ರಿಯಾಲಿಟಿ ಶೋ ಮುಳುವಾಯ್ತಾ? – ಚಂದು, ನಿವಿ ನಡುವೆ ವಿಲನ್ ಯಾರು?

ರಿಯಾಲಿಟಿ ಶೋ ಮುಳುವಾಯ್ತಾ? – ಚಂದು, ನಿವಿ ನಡುವೆ ವಿಲನ್ ಯಾರು?

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರನ್ನು ಕ್ಯೂಟ್ ಕಪಲ್ ಅಂತಲೇ ಎಲ್ರೂ ಕರಿತಾ ಇದ್ರು.. ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಸಕ್ರೀಯವಾಗಿತ್ತು ಈ ಜೋಡಿ. ಇಬ್ಬರು ಒಟ್ಟಿಗೆ ರೀಲ್ಸ್ ಮಾಡುತ್ತಾ ಮನರಂಜನೆ ನೀಡ್ತಾ ಇದ್ರು.. ಇವರಿಬ್ರನ್ನ ನೋಡಿದರೆ ಹೊಟ್ಟೆ ಕಿಚ್ಚಾಗುವಷ್ಟು ಸುಂದರವಾಗಿತ್ತು ಈ ಜೋಡಿ. ಅಷ್ಟು ಅನ್ಯೋನ್ಯವಾದ್ರು.. ಯಾವುದೇ ಹಬ್ಬ ಬರ್ಲಿ.. ಪ್ರೇಮಿಗಳ ದಿನ ಇರ್ಲಿ.. ಹೊಸ ವರ್ಷವೇ ಆಗಿರ್ಲಿ.. ಇವರಿಬ್ರು ಮದುವೆ ಆದಲ್ಲಿಂದಲೂ ಕಳೆದ ನಾಲ್ಕು ವರ್ಷಗಳಿಂದ ಇವ್ರ ದಾಂಪತ್ಯದ ಕತೆಯನ್ನ ಚಾನೆಲ್ ಗಳಲ್ಲಿ ಕುಳಿತು ಗಂಟೆಗಟ್ಟಲೆ ಮಾತಾಡ್ತಾ ಇದ್ರು.. ಆದರೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ.. ಇವರಿಬ್ರ ಮಧ್ಯೆ ಪ್ರೀತಿ ಮೌನವಾಗಿ ಬಿಟ್ಟಿದೆ.. ಸದಾ ಒಂದಾಗಿ ಇರ್ತಿದ್ದ  ಜೋಡಿ ಮಧ್ಯೆ ಬಿರುಕು ಬಿದ್ದಿದೆ.. ಇದೀಗ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನ ರಿವೀಲ್ ಮಾಡಿದ್ದಾರೆ.. ನಾವಿಬ್ರೂ ದೂರ ಆಗ್ತಾ ಇದ್ದೀವಿ ಅಂತಾ ಹೇಳಿದ್ದಾರೆ.. ಅಷ್ಟಕ್ಕೂ ಇವರಿಬ್ಬ ಮಧ್ಯೆ ನಡೆದ್ದಾದ್ರೂ ಏನು? ದೂರ ಆಗಿದ್ಯಾಕೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಪ್ರದೀಪ್ ಈಶ್ವರ್ ಎಲ್ಲಿದ್ದೀಯಪ್ಪಾ? – ಕೈ ನಾಯಕನಿಂದ್ಲೇ ರಾಜೀನಾಮೆ ಪತ್ರ

