ನಿವಿ ದೂರಾಗಲು ಆತನೇ ಕಾರಣ!- 3ನೇ ವ್ಯಕ್ತಿ ಬಗ್ಗೆ ಬಾಯ್ಬಿಟ್ಟ ಚಂದನ್
2ನೇ ಮದ್ವೆಗೆ ಸಿದ್ಧವಾದ್ರಾ ಸಿಂಗರ್?

ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದಾಂಪತ್ಯ ಮುರಿದು ಬಿದ್ದಿದೆ. ವೈಯಕ್ತಿಕ ಕಾರಣ ನೀಡಿ ಇಬ್ಬರು ಹೊಂದಾಣಿಕೆಯಿಂದ ಡಿವೋರ್ಸ್ ಪಡೆದಿದ್ದಾರೆ. ಪ್ರೀತಿಸಿ ಮದುವೆಯಾಗಿ ಅನ್ಯೋನ್ಯವಾಗಿದ್ದ ಈ ಜೋಡಿ ಬೇರೆಯಾಗಿದ್ದು ಅಚ್ಚರಿಗೆ ಕಾರಣವಾಗಿತ್ತು. ಇವರಿಬ್ಬರು ವಿಚ್ಚೇದನ ಪಡೆಯುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಹುಟ್ಟಿಕೊಂಡಿತ್ತು. ಬಹುತೇಕ ಮಂದಿ ನಿವೇದಿತಾ ಗೌಡ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಲು ಶುರುಮಾಡಿದ್ರು. ಎಲ್ಲದಕ್ಕೂ ನಿವೀನೇ ಕಾರಣ ಅಂತಾ ಹೇಳಲು ಶುರುಮಾಡಿದ್ರು.. ಈ ನಡುವೆ ವಿಚ್ಛೇದನದ ಹಿಂದಿನ ಅಸಲಿ ವಿಚಾರವನ್ನು ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಬಹಿರಂಗವಾಗಿ ಹೇಳಿಕೊಂಡಿದ್ದರು. ನಮ್ಮಿಬ್ಬರ ನಡುವೆ ಹೊಂದಾಣಿಕೆ ಕೊರತೆ ಇದೆ. ಆ ಕಾರಣಕ್ಕೆ ಡಿವೋರ್ಸ್ ಪಡೆದಿದ್ದೇವೆ ಎಂದಿದ್ದರು. ಆದ್ರೇ ಇದೀಗ ಚಂದನ್ ಶೆಟ್ಟಿ ಡಿವೋರ್ಸ್ ವಿಚಾರಕ್ಕೆ ಸಂಬಂಧಪಟ್ಟಂತೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಡಿವೋರ್ಸ್‌ಗೆ ಮೂರನೇ ವ್ಯಕ್ತಿ ಕಾರಣ ಅಂತಾ ಹೇಳಿದ್ದಾರೆ. ಇದೀಗ ಚಂದನ್ ಶೆಟ್ಟಿ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿದೆ. ಅಷ್ಟಕ್ಕೂ ಚಂದನ್ ಶೆಟ್ಟಿ ಹೇಳಿದ್ದೇನು? ಚಂದನ್ ನಿವೀ ದಾಂಪತ್ಯಕ್ಕೆ ಕೊಳ್ಳಿ ಇಟ್ಟಿದ್ದು ಯಾರು? ಆ ಮೂರನೇ ವ್ಯಕ್ತಿ ಬಗ್ಗೆ ಚಂದನ್ ಏನ್ ಹೇಳಿದ್ದಾರೆ ಅನ್ನೋದ್ರ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಡೆಲ್ಲಿಗಾಗಿ ಗೋಡೆ-ದಾದಾ ಒಂದಾದ್ರಾ? – ರಿಕಿಗೆ ಕೊಕ್.. ದ್ರಾವಿಡ್ DC ಕೋಚ್?
