ಅಮೃತಧಾರೆ ಸೀರಿಯಲ್‌ನಲ್ಲಿ 3ನೇ ಅಧ್ಯಾಯ – ಯುವತಿಯರಿಗೆ ಗೌತಮ್ ಮೇಲೆ ಕ್ರಷ್.. ಭೂಮಿಕಾ ಏನ್ ಮಾಡ್ತಾಳೆ?

ಅಮೃತಧಾರೆ ಸೀರಿಯಲ್‌ನಲ್ಲಿ 3ನೇ ಅಧ್ಯಾಯ – ಯುವತಿಯರಿಗೆ ಗೌತಮ್ ಮೇಲೆ ಕ್ರಷ್.. ಭೂಮಿಕಾ ಏನ್ ಮಾಡ್ತಾಳೆ?

ಅಮೃತಧಾರೆ ಧಾರಾವಾಹಿ ಈಗ ಮೂರನೇ ಅಧ್ಯಾಯಕ್ಕೆ ಕಾಲಿಟ್ಟಿದೆ. ಗೌತಮ್ ಮತ್ತು ಭೂಮಿಕಾ ಮೂರನೇ ಅಧ್ಯಾಯದಲ್ಲಾದರೂ ಒಂದಾಗುತ್ತಾರಾ ಎಂದು ಕಾಯುತ್ತಿದ್ದಾಗಲೇ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಗೌತಮ್ ಮೇಲೆ ಯುವತಿಯರಿಗೆ ಕ್ರಷ್ ಶುರುವಾಗಿದೆ.

ಇದನ್ನೂ ಓದಿ:ಎರಡೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ ಕಾಂತಾರ ಚಾಪ್ಟರ್ -1- ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ರಿಷಭ್ ಶೆಟ್ಟಿ

ಅಮೃತಧಾರೆ ಧಾರಾವಾಹಿ ಕಥೆ ಮತ್ತೆ ಬೆಂಗಳೂರಿಗೆ ಶಿಫ್ಟ್ ಆಗಿದೆ. ಈಗ ಗೌತಮ್ ಮತ್ತು ಭೂಮಿಕಾ ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಅಮೃತಧಾರೆ ಧಾರವಾಹಿಯ ಎರಡನೆಯ ಹಂತದಲ್ಲಿ ಇನ್ನೇನು ಗೌತಮ್​ ಮತ್ತು ಭೂಮಿಕಾ ಒಂದಾಗುತ್ತಾರೆ ಎಂದು ವೀಕ್ಷಕರು ಊಹಿಸಿದ್ದರು. ಇದೀಗ ಮೂರನೇ ಅಧ್ಯಾಯ ಆರಂಭವಾಗಿದ್ದು, ಇಲ್ಲಿ ಗೌತಮ್ ಮತ್ತು ಭೂಮಿಕಾ ಅಂತರ ಜಾಸ್ತಿಯಾಗಿದೆ. ಜೊತೆಗೆ ಗೌತಮ್​ ಬೆಂಗಳೂರಿನ ವಠಾರದಲ್ಲಿ ವಾಸವಾಗಿದ್ದಾನೆ. ವಠಾರದ ಜನರ ಪ್ರೀತಿಗೆ ಪಾತ್ರನಾಗಿದ್ದಾನೆ ಗೌತಮ್​. ಎಲ್ಲರಿಗೂ ಗೌತಮ್​ ಕಂಡ್ರೆ ತುಂಬಾ ಇಷ್ಟ. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಾ, ಎಲ್ಲರ ಕೆಲಸವನ್ನೂ ಮಾಡಿಕೊಡುತ್ತಾ, ಯಾರಿಗೆ ಏನು ಬೇಕೋ ಎಲ್ಲವನ್ನೂ ತಂದುಕೊಡುತ್ತಾ, ಎಲ್ಲರ ಆರೋಗ್ಯ ವಿಚಾರಿಸುತ್ತಾ, ಸಮಾಧಾನ ಹೇಳುತ್ತಾ ವಠಾರದವರ ಪ್ರೀತಿ ಗಳಿಸಿದ್ದಾನೆ.

ಈ ವಠಾರದಲ್ಲಿ ಹಾಸ್ಯವನ್ನು ಸೇರಿಸಲಾಗಿದೆ. ಗೌತಮ್ ಮೇಲೆ ವಠಾರದ ಹುಡುಗಿಯರಿಗೂ ಲವ್​ ಶುರುವಾಗಿದೆ. ಗೌತಮ್​ ಒಂಟಿಯಾಗಿ ಇರುವ ಕಾರಣದಿಂದ ಆತನ ಬಗ್ಗೆ ಗೊತ್ತಿಲ್ಲದ ಇಬ್ಬರು ಯುವತಿಯರು, ಗೌತಮ್​ ಕನಸು ಕಾಣುತ್ತಿದ್ದಾರೆ. ಇಬ್ಬರೂ ಪ್ರೀತಿಯಿಂದ ಗೌತಮ್​ನನ್ನು ಮಾತನಾಡಿಸಿದ್ದಾರೆ. ನೀವು ಇಲ್ಲದೇ ತುಂಬಾ ಬೇಸರವಾಗಿತ್ತು ಎಂದು ನುಲಿಯುತ್ತಾ ಮಾತನಾಡಿದ್ದಾರೆ. ಅವರ ಈ ನುಲಿಯುವ ಮಾತು ಕೇಳಿ ಗೌತಮ್​ಗೆ ಸುಸ್ತಾಗಿ ಹೋಗಿದೆ. ಅಲ್ಲಿಂದ ತಪ್ಪಿಸಿಕೊಂಡರೆ ಸಾಕು ಎನ್ನುವಂತಾಗಿದೆ.

ಮತ್ತೊಂದೆಡೆ ಭೂಮಿಕಾಗೆ ಸ್ನೇಹಿತೆ ಸಿಕ್ಕಿದ್ದಾಳೆ. ಗೆಳತಿ ದತ್ತು ತೆಗೆದುಕೊಂಡಿರುವ ಮಗುವೇ ಭೂಮಿಕಾ ಮಗು ಎಂದು ಗೊತ್ತಾಗುವ ಸಮಯ ಕೂಡಾ ಹತ್ತಿರವಾಗಿದೆ. ಮಗಳು ಸಿಕ್ಕಿದ ಮೇಲೆ ಭೂಮಿಕಾ ಗೌತಮ್ ಒಂದಾಗಲಿದ್ದಾರೆ. ಅಲ್ಲಿಯವರೆಗೆ ವೀಕ್ಷಕರು ಕಾಯಲೇಬೇಕು ಅಷ್ಟೇ.

Sulekha