ಇಂಗ್ಲೆಂಡ್ ವಿರುದ್ಧ ಗೆದ್ದವರೇ ಫೈನಲ್ – ಚಾಂಪಿಯನ್ಸ್ ಟ್ರೋಫಿಗೆ ಸಿದ್ಧವಾಯ್ತಾ ಪ್ಲೇಯಿಂಗ್ 11?

ಇಂಗ್ಲೆಂಡ್ ವಿರುದ್ಧ ಗೆದ್ದವರೇ ಫೈನಲ್ – ಚಾಂಪಿಯನ್ಸ್ ಟ್ರೋಫಿಗೆ ಸಿದ್ಧವಾಯ್ತಾ ಪ್ಲೇಯಿಂಗ್ 11?

ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಇರೋದು ಇನ್ನೊಂದೇ ವಾರ. ಫೆಬ್ರವರಿ 19ರಿಂದ ಮಹಾಕದನ ಶುರುವಾಗಲಿದೆ. ಆದ್ರೆ ಅದಕ್ಕೂ ಮುನ್ನ ತವರಿನಲ್ಲಿ ನಡೆಯುತ್ತಿರೋ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿ ಮುಕ್ತಾಯದ ಹಂತಕ್ಕೆ ಬಂದಿದೆ. ಮೂರನೇ ಪಂದ್ಯ ಬುಧವಾರ ಅಹಮದಾಬಾದ್‌ನಲ್ಲಿ ನಡೆಯಲಿದ್ದು, ಈ ಪಂದ್ಯಕ್ಕಾಗಿ ನರೇಂದ್ರ ಮೋದಿ ಮೈದಾನ ಸಂಪೂರ್ಣ ಸಿದ್ಧವಾಗಿದೆ. ಈ ಪಂದ್ಯವನ್ನ ಗೆದ್ದು ಸರಣಿಯನ್ನ ಕ್ಲೀನ್ ಸ್ವೀಪ್ ಮಾಡಿಕೊಳ್ಳೋಕೆ ಭಾರತ ರೆಡಿಯಾಗಿದ್ರೆ ಕೊನೇ ಪಕ್ಷ ಒಂದು ಮ್ಯಾಚಾದ್ರೂ ಗೆದ್ದು ಇಂಗ್ಲೆಂಡ್ ಮರ್ಯಾದೆ ಉಳಿಸಿಕೊಳ್ಳೋಕೆ ನೋಡ್ತಿದೆ. ಬಿಸಿಸಿಐ ಕೂಡ ಈ ಪಂದ್ಯದ ಮೇಲೆ ಕಣ್ಣಿಟ್ಟಿದೆ. ಆಟಗಾರರ ಪ್ರದರ್ಶನದ ಮೇಲೆಯೇ ಚಾಂಪಿಯನ್ಸ್ ಟ್ರೋಫಿಯ ಪ್ಲೇಯಿಂಗ್ 11 ಸೆಟ್ ಮಾಡೋ ಮೆಗಾ ಪ್ಲ್ಯಾನ್ ನಲ್ಲಿದೆ.

ಇದನ್ನೂ ಓದಿ : ಭಾರತ ಸೋಲಿಸೋದೇ REAL ಟಾಸ್ಕ್ – ಪಾಕಿಸ್ತಾನ್ ತಂಡಕ್ಕೆ ಪ್ರಧಾನಿ ವಾರ್ನಿಂಗ್   

ಟೀಂ ಇಂಡಿಯಾ ಈ ಮೈದಾನದಲ್ಲಿ ಕೊನೇದಾಗಿ 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯವನ್ನ ಆಡಿತ್ತು. ಆದ್ರೆ ಈ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ಎದುರು ಸೋಲು ಕಂಡಿತ್ತು. ಇದೀಗ ಸುಮಾರು 14 ತಿಂಗಳ ಬಳಿಕ ಮತ್ತೆ ಈ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಪಂದ್ಯ ನಡೆಯಲಿದ್ದು ಕುತೂಹಲ ಮೂಡಿಸಿದೆ. ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಕಟಕ್​ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ. ಸೆಂಚುರಿ ಸಿಡಿಸಿ ಅಬ್ಬರಿಸಿದ್ದಾರೆ. ಸೋ ಈಗ ಎಲ್ಲರ ಕಣ್ಣು ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಮೇಲೆ ಬಿದ್ದಿದೆ. ಕೊಹ್ಲಿ ಕಮ್ ಬ್ಯಾಕ್​ಗಾಗಿ ಎದುರು ನೋಡ್ತಿದ್ದಾರೆ.

