‘ಶಾಲಾ ಸಮಯ ಬದಲಾವಣೆ ಮಾಡಿ’ – ಡಾ. ಸಿ. ಎನ್ ಮಂಜುನಾಥ್ ಸಲಹೆ
‘ಮಕ್ಕಳಿಗೆ ನಿದ್ರೆ ಮಾಡಲು ಸಮಯಬೇಕು’ – ಹೃದ್ರೋಗ ತಜ್ಞರ ಸಲಹೆ

‘ಶಾಲಾ ಸಮಯ ಬದಲಾವಣೆ ಮಾಡಿ’ – ಡಾ. ಸಿ. ಎನ್ ಮಂಜುನಾಥ್ ಸಲಹೆ‘ಮಕ್ಕಳಿಗೆ ನಿದ್ರೆ ಮಾಡಲು ಸಮಯಬೇಕು’ – ಹೃದ್ರೋಗ ತಜ್ಞರ ಸಲಹೆ

ತುಮಕೂರು :ಕನಿಷ್ಠ ಎರಡನೇ ತರಗತಿಯವರೆಗೆ ಶಾಲೆಯ ಸಮಯವನ್ನು 10 ಗಂಟೆಯಿಂದ 12.30ರವರೆಗೆ ನಿಗದಿಗೊಳಿಸಬೇಕು. ಈಗಿನ ಶಾಲಾವಧಿ ಮಕ್ಕಳತನವನ್ನೇ ಕಸಿದುಕೊಳ್ಳುತ್ತಿದೆ ಎಂದು ಹೃದ್ರೋಗ ತಜ್ಞ ಡಾ.ಸಿ.ಎನ್ ಮಂಜುನಾಥ್ ಹೇಳಿದ್ದಾರೆ. 7-8 ವರ್ಷದೊಳಗಿನ ಮಕ್ಕಳು ಹೆಚ್ಚು ನಿದ್ದೆ ಮಾಡಬೇಕು. ನಿದ್ರಾಹೀನತೆಯಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತಿದೆ ಎಂದು ಹೃದ್ರೋಗ ತಜ್ಞ ಡಾ.ಸಿ.ಎನ್ ಮಂಜುನಾಥ್ ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  ವಿಧಾನ ಪರಿಷತ್ ಸಭಾಪತಿಯಾಗಿ ಬಸವರಾಜ್ ಹೊರಟ್ಟಿ ಅವಿರೋಧವಾಗಿ ಆಯ್ಕೆ

ಮಕ್ಕಳ ಮೇಲೆ ಮೊಬೈಲ್ ತುಂಬಾ ಪರಿಣಾಮ ಬೀರುತ್ತಿದೆ. ಮಕ್ಕಳ ದೈಹಿಕ, ಮಾನಸಿಕ, ಸಾಮಾಜಿಕ ಆರೋಗ್ಯ ಹಾಳಾಗುತ್ತಿದೆ. ಸಾಮಾಜಿಕ ಜಾಲತಾಣಗಳು ಕೂಡಾ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಇವೆಲ್ಲಾ ಕೂಡಾ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಉಂಟುಮಾಡುತ್ತಿದೆ. ಕಳೆದ 7 ವರ್ಷಗಳಲ್ಲಿ 6 ಸಾವಿರ ಯುವಕರಿಗೆ ಹೃದಯ ಚಿಕಿತ್ಸೆಯನ್ನು ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಮಾಡಲಾಗಿದೆ. ಚಿಕ್ಕವಯಸ್ಸಿನಲ್ಲೇ ಒತ್ತಡ ಪ್ರಾರಂಭವಾಗುತ್ತದೆ. ಇದರಿಂದ ಮಕ್ಕಳ ದೈಹಿಕ ಆರೋಗ್ಯ ಮಾತ್ರವಲ್ಲ. ಮಾನಸಿಕ ಆರೋಗ್ಯವೂ ಹದಗೆಡುತ್ತದೆ ಎಂದು ಹೃದ್ರೋಗ ತಜ್ಞ ಡಾ.ಸಿ.ಎನ್ ಮಂಜುನಾಥ್ ಆತಂಕ ವ್ಯಕ್ತಪಡಿಸಿದ್ದಾರೆ.

suddiyaana