ಎಲ್‍ಕೆಜಿ ಮಕ್ಕಳ ಶಾಲಾ ದಾಖಲಾತಿ ವಯೋಮಿತಿ ಬದಲಾವಣೆ – ಪೋಷಕರ ಕೆಂಗಣ್ಣಿಗೆ ಗುರಿಯಾದ ಶಿಕ್ಷಣ ಇಲಾಖೆ

ಎಲ್‍ಕೆಜಿ ಮಕ್ಕಳ ಶಾಲಾ ದಾಖಲಾತಿ ವಯೋಮಿತಿ ಬದಲಾವಣೆ – ಪೋಷಕರ ಕೆಂಗಣ್ಣಿಗೆ ಗುರಿಯಾದ ಶಿಕ್ಷಣ ಇಲಾಖೆ

ಬೆಂಗಳೂರು: ರಾಜ್ಯದಾದ್ಯಂತ ಪೋಷಕರು ಈಗಾಗಲೇ ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡಿಸುತ್ತಿದ್ದಾರೆ. ಆದರೆ ಈಗ ಶಿಕ್ಷಣ ಇಲಾಖೆ ಎಲ್ ಕೆಜಿ ಮಕ್ಕಳ ದಾಖಲಾತಿಗೆ ವಯಸ್ಸಿನ ಮಿತಿಯನ್ನು ತಿದ್ದುಪಡಿ ಮಾಡಿದ್ದು, ಇನ್ನು ಮುಂದೆ ಎಲ್ ಕೆಜಿಗೆ ಸೇರುವ ಮಕ್ಕಳಿಗೆ ಕಡ್ಡಾಯವಾಗಿ 4 ವರ್ಷ ತುಂಬಿರಬೇಕು ಎಂದು ಆದೇಶ ಹೊರಡಿಸಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ರೋಡ್ ಶೋ – ಜೇನು ನೊಣ, ಬೀದಿ ನಾಯಿ, ಹಾವು, ಕೋತಿಗಳಿಗೆ ಬಂಧನ ಭೀತಿ!

2025 ಹಾಗೂ 26ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಯ ದಾಖಲಾತಿಗೆ 6 ವರ್ಷ ಪೂರ್ಣಗೊಂಡಿರುವುದು ಕಡ್ಡಾಯ ಎಂಬ ನಿಯಮ ಜಾರಿ ಮಾಡಲಾದ ಹಿನ್ನಲೆಯಲ್ಲಿ ಎಲ್‍ಕೆಜಿಗೆ ಈ ವಯಸ್ಸನ್ನು ನಿಗದಿ ಪಡಿಸಲಾಗಿದೆ. ಮುಂದಿನ ಸಾಲಿನಿಂದ ಒಂದನೇ ತರಗತಿಗೆ ದಾಖಲಾಗಲು 6 ವರ್ಷ ಕಡ್ಡಾಯ ಎಂದು ಇಲಾಖೆ ಆದೇಶದಲ್ಲಿ ಉಲ್ಲೇಖಿಸಿದೆ. ಈ ಆದೇಶ ಈಗ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಖಾಸಗಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಆರಂಭವಾಗಿದ್ದು, ಇದು ಚರ್ಚೆಗೆ ಗ್ರಾಸವಾಗಿದೆ.

ಮಕ್ಕಳನ್ನು ಪೂರ್ವ ಪ್ರಾಥಮಿಕ ಶಾಲಾ ದಾಖಲಾತಿ ಮಾಡಲು ವಯೋಮಿತಿಯನ್ನು ನಿರ್ಧರಿಸುವ ಬಗ್ಗೆ ಎಂಬ ವಿಚಾರವನ್ನು ಈ ಆದೇಶ ಒಳಗೊಂಡಿದೆ. ಆರ್. ಟಿ. ಇ ಕಾಯಿದೆ 2009 ಮತ್ತು ಕಡ್ಡಾಯ ಶಿಕ್ಷಣ ನಿಯಮಗಳು 2012ರಂತೆ ಶೈಕ್ಷಣಿಕ ವರ್ಷದ ಜೂನ್ 1ನೇ ತಾರೀಖಿಗೆ ಕಡ್ಡಾಯವಾಗಿ 6 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ.

suddiyaana