ಬಿಗ್ ಬಾಸ್ ಜೋಡಿ ಡಿವೋರ್ಸ್ – ನಿವೇದಿತಾ-ಚಂದನ್ ಬದುಕಲ್ಲಿ ಆಗಿದ್ದೇನು?
ಜೋಡಿ ಕಲಹಕ್ಕೆ ಆ ವಿಡಿಯೋ ಕಾರಣ?

ಬಿಗ್ ಬಾಸ್ ಜೋಡಿ ಡಿವೋರ್ಸ್ – ನಿವೇದಿತಾ-ಚಂದನ್ ಬದುಕಲ್ಲಿ ಆಗಿದ್ದೇನು?ಜೋಡಿ ಕಲಹಕ್ಕೆ ಆ ವಿಡಿಯೋ ಕಾರಣ?

ಸ್ಯಾಂಡಲ್​ವುಡ್ ರ್ಯಾಪರ್ ಚಂದನ್ ಶೆಟ್ಟಿ ಹಾಗೇ ನಟಿ ನಿವೇದಿತಾ ಗೌಡ ಸ್ಟಾರ್ ಕಪಲ್ ಎಂದೇ ಫೇಮಸ್ ಆಗಿದ್ರು. ಆದ್ರೀಗ ಈ ಜೋಡಿ ನಡುವೆ ಬಿರುಕು ಮೂಡಿದ್ದು ವಿಚ್ಚೇದನದವರೆಗೂ ಬಂದಿದೆ. ಬಿಗ್ ಬಾಸ್ ನಲ್ಲಿ ಇಬ್ಬರಿಗೂ ಪರಿಚಯವಾಗಿ ಬಳಿಕ ಅದು ಪ್ರೇಮಕ್ಕೆ ತಿರುಗಿತ್ತು. ಬಳಿಕ ಮದುವೆಯೂ ಆಗಿದ್ರು. ಸಾಕಷ್ಟು ವೇದಿಕೆಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ತಿದ್ದ ಇಬ್ಬರು ಅನ್ಯೋನ್ಯವಾಗೇ ಇದ್ದರು. ಆದ್ರೀಗ ಇಬ್ಬರೂ ಕೂಡ ದೂರ ದೂರ ಆಗೋಕೆ ಮುಂದಾಗಿರೋದು ಶಾಕಿಂಗ್ ನ್ಯೂಸ್ ಆಗಿದೆ. ಅಷ್ಟಕ್ಕೂ ಇಬ್ಬರ ನಡುವೆ ಏನಾಯ್ತು ಅನ್ನೋ  ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಪಾಂಡ್ಯ-ನತಾಶಾ PATCH UP – ಮುನಿಸು ಮರೆತಿದ್ದೇಗೆ ಹಾರ್ದಿಕ್ ಪತ್ನಿ? 

ಚಂದನ್ ಶೆಟ್ಟಿ ಹಾಗೇ ನಿವೇದಿತಾ ಗೌಡ  ಲವ್​ ಸ್ಟೋರಿ ಬಿಗ್​ ಬಾಸ್​ ರಿಯಾಲಿಟಿ ಶೋನಿಂದ ಆರಂಭವಾಗಿತ್ತು. ಬಿಗ್​ ಬಾಸ್​ ಕನ್ನಡ ಸೀಸನ್​ 5’ ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಹಾಗೂ ಚಂದನ್​ ಶೆಟ್ಟಿ ಅವರು ಸ್ಪರ್ಧಿಸಿದ್ದರು. ಬಿಗ್‌ ಬಾಸ್‌ ನಲ್ಲಿ ಚಂದನ್‌, ನಿವೇದಿತಾಗಾಗಿ ಗೊಂಬೆ ಗೊಂಬೆ ಸಾಂಗ್‌ ಕೂಡ ಹಾಡಿದ್ರು.. ಅದಾದ ನಂತರ ಮೈಸೂರಿನಲ್ಲಿಅದೂ ಕೂಡ ಯುವದಸರಾ ವೇದಿಕೆಯಲ್ಲಿ ಪ್ರಪೋಸ್​ ಮಾಡಿದ್ದರು. ಇದು ವಿವಾದಕ್ಕೂ ಕಾರಣವಾಗಿದೆ. ಬಳಿಕ ಇಬ್ಬರೂ ಕೂಡ ಅದ್ಧೂರಿಯಾಗಿ ಮದುವೆ ಆಗಿದ್ದರು. ಇಬ್ಬರ ಕುಟುಂಬವೂ ಸಂತೋಷದಿಂದ ಒಪ್ಪಿತ್ತು. ಬಳಿಕ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗಿದ್ದ ರಾಜಾ – ರಾಣಿ ಶೋನಲ್ಲೂ ಕೂಡ ಪೈನಲ್‌ ತನಕ ಬಂದಿದ್ರು.. ಈ ಶೋನಲ್ಲಿ ಇವರಿಬ್ಬರನ್ನು ನೋಡಿದ ವೀಕ್ಷಕರು ಎಲ್ಲರಿಗೂ ಮಾದರಿ ಅಂತಾ ಹೇಳ್ತಾ ಬಂದಿದ್ರು..