ಚಂದನವನ ಗೊಂಬೆ ಎಂದೇ ಫೇಮಸ್ ಆಗಿದ್ದ ನಿವೇದಿತಾ ಗೌಡ ಹಾಗೂ ರ್ಯಾಪರ್ ಚಂದನ್ ಶೆಟ್ಟಿ ಈಗ ಬೇರೆ ಬೇರೆ ಆಗ್ತಾ ಇದ್ದಾರೆ..  ಬಿಗ್ ಬಾಸ್ ನಲ್ಲಿ ಪರಿಚಯವಾಗಿದ್ದ ಇವರಿಬ್ರು.. ಪ್ರೀತಿಯಲ್ಲಿ ಬಿದ್ದಿದ್ರು.. ನಿವೇದಿತಾಗಾಗಿ ಚಂದನ್ ಗೊಂಬೆ.. ಗೊಂಬೆ ಅಂತಾ ಸಾಂಗ್ ಕೂಡ ಹಾಡಿದ್ದರು.. ಈ ಸಾಂಗ್ ಫುಲ್ ವೈರಲ್ ಆಗಿತ್ತು.. ಅದಾದ ನಂತ್ರ ನಿವೇದಿತಾ ಗೊಂಬೆ ಅಂತಾನೇ ಫೇಮಸ್ ಆಗಿದ್ರು.. ಬಳಿಕ ಮನೆಯವರ ಒಪ್ಪಿಗೆ ಪಡ್ಕೊಂದು ಮದುವೆ ಕೂಡ ಆದ್ರು.. ಇದಾದ ನಂತ ಹಲವು ರಿಯಾಲಿಟಿ ಶೋಗಳಲ್ಲೂ ಮಿಂಚಿದ್ರು.. ಸದಾ ಒಟ್ಟಿಗೆ ಕಾಣಿಸಿಕೊಳ್ತಿದ್ದ ಈ ಜೋಡಿ ಈಗ ಬೇರೆ ಆಗ್ತಾ ಇದ್ದಾರೆ.. ತಮ್ಮಿಬ್ರ ಮಧ್ಯೆ ಮನಸ್ತಾಪ ಇದೆ.. ಬೇರೆ ಆಗ್ತಾ ಇದ್ದೀವಿ ಅಂತಾ ಸುಳಿವು ನೀಡದೇ ಸೈಲೆಂಟ್ ಆಗಿ ಡಿವೋರ್ಸ್ ಪಡ್ಕೊಂಡಿದ್ದಾರೆ.. ಇದೀಗ ಚಂದನ್ ಶೆಟ್ಟಿ & ನಿವೇದಿತಾ ಗೌಡ ಮದುವೆ ಮುರಿದು ಬೀಳಲು ಕಾರಣ ಏನು? ಅಂತಾ ಅಭಿಮಾನಿಗಳು ತಲೆ ಕೆಡಿಸ್ಕೊಂಡಿದ್ದಾರೆ.. ಇದೀಗ ಈ ಜೋಡಿ ಬೇರೆ ಆಗಲು ಕಾರಣ ಏನು ಅಂತಾ ರಿವೀಲ್ ಮಾಡಿದ್ದಾರೆ.. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡೋ‌ ಮೂಲಕ ಅಧಿಕೃತ ಘೋಷಣೆ ಮಾಡಿದ್ದಾರೆ..

