ಫಾದರ್ (Fat-her) ಆಗುತ್ತಾರಾ ರಾಪರ್ ಚಂದನ್ ಶೆಟ್ಟಿ?

ಫಾದರ್ (Fat-her) ಆಗುತ್ತಾರಾ ರಾಪರ್ ಚಂದನ್ ಶೆಟ್ಟಿ?

ಕನ್ನಡ ರಾಪರ್, ಸಂಗೀತ ನಿರ್ದೇಶಕ, ಗಾಯಕ ಚಂದನ್ ಶೆಟ್ಟಿ, ನಿವೇದಿತಾ ಗೌಡ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ? ಎಂಬ ಪ್ರಶ್ನೆ ಈಗ ಅಭಿಮಾನಿ ವಲಯದಲ್ಲಿ ಹರಿದಾಡುತ್ತಿದೆ. ಈ ಪ್ರಶ್ನೆ ನೆಟ್ಟಿಗರ ತಲೆಯಲ್ಲಿ ಮೂಡೋಕೆ ಕಾರಣ ಅವರಿಬ್ಬರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಹೊಸ ರೀಲ್ಸ್.

ಇದನ್ನೂ ಓದಿ: ಆಸ್ಕರ್ ಅಂಗಳದಲ್ಲಿ ಕಾಂತಾರ, ವಿಕ್ರಾಂತ್ ರೋಣ – ಅರ್ಹತೆ ಸುತ್ತು ಪಾಸ್ ಮಾಡಿದ ಕನ್ನಡ ಚಿತ್ರಗಳು

ಸೋಷಿಯಲ್ ಮೀಡಿಯಾದಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಒಂದು ರೀಲ್ಸ್ ಹಂಚಿಕೊಂಡಿದ್ದಾರೆ. ಇದರಲ್ಲಿ ‘’FAT ಅಂದರೇನು?’’ ಅಂತ ಚಂದನ್ ಶೆಟ್ಟಿ ಕೇಳುತ್ತಾರೆ. ಅದಕ್ಕೆ, ‘’FAT ಅಂದ್ರೆ ಫ್ಯಾಟ್’’ ಅಂತ ನಿವೇದಿತಾ ಗೌಡ ಉತ್ತರಿಸುತ್ತಾರೆ. ಬಳಿಕ ‘’HER ಅಂದರೇನು?’’ ಅಂತ ಚಂದನ್ ಶೆಟ್ಟಿ ಕೇಳುತ್ತಾರೆ. ಅದಕ್ಕೆ, ‘’HER ಅಂದರೆ  ಹರ್’’ ಎಂದು ನಿವೇದಿತಾ ಗೌಡ ಹೇಳುತ್ತಾರೆ. ‘’ಎರಡೂ ಸೇರಿಸಿದ್ರೆ?’’ ಎಂದು ಚಂದನ್ ಶೆಟ್ಟಿ ಹೇಳಿದಾಗ, ‘’ಫ್ಯಾಟ್ ಹರ್’ಎಂದು ಮೊದಲು ನಿವೇದಿತಾ ಗೌಡ ಹೇಳುತ್ತಾರೆ. ಆನಂತರ ‘’ಇನ್ನೊಂದ್ಸಲ ಕರೆಕ್ಟಾಗಿ ಹೇಳು – FATHER.. ಏನು?’’ ಎಂದು ಚಂದನ್ ಶೆಟ್ಟಿ ಕೇಳಿದಾಗ, ‘ಫಾದರ್’ಎಂದು ಹೇಳುತ್ತಾ ನಿವೇದಿತಾ ಗೌಡ ನಾಚಿಕೊಂಡಿದ್ದಾರೆ.

ಸದ್ಯ ಈ ವಿಡಿಯೋ ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟಂತೆ ಆಗಿದ್ದು, ಅನೇಕ ನೆಟ್ಟಿಗರು ‘’ನೀವು ಫಾದರ್ ಆಗ್ತಿದ್ದೀರಾ?’’, ‘’ಫಾದರ್ ಆಗುತ್ತಿರುವ ವಿಷಯವನ್ನು ಈ ರೀತಿ ಹೇಳುತ್ತಿದ್ದೀರಾ?’’ ಎಂದು ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ. ಇನ್ನೂ ಅನೇಕರು, ಚಂದನ್ ಶೆಟ್ಟಿ – ನಿವೇದಿತಾ ಗೌಡ ದಂಪತಿಗೆ ಶುಭ ಹಾರೈಸುತ್ತಿದ್ದಾರೆ.

ಚಂದನ್ ಶೆಟ್ಟಿ, ನಿವೇದಿತಾ ಗೌಡ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆಯೇ? ಅಥವಾ ಅಭಿಮಾನಿಗಳನ್ನು ಕನ್ಫ್ಯೂಸ್ ಮಾಡಲು ಈ ರೀಲ್ಸ್ ಹಾಕಿದ್ದಾರೆಯೇ ಎಂಬುದನ್ನು ಈ ಜೋಡಿಯೇ ತಿಳಿಸಬೇಕಾಗಿದೆ.

suddiyaana