ಮೋದಿ ಸ್ಟೇಡಿಯಮ್​ನಲ್ಲಿ ನಡೆಯಲಿರೋ ಈ ಮ್ಯಾಚ್​ನಲ್ಲಿ ಶುಭ್​ಮನ್ ಗಿಲ್ ಉತ್ತಮ ಸ್ಕೋರ್ ಮಾಡೋ ನಿರೀಕ್ಷೆ ಇದೆ. ಯಾಕಂದ್ರೆ ಮೊದಲಿನಿಂದಲೂ ಗಿಲ್ ಅವ್ರನ್ನ ಅಹಮದಾಬಾದ್ ನ ಪ್ರಿನ್ಸ್ ಅಂತಾನೇ ಕರೆಯಲಾಗುತ್ತೆ. ಈ​ ಪಿಚ್​ನಲ್ಲಿ ಮಾತ್ರ ಅಬ್ಬರಿಸುತ್ತಾರೆಂಬ ಆರೋಪಗಳಿವೆ. ಅದಕ್ಕೆ ತಕ್ಕಂತೆ ಅಹದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗಿಲ್ ಅವರ ಬ್ಯಾಟಿಂಗ್ ಸರಾಸರಿ ಅದ್ಭುತವಾಗಿದೆ. 2021 ರಿಂದ 2024 ರವರೆಗೆ ಗಿಲ್ ಅಹಮದಾಬಾದ್​ನಲ್ಲಿ 19 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಕಲೆಹಾಕಿರುವುದು ಬರೋಬ್ಬರಿ 1079 ರನ್​ಗಳು. ಅಲ್ಲದೆ 4 ಶತಕಗಳನ್ನು ಸಹ ಬಾರಿಸಿದ್ದಾರೆ. ಇನ್ನು ಈ ಮೈದಾನದಲ್ಲಿ ರೋಹಿತ್‌ ಶರ್ಮಾ  ಆಗಲಿ, ವಿರಾಟ್ ಆಗಲಿ ಒಂದೇ ಒಂದು ಶತಕವನ್ನು ಬಾರಿಸಿಲ್ಲ. ಇನ್ನು ಶ್ರೇಯಸ್‌ ಅಯ್ಯರ್ ಹಾಗೂ ಕೆಎಲ್ ರಾಹುಲ್ ಸಹ ಈ ಅಂಗಳದಲ್ಲಿ ಉತ್ತಮವಾಗಿ ರನ್ ಕಲೆ ಹಾಕಿದ ದಾಖಲೆ ಹೊಂದಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಸರಣಿ ಆರಂಭ ಆದಾಗ್ಲೇ ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ಇಬ್ಬರಲ್ಲಿ ಯಾರನ್ನ ಪ್ಲೇಯಿಂಗ್ 11ನಲ್ಲಿ ಆಡಿಸೋದು ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿತ್ತು. ಆದ್ರೆ ಅಂತಿಮವಾಗಿ ರಾಹುಲ್ಲೇ ಆಡಿದ್ರು. ಆದ್ರೆ ಮೂರನೇ ಪಂದ್ಯದಲ್ಲಿ ಪಂತ್​ರನ್ನ ಕಣಕ್ಕಿಳಿಸೋ ಸಾಧ್ಯತೆ ಇದೆ. ಅದಕ್ಕೆ ಎರಡು ಕಾರಣಗಳಿವೆ. ಒಂದು ಕೆಎಲ್ ರಾಹುಲ್ ಮೊದಲ ಎರಡು ಪಂದ್ಯಗಳಲ್ಲಿ ಉತ್ತಮ ಸ್ಕೋರ್ ಮಾಡಿಲ್ಲ. ಫಸ್ಟ್ ಮ್ಯಾಚ್​ನಲ್ಲಿ 2 ರನ್, ಸೆಕೆಂಡ್ ಮ್ಯಾಚ್​ನಲ್ಲಿ 10 ರನ್ ಅಷ್ಟೇ ಗಳಿಸಿದ್ರು. ಇನ್ನು ಎರಡನೇ ಕಾರಣ ಪಂತ್ ಮೇಲೆ ಪ್ರಯೋಗ. ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದಲ್ಲಿ ಎಡಗೈ ಬ್ಯಾಟರ್​ನ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ರಿಷಭ್ ಪಂತ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಸಬಹುದು. ಚಾಂಪಿಯನ್ಸ್ ಟ್ರೋಫಿಗೆ ರಾಹುಲ್ ಮತ್ತು ಪಂತ್ ಅಂತಾ ಬಂದಾಗ ಯಾರನ್ನ ಫೈನಲ್ ಮಾಡೋದು ಅನ್ನೋ ಬಿಸಿಸಿಐ ಮ್ಯಾನೇಜ್​ಮೆಂಟ್ ಪ್ರಶ್ನೆಗೆ  ಉತ್ತರ ಸಿಗಲಿದೆ. ಕೆಎಲ್ ರಾಹುಲ್ ಭಾರತದ ಪರ ವಿಕೆಟ್ ಕೀಪರ್ ಆಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇತ್ತ ರಿಷಭ್ ಪಂತ್ ಕೂಡ ಇದ್ದಾರೆ. ಇಬ್ಬರೂ ತಂಡಕ್ಕೆ ಪಂದ್ಯಗಳನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಸರಣಿ ಬಿಸಿಸಿಐ ಮ್ಯಾನೇಜ್​ಮೆಂಟ್ ಪಾಲಿಗೆ ಡಿಸಿಷನ್ ಮೇಕಿಂಗ್ ಸರಣಿ ಆಗಿದೆ. ಯಾವ ಆಟಗಾರ ಫಿಟ್ ಆಗಿದ್ದಾರೆ, ಯಾರನ್ನ ಫೈನಲ್ ಮಾಡ್ಬೋದು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹೀಗಾಗಿ ಪ್ರತಿಯೊಬ್ಬ ಆಟಗಾರನ ಪ್ರದರ್ಶನವನ್ನ ಗಂಭೀರವಾಗಿ ಪರಿಗಣಿಸ್ತಾ ಇದೆ. ಸೋ ಎಲ್ಲವೂ ಅಂದುಕೊಂಡಂತೆ ಆದ್ರೆ ಚಾಂಪಿಯನ್ಸ್ ಟ್ರೋಫಿಗೆ ಪ್ಲೇಯಿಂಗ್ 11 ಹೇಗಿರಬಹುದು ಅನ್ನೋದನ್ನ ನೋಡೋದಾದ್ರೆ, ಕ್ಯಾಪ್ಟನ್  ರೋಹಿತ್ ಶರ್ಮಾ ಮತ್ತು ವೈಸ್ ಕ್ಯಾಪ್ಟನ್ ಶುಭಮನ್ ಗಿಲ್ ಇನ್ನಿಂಗ್ಸ್ ಆರಂಭಿಸ್ತಾರೆ. ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬರ್ತಾರೆ. ಇಂಗ್ಲೆಂಡ್ ವಿರುದ್ಧ 2 ಪಂದ್ಯಗಳಲ್ಲಿ ಚೆನ್ನಾಗಿ ಬ್ಯಾಟ್ ಬೀಸಿರೋ ಶ್ರೇಯಸ್ ಅಯ್ಯರ್ ನಾಲ್ಕನೇ ಕ್ರಮಾಂಕದಲ್ಲೇ ಕಂಟಿನ್ಯೂ ಆಗ್ತಾರೆ. ಹಾಗೇ 5ನೇ ಸ್ಲಾಟ್​ಗೆ ಎಕ್ಸ್​ಪೆರಿಮೆಂಟ್ ಪ್ಲೇಯರ್ ಅಂದ್ರೆ ಬೌಲಿಂಗ್ ಆಲ್​ರೌಂಡರ್ ಆಗಿರುವ ಅಕ್ಷರ್ ಪಟೇಲ್ ಬರಬಹುದು. ಪಟೇಲ್ ಕಳೆದ ಎರಡು ಪಂದ್ಯಗಳಲ್ಲಿ ಚೆನ್ನಾಗಿ ಆಡಿದ್ರು. ಹಾಗೇ ಆರನೇ ಕ್ರಮಾಂಕದಲ್ಲೇ ಕೆಎಲ್ ರಾಹುಲ್ ಕಣಕ್ಕಿಳಿಯೋ ಚಾನ್ಸಸ್ ಇದೆ. ಆ ನಂತ್ರ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಆಡಬಹುದು. ಬಟ್ ಇಲ್ಲಿ ಬುಮ್ರಾ ಆಡ್ತಾರಾ ಇಲ್ವಾ ಅನ್ನೋದು ಈವರೆಗೂ ಕನ್ಫರ್ಮ್ ಆಗಿಲ್ಲ. ಸೋ ಬುಮ್ರಾ ಕಂಪ್ಲೀಟ್ ಆಗಿ ಫಿಟ್ ಆಗದಿದ್ರೆ ಬೇರೆಯವ್ರಿಗೆ ಚಾನ್ಸ್ ಸಿಗುತ್ತೆ.

Shantha Kumari

Leave a Reply

Your email address will not be published. Required fields are marked *