ಈ ದಿನ, ಚಂದನ್ ಶೆಟ್ಟಿ ಮತ್ತು ನಾನು, ನಮ್ಮ ದಾಂಪತ್ಯ ಜೀವನವನ್ನು ಕಾನೂನುಬದ್ಧವಾಗಿ ಪರಸ್ಪರ ಒಪ್ಪಿಗೆಯಿಂದ ಕೊನೆಗೊಳಿಸಿದ್ದೇವೆ. ನಮ್ಮ ನಿರ್ಧಾರವನ್ನು ಮತ್ತು ನಮ್ಮ ಜೀವನದ ಖಾಸಗಿತನವನ್ನ ಗೌರವಿಸಲು ಕೋರುತ್ತೇವೆ. ಪ್ರತಿ ಸಂದರ್ಭದಲ್ಲೂ ನಮ್ಮೊಂದಿಗೆ ನಿಂತ ಮಾಧ್ಯಮ ಮಿತ್ರರು, ನಮ್ಮ ಸ್ನೇಹಿತರು ಮತ್ತು ಅಭಿಮಾನಿಗಳಿಂದ ನಾವು ಎಂದಿನಂತೆ ಬೆಂಬಲವನ್ನು ಕೋರುತ್ತೇವೆ. ನಾವು ನಮ್ಮ ಪ್ರತ್ಯೇಕ ಮಾರ್ಗ ಅನುಸರಿಸಿದರೂ, ಪರಸ್ಪರ ಒಬ್ಬರನೊಬ್ಬರು ಗೌರವಿಸುತ್ತೆವೆ. ಸೂಕ್ಷ್ಮ ಪರಿಗಣನೆಗಾಗಿ ಎಲ್ಲರಿಗೂ ಧನ್ಯವಾದಗಳು’ ಎಂದು ನಿವೇದಿತಾ ಗೌಡ ಇನ್ಸ್‌ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ನಿವೇದಿತಾ ಗೌಡ ಅವರು ಪೋಸ್ಟ್‌ ಮಾಡಿದ ರೀತಿಯಲ್ಲೇ ಚಂದನ್‌ ಶೆಟ್ಟಿ ಕೂಡ ಪೋಸ್ಟ್‌ ಮಾಡಿದ್ದಾರೆ. ಆ ಮೂಲಕ ತಮ್ಮ ವಿಚ್ಛೇದನದ ಬಗ್ಗೆ ಅಧಿಕೃತವಾಗಿ ಇಬ್ಬರೂ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ತಮ್ಮ ದಾಂಪತ್ಯ ಜೀವನವನ್ನು ಕಾನೂನು ಬದ್ಧವಾಗಿ ಒಪ್ಪಿ ಕೊನೆಗೊಳಿಸಿಕೊಂಡಿರುವುದಾಗಿ ಅವರು ಪೋಸ್ಟ್‌ ಹಾಕಿದ್ದಾರೆ.  ಈ ಸುದ್ದಿ ಅಧಿಕೃತ ಆಗುತ್ತಿದ್ದಂತೆ ಫ್ಯಾನ್ಸ್ ಸಿಕ್ಕಾಪಟ್ಟೆ ಬೇಜಾರು ಮಾಡ್ಕೊಂದಿದ್ದಾರೆ.. ನೀವಿಬ್ರೂ ದೂರ ಆಗ್ಬೇಡಿ.. ದೇವ್ರೇ ಹೇಗಾದ್ರೂ ಮಾಡಿ ಇವರಿಬ್ರನ್ನ ಒಂದು ಮಾಡು ಅಂತಾ ಕಮೆಂಟ್ ಹಾಕ್ತಾ ಇದ್ದಾರೆ..

ಅಂದ ಹಾಗೆ  ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಮಧ್ಯೆ ತುಂಬಾ ಏಜ್ ಗ್ಯಾಪ್ ಇದೆ.. ಚಂದನ್ ಶೆಟ್ಟಿ 17 ಸೆಪ್ಟೆಂಬರ್  1989ರಲ್ಲಿ ಹುಟ್ಟಿದ್ದು ಅವರಿಗೆ ಈಗ 35 ವರ್ಷ ವಯಸ್ಸಾಗಿದೆ. ಚಂದನ್  ಶೆಟ್ಟಿ, ನಿವೇದಿತಾ ಗೌಡ ಅವರಿಗಿಂತ ದೊಡ್ಡವರು. ನಿವೇದಿತಾ ಗೌಡ 2000 ನೇ ಇಸವಿ ಮೇ 17ರಂದು ಹುಟ್ಟಿದ್ದು ಅವರ ವಯಸ್ಸು 24 ವರ್ಷ. ಅವರು ಟ್ವೆಂಟೀಸ್ ಕಿಡ್ ಆಗಿದ್ದು, ಇಬ್ಬರ ನಡುವೆ  11 ವರ್ಷ ಏಜ್ ಗ್ಯಾಪ್ ಇದೆ.

