ಜಮೀರ್‌ಗೆ ಚನ್ನಪಟ್ಟಣದ ರಿಸಲ್ಟ್ ಟೆನ್ಶನ್‌ – ನಿಖಿಲ್ ಗೆದ್ರೆ ಸಚಿವ ಸ್ಥಾನ ಖತಂ!?
ಸೈನಿಕ ಗೆದ್ರೆ.. ಅಬ್ಬಬ್ಬಾ ಜಮೀರ್‌ಗೆ ಲಾಟರಿ

ಜಮೀರ್‌ಗೆ ಚನ್ನಪಟ್ಟಣದ ರಿಸಲ್ಟ್ ಟೆನ್ಶನ್‌ – ನಿಖಿಲ್ ಗೆದ್ರೆ ಸಚಿವ ಸ್ಥಾನ ಖತಂ!?ಸೈನಿಕ ಗೆದ್ರೆ.. ಅಬ್ಬಬ್ಬಾ ಜಮೀರ್‌ಗೆ ಲಾಟರಿ

ರಾಜ್ಯದಲ್ಲಿ ನಡೆದಿದ್ದು ಬೈ ಎಲೆಕ್ಷನ್ ಆದ್ರೂ ಇಡೀ ರಾಜ್ಯದಲ್ಲಿ ಸಖತ್  ಸುದ್ದಿಮಾಡುತ್ತಿದೆ. ಇಡೀ ರಾಜ್ಯವೇ 3 ಕ್ಷೇತ್ರಗಳ ಬೈ ಎಲೆಕ್ಷನ್ ರಿಸಲ್ಟ್ಗೆ ಕಾಯುತ್ತಿದ್ದು, ಸೋಲು ಗೆಲುವಿನ ಲೆಕ್ಕಚಾರ ಜೋರಾಗಿ ನಡೆದಿದೆ. ಕೆಲ ಗಂಟೆಯಲ್ಲಿ 3 ಕ್ಷೇತ್ರಗಳಲ್ಲಿ ರಿಸಲ್ಟ್ ಹೊರ ಬೀಳಲಿದ್ದು, ಎಲ್ಲರ ಕಣ್ಣು ಹೆಚ್ಚಾಗಿ ಚನ್ನಪಟ್ಟಣದ ಮೇಲೆ ನೆಟ್ಟಿದೆ. ಹೇಗಾಗಿದೆ ಅಂದ್ರೆ 3 ಕ್ಷೇತ್ರದಲ್ಲಿ 2 ಕ್ಷೇತ್ರ ಸೋತ್ರ ಪರವಾಗಿಲ್ಲ, ಆದ್ರೆ ಚನ್ನಪಟ್ಟಣ ಗೆಲ್ಲಲೇ ಬೇಕು ಅನ್ನೋ ತರದಲ್ಲಿ ಯೋಚನೆ ಮಾಡುತ್ತಿದ್ದಾರೆ ರಾಜ್ಯ ನಾಯಕರು.. ಜೊತೆಗೆ ಚನ್ನಪಟ್ಟಣದ ರಿಸಲ್ಟ್ ಮೇಲೆ ನಿಖಿಲ್, ಸಿಪಿ ಯೋಗೇಶ್ವರ್ ಜೊತೆ ಜಮೀರ್ ಅಹ್ಮದ್ ಭವಿಷ್ಯನೂ ನಿಂತಿದ್ಯಾ?. ಸಿ ಪಿ ಯೋಗೇಶ್ವರ್ ಪರ ಎಷ್ಟು ಕೋಟಿ ಬೆಟ್ಟಿಂಗ್ ನಡೆದಿದೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಜಸ್ಪ್ರೀತ್ ಬುಮ್ರಾ ರಣಾರ್ಭಟ – 1 ಇನ್ನಿಂಗ್ಸ್.. 17 ವಿಕೆಟ್.. ಚರಿತ್ರೆ!

