ಕಾಂಗ್ರೆಸ್, JDS ಮಧ್ಯೆ ಬೆಟ್ಟಿಂಗ್ ಭರಾಟೆ – ಯೋಗೇಶ್ವರ್ ಪರ 15 ಕೋಟಿ ಬಾಜಿ!?
ಎತ್ತು, ಹೊಲ, ಮನೆ, ಏನೆಲ್ಲಾ ಅಡವಿಟ್ಟಿದ್ದಾರೆ?
ಚನ್ನಪಟ್ಟಣದ ಎಲೆಕ್ಷನ್ ಘೋಷಣೆ ಆದಗಲಿಂದ ಹಿಡಿದು ಇಲ್ಲಿ ತನಕ ಚನ್ನಪಟ್ಟಣದಲ್ಲಿ ದುಡ್ಡಿ ಮಳೆಯೇ ಹರಿಯುತ್ತಿದೆ ಅನ್ನೋ ಮಾತು ಕೇಳಿ ಬರ್ತಿದೆ. ಪ್ರತಿಷ್ಠೆಯ ಕಣದಲ್ಲಿ ಗೆಲ್ಲೋಕೆ ಪಕ್ಷಗಳು ದುಡ್ಡು ಹರಿಸಿದ್ರೆ, ಸೋಲು ಗೆಲುವಿನ ಲೆಕ್ಕಚಾರ ಹಾಕುತ್ತು ಕ್ಷೇತ್ರದ ಜನ ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯದಲ್ಲಿ ಕೋಟಿ ಕೋಟಿ ಲೆಕ್ಕದಲ್ಲಿ ಬಾಜಿ ನಡೆಯುತ್ತಿದೆ. ಕೇವಲ ಕ್ಷೇತ್ರದಲ್ಲಿ ಮಾತ್ರವಲ್ಲ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲೂ ಕೂಡ ಚನ್ನಪಟ್ಟಣದ ರಿಸಲ್ಟ್ ಮೇಲೆ ಬೆಟ್ಟಿಂಗ್ ಕಟ್ಟಲಾಗಿದೆ.
ಇದನ್ನೂ ಓದಿ: ಜಸ್ಪ್ರೀತ್ ಬುಮ್ರಾ ರಣಾರ್ಭಟ – 1 ಇನ್ನಿಂಗ್ಸ್.. 17 ವಿಕೆಟ್.. ಚರಿತ್ರೆ!
ಚನ್ನಪಟ್ಟಣದ ಬೈ ಎಲೆಕ್ಷನ್ ಕ್ಷೇತ್ರದ ರಿಸಲ್ಟ್ ಕೆಲವೇ ಹೊತ್ತಿ ಹೊರ ಬೀಳಲಿದೆ. ಹೀಗಾಗಿ ಗೊಂಬೆನಾಡಲ್ಲಿ ಕೊನೆ ಕ್ಷಣದಲ್ಲಿ ಬೆಟ್ಟಿಂಗ್ ಅಬ್ಬರ ಜೋರಾಗಿದೆ. ತಮ್ಮ ತಮ್ಮ ಅಭ್ಯರ್ಥಿಗಳ ಪರ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಲಕ್ಷ ಲಕ್ಷ ಬೆಟ್ಟಿಂಗ್ ಕಟ್ಟಿ ಬಾಜಿ ಕಟ್ಟಿದ್ದಾರಂತೆ. ಸಿ.ಪಿ.ಯೋಗೇಶ್ವರ್ ಗೆಲುವು ಪಕ್ಕಾ ಎನ್ನುತ್ತಿದ್ದಾಗ ಜಮೀರ್ ಹೇಳಿಕೆ ಎಫೆಕ್ಟ್ ಕೊಟ್ಟಿದೆ ಅನ್ನೋ ಮಾತು ಕೇಳಿ ಬಂದಿತ್ತು. ಅದಕ್ಕೆ ಪುಷ್ಠಿ ನೀಡುವಂತೆ ಸಿಪಿ ಯೋಗೇಶ್ವರ್ ಪ್ರೆಸ್ಮೀಟ್ ಮಾಡಿ ಸೋಲಿನ ಸುಳಿವು ಕೊಟ್ಟಿದ್ದರು. ಇಲ್ಲಿಂದಲೇ ಬೆಟ್ಟಿಂಗ್ ಭರಾಟೆ ಶುರುವಾಗಿದೆ.
