ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಕೊನೇ ಐಸಿಸಿ ಟೂರ್ನಿ – 2027ರ ವಿಶ್ವಕಪ್ ಆಡಲ್ವಾ ಲೆಜೆಂಡ್ಸ್?

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತನ್ನೆಲ್ಲಾ ಪಂದ್ಯಗಳನ್ನ ದುಬೈನಲ್ಲಿ ಆಡ್ತಿರೋದು ನಿಮ್ಗೆಲ್ಲಾ ಗೊತ್ತೇ ಇದೆ. ಅದ್ರಲ್ಲೂ ಈ ಟೂರ್ನಿಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸೆಂಟರ್ ಆಫ್ ಅಟ್ರ್ಯಾಕ್ಟನ್ ಆಗಿದ್ದಾರೆ. ಆದ್ರೆ ಅವ್ರಿಬ್ಬರ ಪಾಲಿಗೆ ಇದೇ ಕೊನೆಯ ಐಸಿಸಿ ಟೂರ್ನಿ ಆದ್ರೂ ಅಚ್ಚರಿ ಪಡ್ಬೇಕಿಲ್ಲ. ಅಷ್ಟೇ ಅಲ್ಲ ಈ ಲಿಸ್ಟ್ಗೆ ಹಿರಿಯ ಆಲ್ರೌಂಡರ್ ರವೀಂದ್ರ ಜಡೇಜಾ ಹೆಸರೂ ಸೇರಿಕೊಂಡಿದೆ.
ಇದನ್ನೂ ಓದಿ : WPL ನಲ್ಲಿ ಆರ್‌ಸಿಬಿ ಭರ್ಜರಿ ಗೆಲುವು- ಡೆಲ್ಲಿ ಮಣಿಸಿದ ಬೆಂಗಳೂರು ಗರ್ಲ್ಸ್
ಭಾರತದ ಮೂವರು ಸ್ಟಾರ್ ಪ್ಲೇಯರ್ಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ಪಾಲಿಗೆ ಚಾಂಪಿಯನ್ಸ್ ಟ್ರೋಫಿಯೇ ಕೊನೆಯ ಐಸಿಸಿ ಟೂರ್ನಿಯಾಗುವ ಸಾಧ್ಯತೆಯಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿದ್ದಾರೆ. ಮುಂದಿನ ಐಸಿಸಿ ಟೂರ್ನಿಯು ಇನ್ನು ಎರಡು ವರ್ಷಗಳ ನಂತರ ನಡೆಯಲಿದೆ. ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿವೆ. ಹೀಗಾಗಿ ಭವಿಷ್ಯದ ಜಾಗತಿಕ ಪಂದ್ಯಾವಳಿಗಳಲ್ಲಿ ಈ ಮೂವರು ಭಾಗವಹಿಸುವುದು ಅನುಮಾನ ಎಂದಿದ್ದಾರೆ. ಇವ್ರ ಮಾತಿನಲ್ಲಿ ಆ ಲಾಜಿಕ್ ಕೂಡ ಇದೆ.
ಯೆಸ್. ಸದ್ಯ ಮಿನಿ ವಿಶ್ವಕಪ್ ಅಂತಾನೇ ಕರೆಸಿಕೊಳ್ತಿರೋ ಚಾಂಪಿಯನ್ಸ್ ಟ್ರೋಫಿ ಈಗಾಗ್ಲೇ ಆರಂಭವಾಗಿದೆ. ಈ ವರ್ಷ ಜೂನ್ನಲ್ಲಿ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ನಡೆಯಲಿದೆ. ವಿಷ್ಯ ಏನಪ್ಪ ಅಂದ್ರೆ ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಸೆಲೆಕ್ಟ್ ಆಗಿಲ್ಲ. ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಸೋ ಇದನ್ನ ಹೊರತು ಪಡಿಸಿದ್ರೆ ನೆಕ್ಸ್ಟ್ ಐಸಿಸಿ ಟೂರ್ನಿ ಇರೋದೇ 2026ರ ಟಿ20 ವಿಶ್ವಕಪ್. ಟಿ20 ಮಾದರಿಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ನಿವೃತ್ತಿ ಘೋಷಣೆ ಮಾಡಿರೋದ್ರಿಂದ ಅದರಲ್ಲಿಯೂ ಪಾಲ್ಗೊಳ್ಳುವುದಿಲ್ಲ. ಅದನ್ನ ಹೊರತುಪಡಿಸಿದರೆ 2027ರ ಏಕದಿನ ವಿಶ್ವಕಪ್ ಮುಂದಿನ ಐಸಿಸಿ ಟೂರ್ನಿಯಾಗಿದೆ. 2027ರ ತನಕ ಕ್ರಿಕೆಟ್‌ನಲ್ಲಿ ವಿರಾಟ್ ಮತ್ತು ರೋಹಿತ್ ಶರ್ಮ ಹಾಗೇ ರವೀಂದ್ರ ಜಡೇಜಾ ಮುಂದುವರಿಯುವ ಬಗ್ಗೆ ಕ್ರಿಕೆಟ್ ಎಕ್ಸ್ಪರ್ಟ್ಸ್ ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪ್ರಸಕ್ತ ಚಾಂಪಿಯನ್ಸ್ ಟ್ರೋಫಿ ಈ ಮೂವರೂ ದಿಗ್ಗಜ ಆಟಗಾರರಿಗೆ ಕೊನೆಯದು ಎನ್ನುವ ಮಾತುಗಳು ಕೇಳಿಬಂದಿವೆ.