ಕರ್ನಾಟಕದ 3 ಕ್ಷೇತ್ರಗಳ ಬೈ ಎಲೆಕ್ಷನ್ ರಿಸಲ್ಟ್ ಹೊರ ಬೀಳುವುದಕ್ಕೆ  ಕೌಂಟ್ಡೌನ್ ಶುರುವಾಗಿದೆ.  ನ.13ಕ್ಕೆ ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿ ಕ್ಷೇತ್ರದ ಉಪ ಚುನಾವಣೆ ನಡೆದಿತ್ತು.  ಒಂದಿಷ್ಟು ಗಂಟೆಯಲ್ಲೇ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಮೂರು ಕ್ಷೇತ್ರಗಳ ಪೈಕಿ ರಾಜ್ಯದ ಜನ ಕಾತರದಿಂದ ಕಾಯುತ್ತಿರುವುದು  ಚನ್ನಪಟ್ಟಣದ ಫಲಿತಾಂಶಕ್ಕಾಗಿ. ಯಾಂಕದ್ರೆ ಜಿದ್ದಾಜಿದ್ದಿನ ಪ್ರಚಾರದಿಂದ ಕೂಡಿದ್ದ ಈ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ತಮ್ಮ ಸಂಪೂರ್ಣ ಶಕ್ತಿಯನ್ನು ಧಾರೆಗೆರೆದು ಕ್ಯಾಂಪೇನ್ ಮಾಡಿದ್ದಾವೆ. ಡಿಕೆ ಶಿವಕುಮಾರ್ ಮತ್ತು ಹೆಚ್ಡಿಕೆಗೆ ಪ್ರತಿಷ್ಠೆಯಾದ್ರೆ, ನಿಖಿಲ್ ಕುಮಾರ್ ಸ್ವಾಮಿ ಮತ್ತು ಸಿಪಿ ಯೋಗೇಶ್ವರ್ಗೆ ರಾಜಕೀಯ ಭವಿಷ್ಯವನ್ನ ಈ ಎಲೆಕ್ಷನ್ ನಿರ್ಧಾರ ಮಾಡಲಿದೆ. ಒಂದು ವೇಳೆ ಸಿಪಿ ಯೋಗೇಶ್ವರ್ ಸೋತ್ರ ಜಮೀರ್ಗೂ ಸಂಕಷ್ಟ ಪಿಕ್ಸ್ ಅನ್ನೋ ಮಾತು ಕೇಳಿ  ಬರ್ತಿದೆ.

ಒಂದು ವೇಳೆ ಯೋಗೇಶ್ವರ್ ಸೋತ್ರೆ ಕಾರಣ ಜಮೀರ್!

ಹೌದು.. ಮತದಾನ ಮುಗಿದ ಎರಡು ದಿನದ ನಂತರ, ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಆತ್ಮವಿಶ್ವಾಸವನ್ನು ಕಳೆದುಕೊಂಡಂತೆ ಹೇಳಿಕೆಯನ್ನು ನೀಡಿದ್ದರು. ತಮ್ಮ ಪತ್ರಿಕಾಗೋಷ್ಠಿಯಲ್ಲಿ ದೇವೇಗೌಡರು, ಕುಮಾರಸ್ವಾಮಿಯ ಬಗ್ಗೆ ಸೈನಿಕ, ಹೆಮ್ಮೆಯ ಮಾತನ್ನಾಡಿದ್ದರು. ಟಫ್ ಫೈಟ್ ಇದೆ.. ನಾನು ಗೆಲ್ಲುವುದು ಗ್ಯಾರಂಟಿ ಇಲ್ಲ ಅಂತಾ ಹತಾಷೆಯ ಮಾತುಗಳನ್ನ ಆಡಿದ್ರು.. ಅದಕ್ಕೆ ನೇರಾ ಕಾರಣವೇ ಜಮೀರ್. ಬಹಿರಂಗ ಪ್ರಚಾರದ ಕೊನೆಯ ದಿನ ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ದ ಆಡಿದ್ದ ಮಾತು. ಮಾತಿನ ಬರದಲ್ಲಿ ಕುಮಾರಸ್ವಾಮಿಯನ್ನ ಜಮೀರ್ ಕರಿಯ ಎಂದು ಕರೆದಿದ್ದರು.. ಜೊತೆಗೆ, ದೇವೇಗೌಡರ ಕುಟುಂಬವನ್ನೇ ಖರೀದಿಸುವ ಶಕ್ತಿ ಮುಸ್ಲಿಮರಿಗೆ ಎಂದು ಹೇಳಿದ್ದು ಕೂಡಾ ಆಕ್ರೋಶಕ್ಕೆ ಕಾರಣವಾಗಿತ್ತು. ಜಮೀರ್ ಅಹ್ಮದ್ ಅವರ ಹೇಳಿಕೆ, ಸ್ವಲ್ಪಮಟ್ಟಿನ ಡ್ಯಾಮೇಜಿಗೆ ಕಾರಣವಾಗಿದೆ ಎಂದು ಯೋಗೇಶ್ವರ್ ಪ್ರತಿಕ್ರಿಯಿಸಿದ್ದರು.

