ಚಂದ್ರಯಾನ -4 ಕ್ಕೆ ಅಣಿಯಾದ ಇಸ್ರೋ – ಚಂದ್ರನ ಮೇಲೆ ಲ್ಯಾಂಡ್‌ ಮಾತ್ರವಲ್ಲ ಮರಳಿ ಭೂಮಿಗೆ ಬರುತ್ತೆ ಈ ನೌಕೆ!

ಚಂದ್ರಯಾನ -4 ಕ್ಕೆ ಅಣಿಯಾದ ಇಸ್ರೋ – ಚಂದ್ರನ ಮೇಲೆ ಲ್ಯಾಂಡ್‌ ಮಾತ್ರವಲ್ಲ ಮರಳಿ ಭೂಮಿಗೆ ಬರುತ್ತೆ ಈ ನೌಕೆ!

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಚಂದ್ರಯಾನ -3 ಸಕ್ಸಸ್‌ ಕಂಡಿದ್ದು, ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದೆ. ಚಂದ್ರಯಾನ – 3 ಯಶಸ್ಸು ಕಂಡ ಬೆನ್ನಲ್ಲೇ ಇಸ್ರೋ ಇನ್ನೊಂದು ಹೆಜ್ಜೆ ಮುಂದೆ ಇಟ್ಟಿದೆ. ಬಾಹ್ಯಾಕಾಶ ಸಂಸ್ಥೆ ಮತ್ತೊಮ್ಮೆ ಚಂದ್ರನನ್ನು ಅನ್ವೇಷಿಸಲು ಮುಂದಾಗಿದೆ.

ಹೌದು, ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಮ್ಮೆ ಚಂದ್ರನ ಮೇಲೆ ಅಧ್ಯಯನ ನಡೆಸಲು ಮುಂದಾಗಿದೆ. ಚಂದ್ರಯಾನ -4 ಯೋಜನೆಯು ಚಂದ್ರಯಾನ -3 ಯೋಜನೆಗಿಂತಲೂ ಸ್ವಲ್ಪ ಭಿನ್ನವಾಗಿರಲಿದೆ. ಎಲ್‌ವಿಎಂ – ಮಾರ್ಕ್ 3 ಮತ್ತು ಪಿಎಸ್‌ಎಲ್‌ವಿ ರಾಕೆಟ್‌ಗಳನ್ನು ಬಳಸಿಕೊಂಡು ಎರಡು ಪ್ರತ್ಯೇಕ ಹಂತಗಳಲ್ಲಿ ಉಡಾವಣೆಗೊಳಿಸಲು ಇಸ್ರೋ ಮುಂದಾಗಿದೆ.

ಇದನ್ನೂ ಓದಿ: ರಾಖಿ ಸಾವಂತ್‌ಗೆ ಶಾಕ್‌ ಮೇಲೆ ಶಾಕ್‌! – ಸೀಕ್ರೆಟ್‌ ಆಗಿ ಎರಡನೇ ಮದುವೆ ಆದ ಪತಿ ಆದಿಲ್ ಖಾನ್!

ಈ ಕುರಿತು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರು ರಾಷ್ಟ್ರೀಯ ಬಾಹ್ಯಾಕಾಶ ವಿಜ್ಞಾನ ವಿಚಾರ ಸಂಕಿರಣದಲ್ಲಿ ಮಾತನಾಡಿದ್ದಾರೆ. ಚಂದ್ರಯಾನ – 4 ಕೇವಲ ಚಂದ್ರನ ಮೇಲೆ ಇಳಿಯುವ ಗುರಿಯನ್ನು ಮಾತ್ರವೇ ಹೊಂದಿಲ್ಲ. ಅದರೊಂದಿಗೆ ಚಂದ್ರನ ರೆಗೋಲಿತ್ ಎಂದು ಕರೆಯಲ್ಪಡುವ ಕಲ್ಲುಗಳು ಮತ್ತು ಮಣ್ಣಿನ ಮೊದಲ ಮಾದರಿಗಳೊಂದಿಗೆ ಭೂಮಿಗೆ ಹಿಂತಿರುಗುತ್ತದೆ. ಚಂದ್ರನ ಮೇಲ್ಮೈಯಿಂದ ಮಾದರಿಗಳನ್ನು ಸಂಗ್ರಹಿಸುವುದು ಮತ್ತು ವೈಜ್ಞಾನಿಕ ಅಧ್ಯಯನಕ್ಕಾಗಿ ಮಾದರಿಗಳನ್ನು ಸುರಕ್ಷಿತವಾಗಿ ಭೂಮಿಗೆ ಹಿಂದಿರುಗಿಸುವುದು ಪ್ರಾಥಮಿಕ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

ಚಂದ್ರಯಾನ-4 ಚಂದ್ರನ ಮೇಲೆ ಏನೇನು ಕೆಲಸ ಮಾಡಲಿದೆ?

ಚಂದ್ರಯಾನ ಸರಣಿಯ ನಾಲ್ಕನೇ ಮಿಷನ್ ಭಾಗವು ಅದರ ಮಿಷನ್ ಅವಧಿಯ ಉದ್ದಕ್ಕೂ ಚಂದ್ರನ ಮೇಲೆ ಅನೇಕ ಉದ್ದೇಶಗಳನ್ನು ಹೊಂದಿರುತ್ತದೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ..

  • ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮತ್ತು ಸಾಫ್ಟ್‌ ಲ್ಯಾಂಡಿಂಗ್‌ ಆಗುವುದು
  • ಚಂದ್ರನ ಮಾದರಿ ಸಂಗ್ರಹಣೆಯನ್ನು ಅತ್ಯಂತ ಯಶಸ್ವಿಯಾಗಿ ಮಾಡುವುದು
  • ಚಂದ್ರನ ಮೇಲ್ಮೈಯಿಂದ ಯಶಸ್ವಿಯಾಗಿ ಉಡಾವಣೆಯಾಗುವುದು
  • ಚಂದ್ರನ ಕಕ್ಷೆಯಲ್ಲಿ ಡಾಕಿಂಗ್ ಮತ್ತು ಅನ್‌ಡಾಕಿಂಗ್ ಅನ್ನು ನಿರ್ವಹಿಸುವುದು
  • ಒಂದು ಮಾಡ್ಯೂಲ್‌ನಿಂದ ಇನ್ನೊಂದಕ್ಕೆ ಮಾದರಿಗಳ ವರ್ಗಾವಣೆ ಮಾಡುವುದು
  • ಮಾದರಿಯನ್ನು ಹೊತ್ತ ಮಾಡ್ಯುಲ್‌ ಭೂಮಿಗೆ ಹಿಂತಿರುಗುವುದು

Shwetha M