ಟಿ-20 ಕ್ರಿಕೆಟ್‌ನಿಂದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ನಿವೃತ್ತರಾಗಿದ್ದಾರೆ. ಇನ್ನು ಟೆಸ್ಟ್‌ನಲ್ಲಿ ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ 37 ವರ್ಷದ ರೋಹಿತ್ ಶರ್ಮಾ ಹಾಗೂ 36 ವರ್ಷದ ವಿರಾಟ್ ಕೊಹ್ಲಿ ಕ್ರಿಕೆಟ್ ನಿವೃತ್ತಿ ಯಾವಾಗ ಎನ್ನುವಂತ ಮಾತುಗಳು ಪದೇಪದೆ ಕೇಳಿ ಬರ್ತಿವೆ. 15 ವರ್ಷಗಳಿಗೂ ಹೆಚ್ಚು ಕಾಲದಿಂದ ಟೀಂ ಇಂಡಿಯಾದ ಬಲಿಷ್ಠ ಬ್ಯಾಟಿಂಗ್‌ನ ಆಧಾರಸ್ತಂಭವಾಗಿರೋ ಈ ಇಬ್ಬರು ಆಟಗಾರರೂ ನಿವೃತ್ತಿ ಬಗ್ಗೆ ಈವರೆಗೂ ಯಾವುದನ್ನೂ ಬಹಿರಂಗಪಡಿಸಿಲ್ಲ. ಆದರೆ ಚಾಂಪಿಯನ್ಸ್ ಟ್ರೋಫಿ ಮುಗಿಯುತ್ತಿದ್ದಂತೆ ರೋಹಿತ್ ಹಾಗೂ ಕೊಹ್ಲಿ ತಮ್ಮತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಬಹುದು ಎಂಬ ಮಾತುಗಳು ಕೇಳಿ ಬರ್ತಿವೆ. ಯಾಕಂದ್ರೆ ಟೂರ್ನಿ ಮುಗಿಯುವ ಹೊತ್ತಿಗೆ ತಮ್ಮ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ರೋಹಿತ್ ಶರ್ಮಾ ಮೇಲೆ ಬಿಸಿಸಿಐ ಒತ್ತಡ ಹೇರಿದೆ ಎನ್ನಲಾಗಿದೆ.
ಸದ್ಯ ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ ಕರಾಚಿಯಲ್ಲಿ, ಪಾಕಿಸ್ತಾನ- ನ್ಯೂಜಿಲೆಂಡ್ ಪಂದ್ಯದೊಂದಿಗೆ ಆರಂಭವಾಗಿದೆ. ಪ್ರಾರಂಭಕ್ಕೂ ಮುನ್ನವೇ ಹೈಡ್ರಾಮಾ, ವಿವಾದಗಳಿಂದ ಕೇಂದ್ರ ಬಿಂದುವಾಗಿದ್ದ ಈ ಬಾರಿಯ ಟೂರ್ನಿಯಲ್ಲಿ 8 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. 7 ತಂಡಗಳು ತಮ್ಮ ಪಂದ್ಯಗಳನ್ನು ಪಾಕ್‌ನಲ್ಲಿ ಆಡಲಿದ್ದರೆ, ಭಾರತದ ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಒಟ್ನಲ್ಲಿ ಕಳೆದ ಐದು ವರ್ಷಗಳಲ್ಲಿ ಟೀಂ ಇಂಡಿಯಾ ಸಾಕಷ್ಟು ಸಾಧನೆಗಳನ್ನ ಮಾಡಿದೆ. ಈ ಸಾಧನೆಯ ಹಿಂದೆ ಇರೋದು ರೋಹಿತ್ ಮತ್ತು ಕೊಹ್ಲಿ ಎಂಬ ಮೇನ್ ಪಿಲ್ಲರ್ಸ್. ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯ ಸೆಂಟರ್ ಆಫ್ ಅಟ್ರ್ಯಾಕ್ಷನ್ ಕೂಡ ಇವ್ರೇ. ಏನೇ ಹೇಳಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಆಡ್ಲಿ ಬಿಡ್ಲಿ. ಅವ್ರು ಟೀಮ್ನಲ್ಲಿ ಇದ್ದಾರೆ ಅನ್ನೋದೇ ಪಾಸಿಟಿವ್ ಎನರ್ಜಿ.