ಮೈಸೂರು ನಗರದಲ್ಲಿ 144 ಸೆಕ್ಷನ್ ಜಾರಿ – ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ, ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಸಂಜೆಯವರೆಗೆ ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರಿಗೆ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಇದರಿಂದಾಗಿ ತಲತಲಾಂತರಿಂದ ಈ ದಿನ ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯುತ್ತ ಬಂದಿದ್ದ ಭಕ್ತರಿಗೆ ಈ ಬಾರಿ ನಿರಾಶೆಯಾಗಿದೆ.
ಮಹಿಷ ದಸರಾ ಹಾಗೂ ಚಲೋ ಚಾಮುಂಡಿ ಬೆಟ್ಟ ಜಾಥ ಹಿನ್ನೆಲೆ ಪೊಲೀಸ್ ಕಮಿಷನರ್ ರಮೇಶ್ ಬಾನೋತ್‌ರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು 144 ಸೆಕ್ಷನ್ ಜಾರಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರರಿಂದ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದಾರೆ. ಆದರೆ ಚಾಮುಂಡಿ ಬೆಟ್ಟದಲ್ಲಿ ಇರುವ ನಿವಾಸಿಗಳಿಗೆ, ತುರ್ತು ಸೇವೆಗಳಿಗೆ ಹಾಗೂ ಅಧಿಕೃತ ಅಧಿಕಾರಿಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿಗಳಾದ ಡಾ ಕೆ ವಿ ರಾಜೇಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನು ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿರುವ ಹಿನ್ನೆಲೆ ಬೆಟ್ಟಕ್ಕೆ ಸಂಪರ್ಕಿಸುವ ಎಲ್ಲ ಮಾರ್ಗಗಳು ಬಂದ್ ಮಾಡಲಾಗಿದ್ದು, ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಮೆಟ್ಟಿಲುಗಳ ಮೂಲಕ ನಡೆದುಕೊಂಡು ಬೆಟ್ಟ ಹತ್ತುವ ಮಾರ್ಗವೂ ಬಂದ್ ಮಾಡಲಾಗಿದೆ. ಸುತ್ತೂರು ಮಠದ ಬಳಿಯ ಚಾಮುಂಡಿ ಪಾದದ ಬಳಿ ಪೊಲೀಸರ ನಿಯೋಜನೆ. ಇದೇ ಮಾರ್ಗದಲ್ಲಿ ಪ್ಲಾನ್ ಆಗಿದ್ದ ಬಿಜೆಪಿ ಚಾಮುಂಡಿ ಬೆಟ್ಟ ಚಲೋ. ಚಾಮುಂಡಿ ಬೆಟ್ಟ ಚಲೋ ರದ್ದಾಗಿದ್ರೂ ಮುಂಜಾಗೃತ ಕ್ರಮವಾಗಿ 100ಕ್ಕೂ ಹೆಚ್ಚು ಪೊಲೀಸರ ನಿಯೋಜಿಸಲಾಗಿದೆ.
ಚಾಮುಂಡಿ ಬೆಟ್ಟಕ್ಕೆ ಪ್ರವೇಶಿಸುವ ಎಲ್ಲ ಮಾರ್ಗಗಳು ಬಂದ್ ಆಗಿರುವ ಹಿನ್ನೆಲೆ ದರ್ಶನ ಸಿಗದೇ ಬೇಸರದಿಂದ ವಾಪಾಸ್ ಆಗುತ್ತಿರುವ ಭಕ್ತರು. ಬೆಟ್ಟದ ಪಾದದ ಬಳಿಯೇ ಕೈ ಮುಗಿದು ವಾಪಾಸ್ ಆಗುತ್ತಿರುವುದು ಎಲ್ಲೆಡೆ ಕಂಡುಬರುತ್ತಿದೆ. ಇನ್ನು ನಿರ್ಬಂಧದ ಮಾಹಿತಿ ಇಲ್ಲದೆ ಚಾಮುಂಡಿ ದರ್ಶನಕ್ಕೆ ಹೊರಜಿಲ್ಲೆಗಳಿಂದ ಬಂದಿರುವ ಭಕ್ತರಿಗೂ ನಿರಾಶೆಯಾಗಿದ್ದು, ಎರಡು ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಿ ಭಕ್ತರಿಗೆ ಅವಕಾಶ ಕೊಡಬೇಕಿತ್ತು. ಭಕ್ತರನ್ನು ತಡೆದಿರುವುದು ಬೇಸರ ತಂದಿದೆ. ಪ್ರತಿವಾರವೂ ದರ್ಶನಕ್ಕೆ ಬರುತ್ತಿದ್ದೆವು. ಇವತ್ತು ತಾಯಿಯ ದರ್ಶನ ಮಾಡುವ ಅವಕಾಶ ಕಿತ್ತುಕೊಂಡಿದ್ದಾರೆ ಭಕ್ತರು ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಪುರಭವನ ಆವರಣದಲ್ಲಿ ಇಂದು (ಅ.13) ಮಹಿಷಾ ದಸರಾ ಆಚರಣೆಗೆ ಮಾಡಲಾಗುತ್ತಿದೆ. ಮಹಿಷಾ ದಸರಾ ಆಚರಣೆ ಸಮಿತಿ ಟೌನ್‌ಹಾಲ್ ಮುಂಭಾಗ ವೇದಿಕೆ ನಿರ್ಮಿಸಿ ಮಹಿಷಾಸುರ ಅವರಿಗೆ ಪುಷ್ಪಾರ್ಚನೆ ಹಾಗೂ ದಮ್ಮ ದೀಕ್ಷಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ವೇದಿಕೆ ಮೇಲೆ ಮಹಿಷಾಸುರ ಪ್ರತಿಮೆ ಜೊತೆಗೆ ಬುದ್ಧ ಅಂಬೇಡ್ಕರ್ ಪ್ರತಿಮೆ ಇರಿಸಿರುವ ಸದಸ್ಯರು. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮಹಿಷ ಉತ್ಸವ ಮತ್ತು ಧಮ್ಮ ದೀಕ್ಷಾ ಆಚರಣೆ. ಆದರೆ ಮೈಸೂರು ನಗರ ಪೊಲೀಸ್ ಆಯುಕ್ತರು ಕೆಲವು ಷರತ್ತು ವಿಧಿಸಿರುವ ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಟೌನ್ ಹಾಲ್ ಮುಂಭಾಗ ಸಾಮಿಯಾನ ಹಾಕಿ ಕಾರ್ಯಕ್ರಮಕ್ಕೆ ಬರುವವರಿಗೆ ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಟೌನ್‌ಹಾಲ್ ಆವರಣದಲ್ಲಿ 200ಕ್ಕೂ ಹೆಚ್ಚು ಪೊಲೀಸರ ನಿಯೋಜಿಸಲಾಗಿದೆ.