ಸೈನಿಕನ ಪರವಾಗಿಯೇ ಹೆಚ್ಚು ಬೆಟ್ಟಿಂಗ್
ದಳಪತಿಗಳಿಗಿಂತ ಕಾಂಗ್ರೆಸ್ ನವರೆ ಹೆಚ್ಚೆಚ್ಚು ಬೆಟ್ಟಿಂಗ್ ಕಟ್ಟುತ್ತಿದ್ದಾರಂತೆ. ಜೆಡಿಎಸ್ನವರು 50,000 ಕೊಡ್ತೀವಿ ಅಂದ್ರೆ ಕಾಂಗ್ರೆಸ್ನವರು 1 ಲಕ್ಷ ಕೊಡ್ತೀವಿ ಅಂತ ಆಫರ್ ಕೊಡ್ತಿದ್ದಾರಂತೆ. ಅಲ್ಲದೆ ಸಿಪಿ ಯೋಗೇಶ್ವರ್ ಸೋಲಿನ ಸುಳಿವು ಕೊಟ್ಟರೂ ಕೂಡ ಯೋಗೇಶ್ವರ್ ಪರವೇ ಬೆಟ್ಟಿಂಗ್ ಕಟ್ಟುತ್ತಿದ್ದಾರಂತೆ ಆಪ್ತರು.
ಯೋಗೇಶ್ವರ್ ಪರ 15 ಕೋಟಿ ಬೆಟ್ಟಿಂಗ್!?
ಚನ್ನಪಟ್ಟಣ ಫಲಿತಾಂಶದ ಮೇಲೆ ಚನ್ನಪಟ್ಟಣಕ್ಕಿಂತ ರಾಮನಗರ, ಮದ್ದೂರು, ಮಂಡ್ಯ ಹಾಗೂ ಮೈಸೂರಿನ ಜನ ಹೆಚ್ಚಾಗಿ ತಲೆ ಕೆಡಿಸಿಕೊಂಡಿದ್ದಾರೆ. ಲ್ಯಾಂಡ್ ಡವಲೆಪರ್ಸ್ ಸಹ ಚನ್ನಪಟ್ಟಣ ಅಖಾಡಕ್ಕೆ ಇಳಿದಿದ್ದು, ಕೋಟಿ ಕೋಟಿ ಹಣ ಸುರಿಯುತ್ತಿದ್ದಾರಂತೆ. ಅಷ್ಟೇ ಅಲ್ಲ ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಶಾಸಕರೊಬ್ಬರು ಸಿಪಿ ಯೋಗೇಶ್ವರ್ ಪರ ಬರೋಬ್ಬರಿ 15 ಕೋಟಿಗೂ ಹೆಚ್ಚು ಬೆಟ್ಟಿಂಗ್ ಕಟ್ಟಿದ್ದಾರೆಂದು ಹೇಳಲಾಗುತ್ತಿದೆ.
ಚನ್ನಪಟ್ಟಣ ಬೈ ಎಲೆಕ್ಷನ್ ರಿಸಲ್ಟ್ಗೆ ಕೆಲ ಗಂಟೆಗಳಷ್ಟೇ ಬಾಕಿ ಉಳಿದಿದ್ದು, ಬೆಟ್ಟಿಂಗ್ ಭರಾಟೆ ಜೋರಾಗಿದೆ. ಕೊನೆ ಕ್ಷಣದಲ್ಲೂ ತಮ್ಮ ಅಭ್ಯರ್ಥಿಗಳ ಪರ ಬೆಟ್ಟಿಂಗ್ ಕಟ್ಟಿ ಅದೃಷ್ಟ ಪರೀಕ್ಷೆಗೆ ಕೆಲ ಜನ ಮುಂದಾಗಿದ್ದಾರೆ. ಹೀಗಾಗಿ ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ, ಸಿಪಿ ಯೋಗೇಶ್ವರ್, ಜಮೀರ್ ಅಹ್ಮದ್ ಜೊತೆ ಬೆಟ್ಟಿಂಗ್ ಕಟ್ಟಿದವರ ಭವಿಷ್ಯ ಕೂಡ ನಿರ್ಧಾರ ಆಗಲಿದೆ.