ಬೈ ಎಲೆಕ್ಷನ್‌ನಲ್ಲಿ ಹಣಕ್ಕಾಗಿ ಕುತಂತ್ರ – ಒಂದೇ ಕ್ಷೇತ್ರದಲ್ಲಿ 50 ಅಭ್ಯರ್ಥಿಗಳು
ಚದುರಿ ಹೋಗುತ್ತಾ ಚನ್ನಪಟ್ಟಣ ಮತ?

ಬೈ ಎಲೆಕ್ಷನ್‌ನಲ್ಲಿ ಹಣಕ್ಕಾಗಿ ಕುತಂತ್ರ – ಒಂದೇ ಕ್ಷೇತ್ರದಲ್ಲಿ 50 ಅಭ್ಯರ್ಥಿಗಳುಚದುರಿ ಹೋಗುತ್ತಾ ಚನ್ನಪಟ್ಟಣ ಮತ?

ಚನ್ನಪಟ್ಟಣದ ಬೈಎಲೆಕ್ಷನ್ ಕ್ಷೇತ್ರ ಸಖತ್ ಹೈವೋಲ್ಟೆಜ್ ಕ್ಷೇತ್ರವಾಗಿದೆ.. ನಿಖಿಲ್ ಕುಮಾರ್ ಸ್ವಾಮಿ ಮತ್ತು ಸಿಪಿ ಯೋಗೇಶ್ವರ್ ನಾನಾ ನೀನಾ ಅಂತಾ ತೊಡೆತಟ್ಟಿ ಅಖಾಡಕ್ಕೆ ಇಳಿದಿದ್ದಾರೆ. ಇಬ್ಬರಿಗೆ ಈ ಎಲೆಕ್ಷನ್ ಪ್ರತಿಷ್ಠೆಯಾಗಿದ್ದು, ಅಳಿವು ಉಳಿವಿನ ಪ್ರಶ್ನೆಯಾಗಿದೆ. ಆದ್ರೆ ಚನ್ನಪಟ್ಟಣದಲ್ಲಿ ಇವರಿಬ್ಬರೇ ಅಖಾಡದಲ್ಲಿ ಇಲ್ಲ.. ಇವರ ಜೊತೆ ಸಾಕಷ್ಟು ಜನ ಕೂಡ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಹಾಗಿದ್ರೆ ಗೆಲ್ಲಲ್ಲ ಅಂತಾ ಗೊತ್ತಿದ್ದರು ಯಾಕೆ ಚುನಾವಣೆಗೆ ನಿಲ್ತಾರೆ?. ಅದ್ರಿಂದ ಅವರಿಗೆ ಏನು ಲಾಭ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: NZ ವಿರುದ್ಧ IND ಕ್ಲೀನ್ ಸ್ವೀಪ್? – ಬುಮ್ರಾ ಔಟ್.. ರಾಹುಲ್ ಎಂಟ್ರಿ?

ರಾಜ್ಯದ ಹೈವೋಲ್ಟೆಜ್‌ ಕ್ಷೇತ್ರವಾಗಿರುವ ಚನ್ನಪಟ್ಟಣ ಉಪ ಚುನಾವಣೆ ದಿನಕ್ಕೊಂದು ಕೌತುಕಗಳಿಗೆ ಕಾರಣವಾಗಿದೆ. ನಾಮಪತ್ರ ಸಲ್ಲಿಕೆ ಮುಕ್ತಾಯಗೊಳ್ಳುವಷ್ಟರಲ್ಲಿ ಬರೋಬ್ಬರಿ 50 ಮಂದಿ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಇದರಲ್ಲಿ ಒಟ್ಟು 62 ನಾಮಪತ್ರ ಸಲ್ಲಿಕೆಯಾಗಿವೆ. ಇದೇ ಮೊದಲ ಸಲ 50 ಅಭ್ಯರ್ಥಿಗಳು ಕಣದಲ್ಲಿರುವುದು ವಿಶೇಷ. ಈ ವರೆಗೂ ನಡೆದ ಚುನಾವಣೆಗಳಲ್ಲಿ.. ಅಬ್ಬಾಬ್ಬ ಎಂದರೂ, 20 ಮಂದಿ ಕಣದಲ್ಲಿದ್ದರೆ ಹೆಚ್ಚು ಎನ್ನುವಂತಿತ್ತು. ಆದರೆ, ಇದೇ ಮೊದಲ ಸಲ 50 ಮಂದಿ ಸ್ಪರ್ಧಿಸಿರುವುದು ವಿಶೇಷ. ನಾಮಪತ್ರ ಹಿಂಪಡೆಯಲು ಇದೇ 30ರ ವರೆಗು ಕಾಲಾವಕಾಶ ಇದೆ. ಅಷ್ಟರೊಳಗೆ ಬಹುತೇಕರು ಕಣದಿಂದ ಹಿಂದೆ ಸರಿಯುವ ಸಾಧ್ಯತೆ ಇದೆ.

