ಹೊಸ ಮೈಲುಗಲ್ಲಿನತ್ತ ಇಸ್ರೋ – ಚಂದ್ರಯಾನ-3ರ ಪ್ರಮುಖ ಎಂಜಿನ್ ಪರೀಕ್ಷೆಯಲ್ಲಿ ಪಾಸ್  

ಹೊಸ ಮೈಲುಗಲ್ಲಿನತ್ತ ಇಸ್ರೋ – ಚಂದ್ರಯಾನ-3ರ ಪ್ರಮುಖ ಎಂಜಿನ್ ಪರೀಕ್ಷೆಯಲ್ಲಿ ಪಾಸ್  

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯ ಚಂದ್ರಯಾನ – 2 ನ ಮುಂದುವರಿದ ಭಾಗ ಚಂದ್ರಯಾನ -3 ಯೋಜನೆಗೆ ಸಂಬಂಧಿಸಿದ ಎಲ್ಲಾ ಪರೀಕ್ಷೆಗಳು ಯಶಸ್ವಿಯಾಗಿ ನಡೆದಿದೆ. ಚಂದ್ರನ ಅಂಗಳಕ್ಕೆ ಉಡಾವಣೆಗೆ ಬಳಸುವ ರಾಕೆಟ್‌ನ ಕೊನೆಯ ಹಂತವಾದ ಕ್ರಯೋಜನಿಕ್‌ಗೆ ಶಕ್ತಿ ತುಂಬುವ ಸಿಇ-20 ಕ್ರಯೋಜನಿಕ್ ಇಂಜಿನ್‌ನ ಪರೀಕ್ಷೆ ಪಾಸ್ ಆಗಿದೆ ಅಂತಾ ಇಸ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಫೆಬ್ರವರಿ 24 ರಂದು ತಮಿಳುನಾಡಿನ ಮಹೇಂದ್ರಗಿರಿಯಲ್ಲಿರುವ ಇಸ್ರೋ ಪ್ರೊಪಲ್ಷನ್ ಕಾಂಪ್ಲೆಕ್ಸ್‌ನ ಹೈ ಆಲ್ಟಿಟ್ಯೂಡ್ ಟೆಸ್ಟ್ ಫೆಸಿಲಿಟಿಯಲ್ಲಿ ಯೋಜಿತ ಅವಧಿಗೆ 25 ಸೆಕೆಂಡುಗಳ ಕಾಲ ಹಾಟ್‌ ಟೆಸ್ಟ್‌  ನಡೆಸಲಾಯಿತು. ಈ ಪರೀಕ್ಷೆಯಲ್ಲಿ ಸಿಇ-20 ಕ್ರಯೋಜನಿಕ್ ಇಂಜಿನ್‌ ಪಾಸ್ ಆಗಿದೆ ಎಂದು ಇಸ್ರೋ ಹೇಳಿದೆ.

ಇದನ್ನೂ ಓದಿ:  ಮನುಷ್ಯರಿಗಿಂತ ತಂತ್ರಜ್ಞಾನಕ್ಕೆ ಜೈ ಎಂದ ಉದ್ಯಮಿಗಳು – 50 ಪರ್ಸೆಂಟ್ ನೌಕರರ ಕೆಲಸಕ್ಕೆ ಕತ್ತರಿ..!

ಪರೀಕ್ಷೆಯ ಸಮಯದಲ್ಲಿ ಎಲ್ಲಾ ಪ್ರೊಪಲ್ಷನ್ ಪ್ಯಾರಾಮೀಟರ್‌ಗಳು ತೃಪ್ತಿಕರವಾಗಿ ಕಂಡುಬಂದಿವೆ ಮತ್ತು ಮುನ್ಸೂಚನೆಗಳೊಂದಿಗೆ ನಿಕಟವಾಗಿ ಹೊಂದಾಣಿಕೆಯಾಗಿದೆ.  ಕ್ರಯೋಜನಿಕ್ ಹಂತದಲ್ಲಿ ಎಂಜಿನ್‌ನ ಇಂಧನ ಟ್ಯಾಂಕ್ ರಚನೆ ಹಾಗೂ ಇಂಧನ ಕೊಳವೆಗಳನ್ನು ಮತ್ತಷ್ಟು ಸುಧಾರಿಸಲಾಗಿದ್ದು ಬಾಹ್ಯಾಕಾಶ ಸಂಶೋಧನೆಯಲ್ಲಿ ಇದೊಂದು ಮೈಲುಗಲ್ಲು ಎಂದು ಇಸ್ರೋ ಹೇಳಿದೆ.