ಒಬ್ಬರ ಮೇಲೆ ಒಬ್ರು ಆರೋಪ ಮಾಡ್ಲಿಲ್ಲ.. ಬೀದಿಗೆ ಬಂದು ಜಗಳ ಆಡ್ಲಿಲ್ಲ.. ತಮ್ಮ ಮಧ್ಯೆ ಹೊಂದಾಣಿಕೆ ಇಲ್ಲ ಅಂತಾ ಒಂಚೂರು ಸುಳಿವು ಬಿಟ್ಟುಕೊಟ್ಟಿಲ್ಲ.. ಇಬ್ಬರೂ ಜೊತೆಯಲ್ಲೇ ಬಂದು ವಿಚ್ಛೇದನ ಪಡೆಯುವ ಮೂಲಕ ಗೌರವಯುತವಾಗಿಯೇ ಬೇರೆಯಾದ್ರು. ಸಾಮರಸ್ಯ ಇಲ್ಲದೇ ಇರುವಾಗ ಪರಸ್ಪರ ಗೌರವದಿಂದ ಬೇರೆಯಾಗುವುದು ಹೇಗೆ ಎನ್ನುವುದಕ್ಕೆ ಚಂದನ್ ನಿವೇದಿತಾ ಗೌಡ ಮಾದರಿಯಾದರು. ಆದ್ರೆ ಜನರು ಬಿಡ್ಬೇಕಲ್ಲಾ.. ಬೇಡ ಅಂದ್ರೂ ಸೆಲೆಬ್ರಿಟಿಗಳ ಮಧ್ಯೆ ತಲೆ ಹಾಕ್ತಾರೆ.. ಸೋಶಿಯಲ್ ಮೀಡಿಯಾದಲ್ಲಿ ಬಾಯಿಗೆ ಬಂದಂಗೆ ಕಾಮೆಂಟ್ ಹಾಕ್ತಾರೆ.. ಚಂದು ನಿವೀ ವಿಚಾರದಲ್ಲೂ ಆಗಿದ್ದು ಇದೇ.. ಎಲ್ಲದಕ್ಕೂ ನಿವೇದಿತಾನೇ ಕಾರಣ.. ನಿವೀ ರೀಲ್ಸ್‌ಗೆ ಬರೋ ಕೆಟ್ಟ ಕಾಮೆಂಟ್ಸ್‌ಗೆ ಬೇಸತ್ತು ಚಂದನ್ ಡಿವೋರ್ಸ್ ಕೊಟ್ಟಿದ್ದಾರೆ.. ಇವರಿಬ್ರ ಬಾಳಲ್ಲಿ ಮೂರನೇ ವ್ಯಕ್ತಿ ಎಂಟ್ರಿ ಆಗಿದೆ.. ನಿವೇದಿತಾ ಆ ವ್ಯಕ್ತಿ ಜೊತೆ ಕ್ಲೋಸ್ ಆಗಿದ್ದಕ್ಕೆ ಡಿವೋರ್ಸ್ ಆಯ್ತು.. ಮಗು ಪಡೆಯಲು ನಿವೇದಿತಾ ಒಪ್ಪದ ಕಾರಣ ಚಂದನ್ ವಿಚ್ಛೇದನ ಪಡೆದರು ಅಂತ ಸಾಲು ಸಾಲು ಕಾಮೆಂಟ್‌ಗಳು ಹರಿದು ಬಂತು.. ಆದ್ರೆ ಇಲ್ಲೂ ಕೂಡ ಚಂದನ್ ನಿವೇದಿತಾಳನ್ನ ಬಿಟ್ಟು ಕೊಟ್ಟಿರ್ಲಿಲ್ಲ.. ಎಲ್ಲಾ ಟೀಕೆ, ಕಾಮೆಂಟ್‌ಗಳಿಗೆ ಚಂದನ್ ಹಾಗೂ ನಿವೇದಿತಾ ಗೌಡ ಮಾಧ್ಯಮದ ಮುಂದೆ ಬಂದು ಸ್ಪಷ್ಟನೆ ನೀಡಿದ್ರು.. ಹೊಂದಾಣಿಕೆ ಕೊರತೆಯಿಂದಾಗಿ ಇಬ್ಬರೂ ಬೇರೆಯಾಗುತ್ತಿರೋದಾಗಿ ಹೇಳಿದ್ರು..
ಡಿವೋರ್ಸ್ ಪಡೆದು ಹಲವು ದಿನಗಳೇ ಕಳೆದಿದೆ. ಎಲ್ಲವೂ ಮುಗಿಯಿತು ಅನ್ನೋ ಹೊತ್ತಲ್ಲೇ ಚಂದನ್ ಗೌಡ ಶಾಕಿಂಗ್ ಹೇಳಿಕೆ ನೀಡಿದ್ದಾರೆ.. ಸಂದರ್ಶನವೊಂದರಲ್ಲಿ ಮಾತನಾಡಿರುವ ಚಂದನ್ ಶೆಟ್ಟಿ, ನನ್ನ ಮತ್ತು ನಿವೇದಿತಾ ನಡುವೆ ಡಿವೋರ್ಸ್‌ಗೆ ಮೂರನೇ ವ್ಯಕ್ತಿ ಕಾರಣ ಅನ್ನೋ ಮೂಲಕ ಸಂಚಲನ ಮೂಡಿಸಿದ್ದಾರೆ. ಆದರೆ ಮೂರನೇ ವ್ಯಕ್ತಿ ಯಾರು ಎನ್ನುವ ಬಗ್ಗೆ ಎಲ್ಲಿಯೂ ಬಾಯಿ ಬಿಡದ ಚಂದನ್ ವೇದಾಂತಿಯಂತೆ ಮಾತನಾಡಿದ್ದಾರೆ.