ಚಂದನ್ ಹಾಗೂ ನಿವೇದಿತಾ ಗೌಡ ನಡುವೆ ಹೆಚ್ಚು ಏಜ್ ಗ್ಯಾಪ್ ಇದ್ದು, ಇದು ಕೂಡ ಇಬ್ಬರ ವಿಚ್ಛೇದನಕ್ಕೆ ಕಾರಣವಾಗಿರಬಹುದು ಎನ್ನಲಾಗ್ತಿದೆ. ಇನ್ನು ಮಗು ಮಾಡ್ಕೊಳೋ ವಿಚಾರಕ್ಕೆ ಮನಸ್ತಾಪ ಉಂಟಾಗಿದೆ.. ರೀಲ್ಸ್ ಮಾಡೋ ವಿಚಾರಕ್ಕೆ ಜಗಳ ಆಗಿದೆ.. ಹೀಗೆ ಹತ್ತು ಹಲವು ಗಾಸಿಪ್ ಹರಿದಾದ್ತಾ ಇದೆ.. ಇದ್ರ ಜೊತೆಗೆ ನಿವೇದಿತಾ ಗೌಡ ರಿಯಾಲಿಟಿ ಶೋಗಳಲ್ಲಿ ಹೆಚ್ಚು ಬ್ಯೂಸಿಯಾದಷ್ಟು ಬೇರೆಯವರ ಜೊತೆ ಹೆಚ್ಚು ಕ್ಲೋಸ್ ಆಗಿದ್ರು.. ಎನ್ನುವ ಗಾಸಿಪ್ ಕೂಡ ಸೇರ್ಕೊಂಡಿದೆ.. ಇದೇ ವಿಚಾರಕ್ಕೆ ಗಂಡ ಹೆಂಡ್ತಿ ನಡುವೆ ಮನಸ್ತಾಪ ಆಗಿತ್ತಂತೆ.. ಹೀಗಾಗಿ ಇವರಿಬ್ರು ಪರಸ್ಪರ ಒಪ್ಪಿಗೆ ಮೂಲಕ ವಿಚ್ಛೇದನಕ್ಕೆ ಅರ್ಜಿ ಹಾಕಿದ್ರು. ಈ ಸಂಬಂಧ ಶಾಂತಿನಗರದ ಕೋರ್ಟ್ ನಲ್ಲಿ ನಿನ್ನೆ ಕೇಸ್ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ಹಿನ್ನೆಲೆಯಲ್ಲಿ ಇಬ್ಬರೂ  2ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗಿದ್ರು.

ಕೈ ಕೈ ಹಿಡಿದುಕೊಂಡು ಕೋರ್ಟ್ ಹಾಲ್​ಗೆ ಬಂದ ಈ ಜೋಡಿ ಅಕ್ಕ-ಪಕ್ಕದಲ್ಲೇ ಕುಳಿತಿದ್ರು. ನಿವೇದಿತಾ ಗೌಡ ವಿದೇಶಕ್ಕೆ ತೆರಳಲು ಬಯಸಿದ್ದಾರೆ. ಹೀಗಾಗಿಯೇ ಇಬ್ಬರೂ ವಿಚ್ಚೇದನ ಪಡೆಯುತ್ತಿದ್ದೇವೆ ಎಂದು ಚಂದನ್ ಆಪ್ತರ ಬಳಿ ಹೇಳಿಕೊಂಡಿದ್ದಾರಂತೆ. ಏನೇ ಆದ್ರೂ ರಿಯಾಲಿಟಿ ಶೋನಲ್ಲಿ ಮೂಡಿದ ಪ್ರೀತಿ ಈಗ ಮದುವೆ ಆದ್ಮೇಲೆ ರಿಯಲ್ ಲೈಫ್ ನಲ್ಲಿ ಹೆಚ್ಚು ಕಾಲ ಬಾಳದೇ ಇರೋದು ವಿಪರ್ಯಾಸ..

Shwetha M

Leave a Reply

Your email address will not be published. Required fields are marked *