ದುಡ್ಡಿಗಾಗಿ ನಾಮಪತ್ರ ಸಲ್ಲಿಕೆ?

ನಾಮಪತ್ರ ಸಲ್ಲಿಕೆಯಲ್ಲಿಯೇ 50 ಮಂದಿ ಇರುವುದು ಇದೇ ಮೊದಲು.   ಚಾಮರಾಜನಗರಿಂದಲೇ 7 ಅಭ್ಯರ್ಥಿಗಳಿದ್ದರೆ, ಚಿಕ್ಕಮಗಳೂರಿನಿಂದಲೂ ಒಬ್ಬರು ಅಭ್ಯರ್ಥಿ ಇದ್ದಾರೆ. ಇನ್ನುಳಿದ ಮದ್ದೂರು, ಹಾಸನ, ಬೆಂಗಳೂರು ಸೇರಿದಂತೆ ರಾಜ್ಯದ ನಾನಾಕಡೆಗಳಿಂದಲೂ ನಾಮಪತ್ರ ಸಲ್ಲಿಕೆಯಾಗಿವೆ. 30ರಷ್ಟು ಅಭ್ಯರ್ಥಿಗಳು ಸ್ಥಳೀಯರಿದ್ದಾರೆ. ಪ್ರಜಾಕೀಯ, ಐಪಿಸಿಪಿ ಸೇರಿದಂತೆ 7 ಮಂದಿ ಪಕ್ಷದಿಂದ ಸ್ಪರ್ಧಿಸಿದರೆ, ಇನ್ನುಳಿದವರೆಲ್ಲರೂ ಪಕ್ಷೇತರರಾಗಿ ತೊಡೆ ತಟ್ಟಿದ್ದಾರೆ. ಯಾಕೆ ಇಷ್ಟೊಂದು ನಾಮಪತ್ರ ರಾಜ್ಯದಲ್ಲಿ ಒಟ್ಟು ಮೂರು ಕಡೆಯಷ್ಟೇ ಉಪಚುನಾವಣೆ ನಡೆಯುತ್ತಿದೆ. ಅದರಲ್ಲೂ ಚನ್ನಪಟ್ಟಣ ಕಣ ಇಡೀ ರಾಜ್ಯದಲ್ಲಿಹೈ ವೋಲ್ಟೆಜ್‌. ಹೀಗಾಗಿ ಇಲ್ಲಿನಾಮಪತ್ರ ಸಲ್ಲಿಕೆ ಹೆಚ್ಚಾಗಿವೆ. ಕೆಲವರಿಗೆ ಎಲ್ಲಚುನಾವಣೆಗಳಲ್ಲಿಯೂ ನಾಮಪತ್ರ ಸಲ್ಲಿಸುವುದೇ ಹವ್ಯಾಸವಾಗಿದೆ. ಕೆಲವರು ಬ್ಯಾಲೆಟ್‌ನಲ್ಲಿಹೆಸರು, ಫೋಟೊ ಕಾಣಿಸಲಿ ಎಂಬ ಉದ್ದೇಶದಿಂದಲೂ ನಾಮಪತ್ರ ಸಲ್ಲಿಸುತ್ತಾರೆ. ಇನ್ನೊಂದಷ್ಟು ಅಭ್ಯರ್ಥಿಗಳನ್ನು ನೇರಾನೇರ ಹೋರಾಟದಲ್ಲಿರುವ ಅಭ್ಯರ್ಥಿಗಳೇ ‘ಡಮ್ಮಿ ಕ್ಯಾಂಡಿಡೆಟ್‌’ ನೆಪದಲ್ಲಿ ಸ್ಪರ್ಧಿಸುವಂತೆ ಮಾಡುತ್ತಾರೆ. ಚುನಾವಣಾ ಖರ್ಚು ವೆಚ್ಚಗಳನ್ನು ಸರಿದೂಗಿಸಲು ಈ ಉಪಾಯ ಮಾಡುತ್ತಾರೆ. ಆದರೆ, ಕೆಲವರು ನಾಮಪತ್ರ ಸಲ್ಲಿಸಿದ ಬಳಿಕ ಹಣಕ್ಕೆ ಬೇಡಿಕೆ ಇಡುತ್ತಾರೆ.  ಒಂದು ಕ್ಷೇತ್ರದಲ್ಲಿ ತ್ರೀಕೋನ ಇಲ್ಲವೇ ಇಬ್ಬರು ಅಭ್ಯರ್ಥಿಗಳು ಹೋರಾಟ ನಡೆಸುತ್ತಿರುತ್ತಾರೆ. ನಾಮಪತ್ರಗಳ ಸಲ್ಲಿಕೆ ಹೆಚ್ಚಾದರೆ ಬ್ಯಾಲೆಟ್‌ ಯೂನಿಟ್‌ಗಳ ಸಂಖ್ಯೆಯು ಹೆಚ್ಚಾಗುತ್ತದೆ. ಕಣದಲ್ಲಿನ ಗೆಲ್ಲುವ ಅಭ್ಯರ್ಥಿಗಳಿಗೆ ಒಂದು ಯೂನಿಟ್‌ಗಿಂತ ಹೆಚ್ಚಿನ ಬ್ಯಾಲೆಟ್‌ಗಳಿದ್ದರೆ ಕಷ್ಟ. ಮತದಾರರಿಗೆ ಗೊಂದಲ ಉಂಟಾಗುತ್ತದೆ. ಮತ ಚದುರುವ ಸಾಧ್ಯತೆಗಳು ಉಂಟು. ಹೀಗಾಗಿ, ಒಂದು ಬ್ಯಾಲೆಟ್‌ಗೆ ಅವಶ್ಯಕವಾಗಿರುವ 15 ಅಭ್ಯರ್ಥಿಗಳಿದ್ದರೆ ಸಾಕು ಎನ್ನುತ್ತಾರೆ. ಹೀಗಾಗಿ ಗೆಲ್ಲುವ ಸಾಧ್ಯತೆಗಳಿರುವ ಅಭ್ಯರ್ಥಿಗಳು ಇನ್ನುಳಿದವರ ನಾಮಪತ್ರ ಹಿಂಪಡೆಸುವ ಕೆಲಸ ಮಾಡುತ್ತಾರೆ. ಈ ವೇಳೆ ಹಣದ ಹಂಚಿಕೆಯು ನಡೆಯುತ್ತದೆ.