ಆದ್ರೀಗ ದಿಢೀರ್ ಅಂತಾ ಡಿವೋರ್ಸ್ ಮೊರೆ ಹೋಗಿದ್ದಾರೆ. ಕೆರಿಯರ್ ದೃಷ್ಟಿಯಿಂದ ಪರಸ್ಪರ ಒಪ್ಪಿಗೆ ಮೂಲಕ ವಿವಾಹ ವಿಚ್ಛೇದನ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಇಬ್ಬರು ಪರಸ್ಪರ ಮಾತಾಡಿಕೊಂಡು ತಮ್ಮ ನಿರ್ಧಾರದ ಮೇರೆಗೆ ಡಿವೋರ್ಸ್​ ಪಡೆಯುತ್ತಿದ್ದಾರೆ. ಕೆರಿಯರ್ ನಲ್ಲಿ ನಿವೇದಿತಾ ಅವರು ಕಾಮಿಡಿ ಶೋ ಹಾಗೂ ಚಂದನ್ ಅವರು ರ್ಯಾಪ್​ ಸಾಂಗ್​​ ಮಾಡುತ್ತಾ ಬಂದಿದ್ದರು. ಇದೀಗ  ಶಾಂತಿನಗರ ಕೋರ್ಟ್ ನಲ್ಲಿ ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ. 2020 ಫೆಬ್ರವರಿ 26 ರಂದು ಪ್ರೀತಿಸಿ ಮದ್ವೆ ಆಗಿದ್ದ ಜೋಡಿ ಈಗ ಬೇರೆ ಬೇರೆಯಾಗಿದ್ದಾರೆ. ಇವರಿಬ್ಬರೂ ಸೇರಿ ಒಂದು ಚಿತ್ರದಲ್ಲಿ ನಟನೆಯನ್ನು ಕೂಡ ಮಾಡಿದ್ದರು. ಇನ್ನು ಬಿಡುಗಡೆಯಾಗದ ಕ್ಯಾಂಡಿ ಕ್ರಶ್ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ.  ಚಂದನ್ ಶೆಟ್ಟಿ ಹಾಗೂ ಪತ್ನಿ ನಿವೇದಿತಾ ಗೌಡ ಹೊರ ಪ್ರಪಂಚಕ್ಕೆ ಕಾಣಲು ಅನ್ಯೋನ್ಯವಾಗೇ ಇದ್ದರು. ಈಗ ಒಂದೇ ಸಾರಿ ಈ  ಸುದ್ಧಿಯನ್ನು ಕೇಳಿದ ನೆಟ್ಟಿಗರು ಇದು ಶಾಕಿಂಗ್​ ಎಂದು ಕಮೆಂಟ್ ಮಾಡುತ್ತಾ ಇದ್ಧಾರೆ. ಕಿರುತೆರೆ ಬಾರ್ಬಿ ಡಾಲ್‌ ಎಂಬ ಹೆಸರನ್ನು ಪಡೆದ ನಿವೇದಿತಾ ಗೌಡ ಅವರು ರೀಲ್ಸ್​ ಮಾಡುತ್ತಾ ಜನಪ್ರಿಯತೆ ಗಳಿಸಿದ್ದಾರೆ. ಆದರೆ ಈ ಬಗ್ಗೆ ಅವರಿಬ್ಬರು ಮಾತನಾಡಿ ಸ್ಪಷ್ಟನೆ ನೀಡಿಲ್ಲ.

Shwetha M