ಚಂದ್ರನಿಗೆ ಇನ್ನಷ್ಟು ಹತ್ತಿರ ಸಮೀಪಿಸಿದ ಚಂದ್ರಯಾನ – 3 ಗಗನನೌಕೆ – 2.6 ಲಕ್ಷ ಕಿ.ಮೀ. ಕ್ರಮಿಸಿದ ಲ್ಯಾಂಡರ್​

ಚಂದ್ರನಿಗೆ ಇನ್ನಷ್ಟು ಹತ್ತಿರ ಸಮೀಪಿಸಿದ ಚಂದ್ರಯಾನ – 3 ಗಗನನೌಕೆ – 2.6 ಲಕ್ಷ ಕಿ.ಮೀ. ಕ್ರಮಿಸಿದ ಲ್ಯಾಂಡರ್​

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಚಂದ್ರಯಾನ-3 ಗಗನನೌಕೆಯು ಭೂಮಿಯಿಂದ ದೂರವಾಗಿ ಚಂದ್ರನಿಗೆ ಹತ್ತಿರವಾಗುತ್ತಿದೆ. ಭೂಮಿಯನ್ನು ಯಶಸ್ವಿಯಾಗಿ ಐದು ಸುತ್ತು ಹೊಡೆದು ಕಕ್ಷೆಯನ್ನು ಪೂರ್ಣಗೊಳಿಸಿ ಈಗ ಚಂದ್ರನ ಕಕ್ಷೆಯತ್ತ ಹೊರಟಿದೆ. ಲೂನರ್ ಟ್ರಾನ್ಸ್ಫರ್ ಟ್ರಾಜೆಕ್ಟರಿ ಪಥದಲ್ಲಿ ಗಗನನೌಕೆ ಸಾಗುತ್ತಿದೆ.

ಚಂದ್ರಯಾನ – 3 ನ ಲ್ಯಾಂಡರ್‌ ಬರೋಬ್ಬರಿ 2.6 ಲಕ್ಷ ಕಿ.ಮೀ. ದೂರವನ್ನು ಕ್ರಮಿಸಿದ್ದು, ಪ್ರಯಾಣದ ಮೂರನೇ ಎರಡರಷ್ಟು ಭಾಗವನ್ನು ಯಶಸ್ವಿಯಾಗಿ ಪೂರೈಸಿದೆ. ಬಾಹ್ಯಾಕಾಶ ನೌಕೆ ಸುಮಾರು 2.6 ಲಕ್ಷ ಕಿಲೋಮೀಟರ್ ಗಳನ್ನು ಕ್ರಮಿಸಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ.

ಇದನ್ನೂ ಓದಿ:  ದೇಶ ತೊರೆಯುತ್ತಿದ್ದಾರೆ ಪಾಕಿಸ್ತಾನಿ ಪ್ರಜೆಗಳು – 6 ತಿಂಗಳಲ್ಲಿ ಬರೋಬ್ಬರಿ 8 ಲಕ್ಷ ಜನ ಪಲಾಯನ!

ಇಸ್ರೋ ಶನಿವಾರ ಬೆಳಗ್ಗೆ 7:00 ಗಂಟೆ ಹೊತ್ತಿಗೆ ಚಂದ್ರನ ಕಕ್ಷೆಗೆ ಬಾಹ್ಯಾಕಾಶ ನೌಕೆಯನ್ನು ಸೇರಿಸಲು ನಿಗದಿಪಡಿಸಿದ್ದಾರೆ. ಈ ನಿರ್ಣಾಯಕ ಹಂತವು ಯಶಸ್ವಿ ಆದಲ್ಲಿ ನಿರೀಕ್ಷಿತ ಸಮಯಕ್ಕೆ ಚಂದಿರನ ಅಂಗಳದಲ್ಲಿ ಲ್ಯಾಂಡ್ ಆಗಲಿದೆ.

LOI ಪ್ರಕ್ರೀಯೆ ಒಂದು ನಿರ್ಣಾಯಕ ಮನ್ಯೂವರ್​ ಆಗಿದ್ದು ಚಂದ್ರನ ಕಕ್ಷೆಯನ್ನು ಸೇರಿಸಲು ಬಾಹ್ಯಾಕಾಶ ನೌಕೆಯ ಟ್ರಜೆಕ್ಟರಿ ಹೊಂದಿಸಲಾಗುತ್ತದೆ. ಇದು ಗಮನಾರ್ಹವಾದ ಇಂಧನದ ಸುಡುವಿಕೆಯನ್ನು ಒಳಗೊಂಡಿರುತ್ತದೆ. ಇದನ್ನು ಸಾಮಾನ್ಯವಾಗಿ ಕೆಮಿಕಲ್​ ರಾಕೆಟ್ ಎಂಜಿನ್ ನಿರ್ವಹಿಸುತ್ತದೆ. ಇದು ಬಾಹ್ಯಾಕಾಶ ನೌಕೆಯ ವೇಗವನ್ನು ಹೆಚ್ಚಿಸುತ್ತದೆ.

LOI ಮನ್ಯೂವರ್​ ಯಶಸ್ವಿಯಾಗಿ ಪೂರ್ಣಗೊಂಡ ನಂತರ, ಚಂದ್ರಯಾನ್-3ಅನ್ನು ಚಂದ್ರನ ಸುತ್ತಲಿನ ಕಕ್ಷೆಯಲ್ಲಿ ಸೇರಿಸಲಾಗುತ್ತದೆ. ಬಾಹ್ಯಾಕಾಶ ನೌಕೆ ನಂತರ ಚಂದ್ರನ ಮೇಲ್ಮೈಯನ್ನು ತಲುಪಲು ಸಂಕೀರ್ಣ ಮನ್ಯೂವರ್​ ಸರಣಿಯನ್ನು ಪ್ರಾರಂಭಿಸುತ್ತದೆ. ಇವುಗಳಲ್ಲಿ ಲ್ಯಾಂಡರ್​ನ ಬೇರ್ಪಡಿಕೆ, ಡಿಬೂಸ್ಟ್ ಮನ್ಯೂವರ್​ ನಡೆದು ಅಂತಿಮವಾಗಿ ಚಂದ್ರನ ಮೇಲ್ಮೈಯಲ್ಲಿ ಮೃದುವಾದ ಲ್ಯಾಂಡಿಂಗ್​ ಆಗುವ ಹಂತ ಸೇರಿವೆ.

suddiyaana