ಅಷ್ಟೇ ಅಲ್ಲ ಅಭ್ಯರ್ಥಿಗಳು ಹೆಚ್ಚಾದಷ್ಟು ಪಕ್ಷೇತರರಿಗೆ ಚಿಹ್ನೆ ನೀಡಬೇಕು. ಒಟ್ಟು 900 ಚಿಹ್ನೆಗಳಿವೆ. ಆದರೆ, ಅಭ್ಯರ್ಥಿಗಳು ಹೆಚ್ಚಾದರೆ, ಫ್ಯಾನು, ಬಕೆಟ್‌, ಖುರ್ಚಿ..ಹೀಗೆ ಇಂತಹ ಚಿಹ್ನೆಗಳನ್ನು ನೀಡಬೇಕು. ಇಂತಹ ಚಿಹ್ನೆಗಳನ್ನು ನೀಡಿದರೆ, ಚಿಹ್ನೆಯಲ್ಲಿನ ವಸ್ತುಗಳು ಕಾಣದಂತೆ ಚುನಾವಣೆ ನಡೆಸಬೇಕು. ಫ್ಯಾನ್‌ ಚಿಹ್ನೆ ಪಡೆದರೆ, ಮತದಾನದ ದಿನ ಮತಗಟ್ಟೆಯಲ್ಲಿಯು ಫ್ಯಾನ್‌ ಹಾಕುವಂತಿಲ್ಲ.

Shwetha M

Leave a Reply

Your email address will not be published. Required fields are marked *