ಕುಟುಂಬ ಒಡೆಯಲು ಮೂರನೇ ವ್ಯಕ್ತಿ ಕಾರಣವಾಗುತ್ತಾರೆ. ಅವರು ಯಾರು ಎನ್ನುವುದು ಕೆಲವೊಮ್ಮೆ ನಮಗೂ ಗೊತ್ತಿರುವುದಿಲ್ಲ. ಆ ಮೂರನೇ ವ್ಯಕ್ತಿ ನಮ್ಮೊಳಗೂ ಇರಬಹುದು. ಕೆಲವರಿಗೆ ಎರಡೆರಡು ಮುಖಗಳು ಇರಬಹುದು.. ಮುಂದೆ ಒಂದು ರೀತಿ.. ಹಿಂದೆ ಒಂದು ರೀತಿ ಮಾತನಾಡುತ್ತಾರೆ. ಅಂತಹ ವ್ಯಕ್ತಿಗಳಿಗೆ ಎರಡು ವ್ಯಕ್ತಿತ್ವ ಇರುತ್ತವೆ ಎಂದಿದ್ದಾರೆ ಚಂದನ್ ಶೆಟ್ಟಿ.. ಅವರ ಗೂಡಾರ್ಥದ ಮಾತು ಕೇಳಿ ಅಭಿಮಾನಿಗಳು ಈಗ ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ.
ಇದೇ ವೇಳೆ ಎರಡನೇ ಮದುವೆ ಬಗ್ಗೆ ಕೂಡ ಮಾತನಾಡಿದ್ದಾರೆ ಚಂದನ್ ಶೆಟ್ಟಿ.. ಈಗಿನ್ನೂ ಅದರಿಂದ ಹೊರಗೆ ಬಂದಿದ್ದೇನೆ, ಎರಡನೇ ಮದುವೆ ಬಗ್ಗೆ ಸದ್ಯ ಯೋಚನೆ ಮಾಡಿಲ್ಲ. ಮನಸ್ಸು ಇನ್ನೂ ತಿಳಿಯಾಗಬೇಕಿದೆ. ಅದಕ್ಕೆ ಇನ್ನೂ ಸಮಯ ಬೇಕಾಗುತ್ತದೆ. ಯಾರನ್ನು ನಂಬುವುದು ಯಾರನ್ನು ನಂಬಬಾರದು ಎನ್ನುವ ಗೊಂದಲವಿದೆ. ಇದೇ ತಿಂಗಳ 19ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಅದಾದ್ಮೇಲೆ ಸಿನಿಮಾ ಅಥವಾ ಸಂಗೀತ ಯಾವ ಕ್ಷೇತ್ರದಲ್ಲಿ ಮುಂದುವರೆಯಲಿ ಎಂದು ನಿರ್ಧರಿಸುವುದಾಗಿ ತಿಳಿಸಿದರು. ನಿವೇದಿತಾ ಗೌಡ ಎರಡನೇ ಮದುವೆಯಾದರೆ ನಿಮ್ಮ ಅಭಿಪ್ರಾಯ ಏನು ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟ ಚಂದನ್ ಶೆಟ್ಟಿ, ಅದಕ್ಕೂ ನನಗೂ ಸಂಬಂಧವಿಲ್ಲ, ಅದು ಅವರ ವೈಯಕ್ತಿಕ ವಿಚಾರ ಎಂದು ಹೇಳಿದ್ದಾರೆ.
ಒಟ್ಟಾರೆ ಚಂದನ್ ಹೇಳಿರುವ ಮಾತು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅವರ ಅಭಿಮಾನಿಗಳು ಆ ಮೂರನೇ ವ್ಯಕ್ತಿ ಯಾರು ಅಂತಾ ತಲೆಕೆಡಿಸಿಕೊಂಡಿದ್ದಾರೆ. ಆ ಮೂರನೇ ವ್ಯಕ್ತಿ ಯಾರು ಅಂತಾ ಚಂದನ್ ಹೇಳ್ತಾರಾ? ಚಂದನ್ ಹೇಳಿಕೆಗೆ ನಿವೇದಿತಾ ಗೌಡ ಪ್ರತಿಕ್ರಿಯೆ ನೀಡ್ತಾರಾ ಅಂತಾ ಕಾದುನೋಡಬೇಕಿದೆ.