ಚಂದ್ರಪ್ರಭಗೆ ಸಿಕ್ತಾ ಹೊಸ ಆಫರ್‌? – ಬಿಗ್‌ಬಾಸ್‌ QUIT ಮಾಡಿದ್ದು ಗಿಮಿಕ್?‌
ಮೊದಲೇ ಎಲ್ಲಾ ಒಪ್ಪಂದ ಆಗಿತ್ತಾ?

ಚಂದ್ರಪ್ರಭಗೆ ಸಿಕ್ತಾ ಹೊಸ ಆಫರ್‌? – ಬಿಗ್‌ಬಾಸ್‌ QUIT ಮಾಡಿದ್ದು ಗಿಮಿಕ್?‌ಮೊದಲೇ ಎಲ್ಲಾ ಒಪ್ಪಂದ ಆಗಿತ್ತಾ?

ಬಿಗ್‌ ಬಾಸ್‌ ಮನೆಗೆ ಒಂದ್ಸಲ ಕಾಲಿಟ್ರೆ ಅಷ್ಟು ಬೇಗ ಹೊರ ಹೋಗೋದಿಕ್ಕೆ ಸಾಧ್ಯ ಇಲ್ಲ.. ಒಂದಾ ಕಡಿಮೆ ವೋಟ್‌ ಬಂದು ಎಲಿಮಿನೇಟ್‌ ಆಗ್ಬೇಕು.. ಇಲ್ಲಾ ಅಂದ್ರೆ ಸ್ಟ್ರಾಂಗ್‌ ರೀಸನ್‌ ಇದ್ದು ದೊಡ್ಮನೆಯಿಂದ ಆಚೆ ಹೋಗ್ಬೇಕು. ಆದ್ರೆ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ರ ಸ್ವರ್ಧಿ ಚಂದ್ರಪ್ರಭ ಏಕಾಏಕಿ ದೊಡ್ಮನೆಯಿಂದ ಹೊರ ನಡೆದಿದ್ದಾರೆ. ಕಾರಣ ಹೇಳದೆ ಆಟ ಅರ್ಧಕ್ಕೆ ನಿಲ್ಲಿಸಿದ್ದಾರೆ. ಅಷ್ಟಕ್ಕೂ ಚಂದ್ರಪ್ರಭ ದೊಡ್ಮನೆಯಿಂದ ಆಚೆ ಹೋಗಿದ್ದೇಕೆ.. ಇದು ಬಿಗ್‌ ಬಾಸ್‌ ಹೊಸ ಗಿಮಿಕಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಮಹಾನಟಿ ಕಿರೀಟ ಗೆದ್ದ ಮಂಗಳೂರಿನ ವಂಶಿ – ಬೆಳಗಾವಿಯ ವರ್ಷಾ ಮೊದಲ ರನ್ನರ್ ಅಪ್

ಬಿಗ್‌ ಬಾಸ್‌ ಕನ್ನಡ ಇತಿಹಾಸದಲ್ಲಿ ಯಾವ ಸ್ಪರ್ಧಿ ಕೂಡ ನಿರ್ಧಿಷ್ಟ  ಕಾರಣವಿಲ್ಲದೇ ಆಟ ಅರ್ಧಕ್ಕೆ ನಿಲ್ಲಿಸಿ ಹೊರಗೆ ಬಂದಿದ್ದೇ ಇಲ್ಲ..  ಆದ್ರೀಗ ಇದೇ ಮೊದಲ ಬಾರಿಗೆ ಚಂದ್ರಪ್ರಭ ಬಿಗ್‌ ಬಾಸ್‌ ಮನೆಯ ಆಟವನ್ನ ಅರ್ಧಕ್ಕೆ ನಿಲ್ಲಿಸಿದ್ದಾರೆ. ನಿನ್ನೆ ಏಕಾಏಕಿ ಕಾರಣ ಹೇಳದೆ ಬಿಗ್‌ ಬಾಸ್‌ ಮನೆಯಿಂದ ಹೊರ ನಡೆದಿದ್ದಾರೆ. ಚಂದ್ರಪ್ರಭ ಅವರನ್ನ ಎಷ್ಟು ಕನ್ವಿನ್ಸ್‌ ಮಾಡಿದ್ರೂ ಕೂಡ ದೊಡ್ಮನೆಯಲ್ಲಿ ಇರಲು ಒಪ್ಪಿಲ್ಲ. ಕಿಚ್ಚ ಸುದೀಪ್‌ ಕೂಡ ಕಾರಣ ಕೇಳಿದ್ರೂ ಚಂದ್ರಪ್ರಭ ಬಾಯಿಬಿಟ್ಟಿಲ್ಲ. ಕಣ್ಣೀರು ಹಾಕುತ್ತಲೇ ಶೋ ನಿಂದ ಹೊರ ಬಂದಿದ್ದಾರೆ. ಆದ್ರೀಗ ಚಂದ್ರಪ್ರಭ ಏಕಾಏಕಿ ದೊಡ್ಮನೆಯಿಂದ ಹೊರ ಬಂದಿದ್ದೇಕೆ? ಇದಕ್ಕೆ ಈ ಒಂದು ಘಟನೆ ಕಾರಣ ಆಯಿತಾ? ಅಥವಾ ಬೇರೆ ಕಾರಣ ಇದ್ಯಾ  ಅನ್ನೋ ಚರ್ಚೆ ನಡಿತಾ ಇದೆ.

