ಚಂದಿರನಿಗೆ ಇನ್ನಷ್ಟು ಹತ್ತಿರವಾದ ಚಂದ್ರಯಾನ – 3 ನೌಕೆ – ಚಂದ್ರನನ್ನು ಸ್ಪರ್ಶಿಸಲು 9 ದಿನಗಳು ಮಾತ್ರ ಬಾಕಿ!

ಚಂದಿರನಿಗೆ ಇನ್ನಷ್ಟು ಹತ್ತಿರವಾದ ಚಂದ್ರಯಾನ – 3 ನೌಕೆ – ಚಂದ್ರನನ್ನು ಸ್ಪರ್ಶಿಸಲು 9 ದಿನಗಳು ಮಾತ್ರ ಬಾಕಿ!

ನವದೆಹಲಿ: ಭಾರತದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ – 3 ಈಗ ಮತ್ತೊಂದು ಯಶಸ್ವಿ ಹೆಜ್ಜೆಯೊಂದನ್ನು ಇಟ್ಟಿದೆ. ಚಂದ್ರನ ಅಂಗಳಕ್ಕೆ ಕಳುಹಿಸಿರುವ ನೌಕೆಯು ಚಂದ್ರನ ಮೇಲ್ಮೈ ತಲುಪಲು ಕೇವಲ 177 ಕಿಮೀ ಅಷ್ಟೇ ಕ್ರಮಿಸಬೇಕಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಜುಲೈ 16 ರಂದು ಶ್ರೀಹರಿಕೋಟದಿಂದ ಉಡಾವಣೆಯಾದ ಚಂದ್ರಯಾನ – 3 ನೌಕೆಯೂ ಆಗಸ್ಟ್‌ 5 ರಂದು ಚಂದ್ರನ ಕಕ್ಷೆ ಪ್ರವೇಶಿಸಿತ್ತು. ಆಗಸ್ಟ್‌ 6 ಮತ್ತು 9 ಎಂದು ತನ್ನ ಕಕ್ಷೆಯನ್ನು ಎತ್ತರವನ್ನು ಕಡಿಮೆಗೊಳಿಸುವ  ಕಾರ್ಯವನ್ನು 2 ಬಾರಿ ನಡೆಸಿತ್ತು. ಇದೀಗ ನೌಕೆಯೂ ತನ್ನ ಕಕ್ಷೆಯ ಪರಿಚಲನೆಯ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಅದರ ಅಂತಿಮ ಗಮ್ಯಸ್ಥಾನಕ್ಕೆ ಇನ್ನಷ್ಟು ಹತ್ತಿರವಾಗಿದೆ. ಇಸ್ರೋ ಬಾಹ್ಯಾಕಾಶ ನೌಕೆಯ ಕಕ್ಷೆಯನ್ನು 150 ಕಿಮೀ x 177 ಕಿಮೀಗೆ ಇಳಿಸಿದೆ ಎಂದು ಇಸ್ರೋ ಟ್ವೀಟ್‌ ಮಾಡಿದೆ.

ಇದನ್ನೂ ಓದಿ: ಇಳಕಲ್ ಸೀರೆಯಲ್ಲಿ ಮೂಡಿದ ರಾಷ್ಟ್ರಧ್ವಜ & ಚಂದ್ರಯಾನ 3 – ಕಲಾವಿದನ ಕೈಚಳಕಕ್ಕೆ ಜನ ಬೆರಗು

ಈ ಕಾರ್ಯಾಚರಣೆಯು ಕಕ್ಷೆಯ ಪರಿಚಲನೆ ಹಂತದ ಭಾಗವಾಗಿತ್ತು, ಇದು ಬಾಹ್ಯಾಕಾಶ ನೌಕೆಯನ್ನು ಚಂದ್ರನ ಸುತ್ತ ವೃತ್ತಾಕಾರದ ಕಕ್ಷೆಯಲ್ಲಿ ಇರಿಸುವ ಗುರಿಯನ್ನು ಹೊಂದಿದೆ. ಈ ಹಂತವು ಮಿಷನ್‌ನ ಯಶಸ್ಸಿಗೆ ನಿರ್ಣಾಯಕವಾಗಿದೆ. ಏಕೆಂದರೆ ಇದು ನಂತರದ ಲ್ಯಾಂಡಿಂಗ್ ಪ್ರಯತ್ನಕ್ಕೆ ವೇದಿಕೆಯನ್ನು ಹೊಂದಿಸುತ್ತದೆ.

ನೌಕೆಯ ಮುಂದಿನ ಕಾರ್ಯಾಚರಣೆಯನ್ನು ಆಗಸ್ಟ್‌ 16 ಕ್ಕೆ ನಿಗದಿಪಡಿಸಲಾಗಿದೆ. ಈ ಕಾರ್ಯಾಚರಣೆಯು ಬಾಹ್ಯಾಕಾಶ ನೌಕೆಯ ಕಕ್ಷೆಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಅದನ್ನು ಚಂದ್ರನ ಮೇಲ್ಮೈಗೆ ಇನ್ನಷ್ಟು ಹತ್ತಿರ ತರುತ್ತದೆ. ಈಗ ನೌಕೆಯು ಚಂದ್ರನ ಮೇಲೆ ಇಳಿಯಲು ಕೇವಲ 9 ದಿನಗಳು ಮಾತ್ರ ಉಳಿದಿವೆ. ಆಗಸ್ಟ್ 23 ರಂದು ಚಂದ್ರನ ಮೇಲೆ ಇಳಿಯುವ ನಿರೀಕ್ಷೆಯಿದೆ.

suddiyaana