ಜಮೀರ್ ಅವರ ಹೇಳಿಕೆಯನ್ನು ಖುದ್ದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡಾ ವಿರೋಧಿಸಿದ್ದರು. ಜಮೀರ್ ಹೇಳಿಕೆಯಿಂದಾಗಿ ಜೆಡಿಎಸ್ ಪಾರ್ಟಿಗೆ ಪ್ಲಸ್ ಆಗಿದೆ ಎಂದು ಮಾಗಡಿ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಕೂಡಾ ಹೇಳಿದ್ದರು. ಚನ್ನಪಟ್ಟಣದಲ್ಲಿ ದೇವೇಗೌಡ, ಯಡಿಯೂರಪ್ಪ ಸೇರಿ  ಮೈತ್ರಿ ನಾಯಕರು ಭರ್ಜರಿ ಪ್ರಚಾರವನ್ನು ನಡೆಸಿದ್ದರು. ಇದರ ಜೊತೆಗೆ, ಶೇ. 85ರಷ್ಟು ಮತದಾನವಾಗಿರುವುದು ಜೆಡಿಎಸ್ ಪಕ್ಷಕ್ಕೆ ಲಾಭವಾಗಿದೆ ಎನ್ನುವ ಬಲವಾದ ಮಾತು ಕೇಳಿ ಬರುತ್ತಿದೆ. ಸಿದ್ದರಾಮಯ್ಯನವರ ಆಪ್ತವಲಯದಲ್ಲಿರುವ ಜಮೀರ್ ಅವರನ್ನು ವಜಾಗೊಳಿಸುವಂತೆ ಅಥವಾ ರಾಜೀನಾಮೆ ಪಡೆಯುವಂತೆ ಸಿಎಂ ಮೇಲೆ ಒತ್ತಡ ಹೆಚ್ಚುತ್ತಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕ್ಯಾಂಪಿನ ಜೊತೆಗೂ ಜಮೀರ್ ಗೆ ಉತ್ತಮ ಬಾಂಧವ್ಯವಿಲ್ಲ ಎನ್ನುವುದು ಗೊತ್ತಿರುವ ವಿಚಾರ. ಸಿದ್ದರಾಮಯ್ಯನವರೇ ಐದು ವರ್ಷ ಮುಖ್ಯಮಂತ್ರಿ ಎಂದು ಜಮೀರ್ ಅಹ್ಮದ್ ಸಾಕಷ್ಟು ಬಾರಿ ಹೇಳಿದ್ದು ಕೂಡಾ, ಕಾಂಗ್ರೆಸ್ಸಿನ ಒಂದು ವಲಯದ ಕೋಪಕ್ಕೆ ಕಾರಣವಾಗಿತ್ತು. ಹಲವು ಎಚ್ಚರಿಕೆಯ ನಂತರವೂ ಜಮೀರ್ ತಮ್ಮ ಮಾತನ್ನು ಮುಂದುವರಿಸಿದ್ದರು. ಕೊನೆಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆದು ವಾರ್ನಿಂಗ್ ಕೊಟ್ಟಿದ್ದರು.

ಈ ಎಲ್ಲಾ ಕಾರಣದಿಂದಾಗಿ, ಚನ್ನಪಟ್ಟಣದ ಸೋಲು ಗೆಲುವಿನ ಆಧಾರದ ಮೇಲೆ ಜಮೀರ್ ಅಹ್ಮದ್ ಭವಿಷ್ಯ ನಿಂತಿದೆ. ಒಂದು ವೇಳೆ, ನಿಖಿಲ್ ಕುಮಾರಸ್ವಾಮಿ ಗೆದ್ದರೆ ಜಮೀರ್ ತಲೆದಂಡಕ್ಕೆ ಒತ್ತಡ ಇನ್ನಷ್ಟು ಹೆಚ್ಚುವುದಂತೂ ಗ್ಯಾರಂಟಿ. ಒಂದು ವೇಳೆ, ಯೋಗೇಶ್ವರ್ ಗೆದ್ದರೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಂತೆ.

Shwetha M

Leave a Reply

Your email address will not be published. Required fields are marked *