ಅಂದ್ಹಾಗೆ ಚಂದ್ರಪ್ರಭ ಹಾಗೂ ಗಿಲ್ಲಿ ಮೊದಲಿನಿಂದ ಕ್ಲೋಸ್‌.. ಆದ್ರೆ ಚಂದ್ರಪ್ರಭ ಸ್ನೇಹಿತ ಗಿಲ್ಲಿನಟ ಹಾಗೂ ಕಾವ್ಯಾ ಶೈವ ಗೆಳೆತನದ ಬಗ್ಗೆ ಇತ್ತೀಚೆಗೆ ಚಂದ್ರಪ್ರಭ ಕೆಟ್ಟದಾಗಿ ಮಾತನಾಡಿದ್ದರು. ಮಾತು ಮಿತಿಮೀರಿತ್ತು. ಈ ಪದಗಳು ಕಾವ್ಯಾಗೆ ಬೇಸರ ಮೂಡಿಸಿದ್ದವು. ಇದು ಸರಿ ಅಲ್ಲ ಎಂದು ಕಾವ್ಯಾ ಅವರು ಚಂದ್ರಪ್ರಭಗೆ ಹೇಳಿದ್ದರೂ ಅದನ್ನೂ ಕೇಳಲಿಲ್ಲ. ಗಿಲ್ಲಿ ಕೂಡ ತಮಾಷೆ ಮಾಡುತ್ತಲೇ ಚಂದ್ರಪ್ರಭಗೆ ತಾವು ಹೇಳಿದ್ದು ತಪ್ಪು ಅಂತ ಅರ್ಥ ಮಾಡಿಸಲು ಪ್ರಯತ್ನಿಸಿದ್ರು. ಆದ್ರೂ ಕೂಡ ಚಂದ್ರಪ್ರಭ ಎಚ್ಚೆತ್ತುಕೊಂಡಿರ್ಲಿಲ್ಲ. ಶನಿವಾರ ಈ ವಿಚಾರ ಚರ್ಚೆಗೆ ಬಂದಿದೆ. ಸುದೀಪ್ ಇದನ್ನು ಚಂದ್ರಪ್ರಭ ಬಳಿ ಪ್ರಶ್ನೆ ಮಾಡಿದ್ರು..  ಚಂದ್ರಪ್ರಭ ಅವರೇ ಸರಿಯಾಗಿ ಇರಬೇಕು ಎಂದು ನುಡಿಯುವ ನೀವು, ರಿಷಾ ಜೊತೆ ಇದೇ ರೀತಿ ನಡೆದುಕೊಳ್ಳುತ್ತಿದ್ದೀರಲ್ಲ ಎಂದು ಪ್ರಶ್ನೆ ಮಾಡಿದರು. ರಿಷಾ ಜೊತೆ ಅವರು ಹೇಗೆ ನಡೆದುಕೊಳ್ಳುತ್ತಿದ್ದಾರೆ ಎಂಬುದರ ವಿಡಿಯೋನ ಕೂಡ ಹಾಕಿದರು. ಈ ವಿಚಾರ ಚಂದ್ರಪ್ರಭಗೆ ತುಂಬಾ ಬೇಜಾರಾಗಿದೆ. ಆದ್ರೆ ಶನಿವಾರ ಬಿಗ್‌ಬಾಸ್‌ ಮನೆಯಿಂದ ಹೊರ ಹೋಗುವ ಬಗ್ಗೆ ನಿರ್ಧಾರ ತೆಗೆದುಕೊಂಡಿರ್ಲಿಲ್ಲ.