ಸಂಪೂರ್ಣ-ಸಂಯೋಜಿತ ಫ್ಲೈಟ್ ಕ್ರಯೋಜೆನಿಕ್ ಹಂತವನ್ನು ಅರಿತುಕೊಳ್ಳಲು ಕ್ರಯೋಜೆನಿಕ್ ಎಂಜಿನ್ ಅನ್ನು ಪ್ರೊಪೆಲ್ಲಂಟ್ ಟ್ಯಾಂಕ್‌ಗಳು, ಸ್ಟೇಜ್ ಸ್ಟ್ರಕ್ಚರ್‌ಗಳು ಮತ್ತು ಸಂಬಂಧಿತ ದ್ರವ ರೇಖೆಗಳೊಂದಿಗೆ ಮತ್ತಷ್ಟು ಸಂಯೋಜಿಸಲಾಗುವುದು. ಇದಕ್ಕೂ ಮುನ್ನ, ಈ ವರ್ಷದ ಆರಂಭದಲ್ಲಿ ಚಂದ್ರಯಾನ-3 ಲ್ಯಾಂಡರ್ ಯು ಆರ್ ರಾವ್ ಉಪಗ್ರಹ ಕೇಂದ್ರದಲ್ಲಿ  ಇಎಂಐ/ಇಎಂಸಿ  ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತ್ತು. ಬಾಹ್ಯಾಕಾಶ ಪರಿಸರದಲ್ಲಿ ಉಪಗ್ರಹ ಉಪವ್ಯವಸ್ಥೆಗಳ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ನಿರೀಕ್ಷಿತ ವಿದ್ಯುತ್ಕಾಂತೀಯ ಮಟ್ಟಗಳೊಂದಿಗೆ ಅವುಗಳ ಹೊಂದಾಣಿಕೆಯನ್ನು ಖಚಿತಪಡಿಸಿಕೊಳ್ಳಲು ಉಪಗ್ರಹ ಕಾರ್ಯಾಚರಣೆಗಳಿಗಾಗಿ ಇಎಂಐ/ಇಎಂಸಿ  (ಎಲೆಕ್ಟ್ರೋ – ಮ್ಯಾಗ್ನೆಟಿಕ್ ಇಂಟರ್ಫರೆನ್ಸ್ / ಎಲೆಕ್ಟ್ರೋ – ಮ್ಯಾಗ್ನೆಟಿಕ್ ಹೊಂದಾಣಿಕೆ) ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ. “ಈ ಪರೀಕ್ಷೆಯು ಉಪಗ್ರಹಗಳಿಗೆ ಪ್ರಮುಖ ಮೈಲಿಗಲ್ಲು” ಎಂದೂ ಇಸ್ರೋ ಹೇಳಿದೆ.

2019 ಜುಲೈ 22ರಂದು ಶ್ರೀ ಹರಿಕೋಟ ಬಾಹ್ಯಾಕಾಶ ಕೇಂದ್ರದಿಂದ ‘ಚಂದ್ರಯಾನ-2’ ನೌಕೆಯನ್ನು ಇಸ್ರೋ ಉಡಾವಣೆ ಮಾಡಿತ್ತು. ಆದರೆ ಅದು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುವ ಹಂತದಲ್ಲಿ ವಿಫಲವಾಯಿತು.

suddiyaana