಲ 10 ದಿನಗಳಲ್ಲಿ ಬದರಿನಾಥ, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿಗೆ 6,40,000 ಪ್ರವಾಸಿಗರು ಭೇಟಿ ನೀಡಿದ್ದಾರೆ. ಕೇದಾರನಾಥ ಧಾಮವೊಂದಕ್ಕೇ 2.50 ಲಕ್ಷ ಭಕ್ತರು ಭೇಟಿ ನೀಡಿದ್ದಾರೆ. ಬದರಿನಾಥ್, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿ ಧಾಮಗಳನ್ನು ಒಳಗೊಂಡಿರುವ ತೀರ್ಥಯಾತ್ರೆಗೆ ಪ್ರತಿದಿನ ಸರಾಸರಿ 70,000ಕ್ಕೂ ಹೆಚ್ಚು ಯಾತ್ರಾರ್ಥಿಗಳ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.

ಕೇದಾರನಾಥಕ್ಕೆ  2,46,820 ಮಂದಿ ಭಕ್ತರು ಈಗಾಗಲೇ ಭೇಟಿ ನೀಡಿದ್ದಾರೆ.  ಬದರಿನಾಥ್ ಗೆ 1,20,757,  ಯಮುನೋತ್ರಿಗೆ 1,25,608 ಹಾಗೂ ಗಂಗೋತ್ರಿಗೆ  1,12,508 ಯಾತ್ರಿಗಳು ಆಗಮಿಸಿದ್ದಾರೆ. ಇನ್ನು  ಚಾರ್ ಧಾಮ್ ಯಾತ್ರೆಯ ನೋಂದಣಿ ಸಂಖ್ಯೆಯು ಈಗ 29.52 ಲಕ್ಷದಷ್ಟಿದೆ. ರಾಜ್ಯ ಸರ್ಕಾರ ಮತ್ತು ಆಡಳಿತವು ನೋಂದಣಿ ಮಾಡಿಕೊಳ್ಳದೆ ಆಗಮಿಸಿರುವ ಪ್ರಯಾಣಿಕರ ವಿರುದ್ಧ ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ.

Shwetha M