ಚಂದ್ರಯಾನ -3 ಲ್ಯಾಂಡಿಂಗ್‌ ಮುಂದೂಡಿಕೆ? – ಇಸ್ರೋ ಹೇಳಿದ್ದೇನು?

ಚಂದ್ರಯಾನ -3 ಲ್ಯಾಂಡಿಂಗ್‌ ಮುಂದೂಡಿಕೆ? – ಇಸ್ರೋ ಹೇಳಿದ್ದೇನು?

ಬಹುನಿರೀಕ್ಷಿತ ಚಂದ್ರಯಾನ-3ರ ವಿಕ್ರಮ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿಯುವುದನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಇದೀಗ ವಿಕ್ರಮ್‌  ಲ್ಯಾಂಡರ್‌ ಲ್ಯಾಂಡಿಂಗ್‌ ಬಗ್ಗೆ ಮಹತ್ವದ ಮಾಹಿತಿಯನ್ನು ಇಸ್ರೋ ಹಂಚಿಕೊಂಡಿದೆ. ಲ್ಯಾಂಡಿಂಗ್‌ ವೇಳೆ ಯಾವುದಾದರೂ  ಅಂಶ ಪ್ರತಿಕೂಲವಾಗಿ ಕಂಡು ಬಂದರೆ ಆಗಸ್ಟ್‌ 23 ರಂದು ಲ್ಯಾಂಡಿಂಗ್‌ ಮಾಡಲಾಗುವುದಿಲ್ಲ ಎಂದು ಇಸ್ರೋ ಹೇಳಿದೆ.

ವಿಕ್ರಮ್‌ ಲ್ಯಾಂಡರ್‌ ಆಗಸ್ಟ್‌ 23ರಂದು ಲ್ಯಾಂಡ್ ಆಗಲಿದೆ ಎಂದು ಇಸ್ರೋ ಹೇಳಿತ್ತು. ಇದೀಗ ಲ್ಯಾಂಡರ್ ಮಾಡ್ಯೂಲ್‌ಗೆ  ಸಂಬಂಧಿಸಿದಂತೆ ಯಾವುದೇ ಅಂಶ ಪ್ರತಿಕೂಲವಾಗಿ ಕಂಡುಬಂದರೆ ಲ್ಯಾಂಡಿಂಗ್ ಅನ್ನು ಆಗಸ್ಟ್ 27ಕ್ಕೆ ಮಂದೂಡಲಾಗುವುದು ಎಂದುಇಸ್ರೋ ಹೇಳಿದೆ.

ಇದನ್ನೂ ಓದಿ: ಚಂದ್ರಯಾನ -3 ಯಶಸ್ಸಿಗಾಗಿ ನಾಗರ ಪಂಚಮಿಯಂದು ಕುಕ್ಕೆ ಸುಬ್ಯಹ್ಮಣ್ಯದಲ್ಲಿ ವಿಶೇಷ ಪೂಜೆ

ಲ್ಯಾಂಡರ್ ಮಾಡ್ಯೂಲ್‌ನ ಸ್ಥಿತಿ ಮತ್ತು ಚಂದ್ರನ ಮೇಲಿನ ಪರಿಸ್ಥಿತಿಗಳ ಆಧಾರದ ಮೇಲೆ ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಹಮದಾಬಾದ್‌ನ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರ ಇಸ್ರೋದ ನಿರ್ದೇಶಕ ನೀಲೇಶ್ ಎಂ.ದೇಸಾಯಿ ಮಾಹಿತಿ ನೀಡಿದ್ದಾರೆ.

ಆಗಸ್ಟ್ 23ರಂದು ಚಂದ್ರಯಾನ-3 ಚಂದ್ರನ ಮೇಲೆ ಇಳಿಯುವ ಎರಡು ಗಂಟೆಗಳ ಮೊದಲು ಲ್ಯಾಂಡರ್ ಮಾಡ್ಯೂಲ್‌ನ ಸ್ಥಿತಿ ಮತ್ತು ಚಂದ್ರನ ಮೇಲಿನ ಪರಿಸ್ಥಿತಿಗಳ ಆಧಾರದ ಮೇಲೆ ಆ ಸಮಯದಲ್ಲಿ ಲ್ಯಾಂಡಿಂಗ್ ಸೂಕ್ತವೇ ಅಥವಾ ಇಲ್ಲವೇ ಎಂಬುದನ್ನು ನಾವು ನಿರ್ಧರಿಸುತ್ತೇವೆ. ಯಾವುದೇ ಅಂಶ ಅನುಕೂಲಕರವಾಗಿಲ್ಲ ಎಂದು ತೋರಿದರೆ ಆಗಸ್ಟ್ 27ರಂದು ಮಾಡ್ಯೂಲ್ ಅನ್ನು ಚಂದ್ರನ ಮೇಲೆ ಇಳಿಸುತ್ತೇವೆ. ಆಗಸ್ಟ್ 23ರಂದು ಲ್ಯಾಂಡಿಂಗ್ ವೇಳೆ ಯಾವುದೇ ಸಮಸ್ಯೆ ಎದುರಾಗದಿರಲಿ ಎಂದು ದೇಸಾಯಿ ಹೇಳಿದ್ದಾರೆ.

suddiyaana