ಇನ್ನು ಭಾನುವಾರದ ಎಪಿಸೋಡ್​ನಲ್ಲೂ ಚಂದ್ರಪ್ರಭ ಅವರಿಗೆ ಊಸರವಳ್ಳಿ ರೀತಿಯ ಟ್ಯಾಗ್​ಗಳು ಸಿಕ್ಕವು. ಇದು ಅವರಿಗೆ ಬೇಸರ ಮೂಡಿಸಿದೆ. ಇದ್ರಿಂದಾಗೇ ಬಿಗ್‌ ಬಾಸ್‌ ಆಟವನ್ನ ಚಂದ್ರಪ್ರಭ ಅರ್ಧಕ್ಕೆ  ನಿಲ್ಲಿಸಿ ಹೊರ ಬಂದಿದ್ದಾರೆ.. ಇದೀಗ ಹೊರ ಬರ್ತಿದ್ದಂತೆ ಚಂದ್ರಪ್ರಭ ಬಿಗ್‌ ಬಾಸ್‌ ಮನೆಯಿಂದ ಹೊರ ಬರಲು ಕಾರಣವೇನು ಅನ್ನೋದನ್ನ ಸರಿಯಾಗಿ ಹೇಳಿಲ್ಲ.. ತುಂಬಾ ಬೇಜಾರು ಆಗಿತ್ತು ಅಷ್ಟೇ ಅಂತ ಸಂದರ್ಶನವೊಂದ್ರಲ್ಲಿ ಹೇಳಿದ್ದಾರೆ.

ಇದೀಗ ಕೆಲವರು ಸೋಶಿಯಲ್‌ ಮೀಡಿಯಾದಲ್ಲಿ ಕಮೆಂಟ್‌ ಮಾಡ್ತಿದ್ದಾರೆ. ಚಂದ್ರಪ್ರಭ ಬಿಗ್‌ ಬಾಸ್‌ ಗೆ ಬರೋ ಮೊದಲೇ ಇಷ್ಟು ವಾರ ಮಾತ್ರ ಇರೋದಿಕ್ಕೆ ಒಪ್ಪಂದ ಮಾಡಿಕೊಂಡಿದ್ರು. ಹೀಗಾಗಿ ಆಚೆ ಬಂದಿದ್ದಾರೆ ಎಂದು ಕೆಲವರು ಹೇಳಿದ್ರೆ, ಇನ್ನೂ ಕೆಲವರು, ಬಿಗ್‌ ಬಾಸ್‌ ಮನೆಯಲ್ಲಿರುವಾಗಲೇ ಚಂದ್ರಪ್ರಭಗೆ ಒಳ್ಳೆ ಆಫರ್‌ ಬಂದಿದೆ. ಇದನ್ನ ಸಿಕ್ರೇಟ್‌ ಆಗೇ ಇಡಲಾಗಿದ್ದು, ಇದೇ ರೀಸನ್‌ನಿಂದ ಆಚೆ ಬಂದಿದ್ದಾರೆ ಎಂದು ಹೇಳಲಾಗ್ತಿದೆ. ಆದ್ರೆ ಈ ಬಗ್ಗೆ ಚಂದ್ರಪ್ರಭ ಎಲ್ಲೂ ಹೇಳಿಕೊಂಡಿಲ್ಲ. ಸೋ ಮುಂದಿನ ದಿನಗಳಲ್ಲಿ ಆಟ ಅರ್ಧಕ್ಕೆ ನಿಲ್ಲಿಸಲು ಏನು ಕಾರಣ ಅಂತಾ ಹೇಳ್ತಾರಾ ಅನ್ನೋದನ್ನ ಕಾದು ನೋಡ್ಬೇಕು.

Shwetha M