ಚಾಂಪಿಯನ್ಸ್ ಟ್ರೋಫಿಗೆ ಪ್ಲೇಯಿಂಗ್ 11ನಿಂದ ಯಾರು ಔಟ್? – KL ಅವಕಾಶ ಕಿತ್ತುಕೊಳ್ತಾರಾ?

ಚಾಂಪಿಯನ್ಸ್ ಟ್ರೋಫಿಗೆ ಪ್ಲೇಯಿಂಗ್ 11ನಿಂದ ಯಾರು ಔಟ್? – KL ಅವಕಾಶ ಕಿತ್ತುಕೊಳ್ತಾರಾ?

ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಫೆಬ್ರವರಿ 19ರಿಂದ ಶುರುವಾಗಲಿದೆ. ಈಗಾಗ್ಲೇ ರೋಹಿತ್ ಶರ್ಮಾ ನಾಯಕತ್ವದ 15 ಸದಸ್ಯರ ಟೀಮ್ ಇಂಡಿಯಾವನ್ನೂ ಅನೌನ್ಸ್ ಮಾಡಿಯಾಗಿದೆ. ಬಟ್ ಈಗ ತಂಡದಲ್ಲಿ ಸ್ಥಾನ ಪಡ್ಕೊಂಡಿರೋ ಆಟಗಾರರ ಫಾರ್ಮ್ ಎಲ್ಲರ ನಿದ್ದೆಗೆಡಿಸಿದೆ. ಹೀಗಾಗಿ ಪ್ಲೇಯಿಂಗ್ 11 ಹೇಗಿರಬಹುದು ಅನ್ನೋ ಚರ್ಚೆಯೂ ನಡೀತಿದೆ. ಸೋ ಮಾಜಿ ಕ್ರಿಕೆಟಿಗರು ಹಾಗೇ ಒಂದಷ್ಟು ತಜ್ಞರು ಈ ಬಗ್ಗೆ ಪ್ರೆಡಿಕ್ಟ್ ಮಾಡಿದ್ದಾರೆ. ಅವ್ರ ಲೆಕ್ಕಾಚಾರದ ಪ್ರಕಾರ ಯಾರೆಲ್ಲಾ ಕಣಕ್ಕಿಳಿಯಬಹುದು.

ಫೆಬ್ರವರಿ 20 ರಂದು ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಓಪನರ್ ಆಗಿ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಕಣಕ್ಕಿಳಿಯೋ ಸಾಧ್ಯತೆ ಇದೆ. ಕ್ಯಾಪ್ಟನ್ ರೋಹಿತ್ ಶರ್ಮಾ ನಾರ್ಮಲಿ ಅವ್ರು ನಂಬರ್ 1 ಸ್ಲಾಟ್ ನಲ್ಲೇ ಆಡ್ತಾರೆ. ಅಲ್ಲೇ ಕಂಟಿನ್ಯೂ ಆಗ್ತಾರೆ. ಬಟ್ ಯಶಸ್ವಿ ಜೈಸ್ವಾಲ್ ಓಪನರ್ ಆಗಿದ್ರೂ ಕೂಡ ಈವರೆಗೂ ಒಂದೇ ಒಂದು ಏಕದಿನ ಪಂದ್ಯ ಆಡಿಲ್ಲ. ಚಾಂಪಿಯನ್ಸ್ ಟ್ರೋಫಿಯ ಮೊದಲ ಒಡಿಐ ಫಾರ್ಮೆಟ್ ಪಂದ್ಯ ಅವ್ರದ್ದು. ಸೋ ರೋಹಿತ್ ಜೊತೆ ಜೈಸ್ವಾಲ್ ಇನ್ನಿಂಗ್ಸ್ ಆರಂಭ ಮಾಡ್ತಾರೆ. ರೋಹಿತ್ ಶರ್ಮಾ ಈವರೆಗೂ 265 ಏಕದಿನ ಪಂದ್ಯಗಳನ್ನ ಆಡಿದ್ದು, 10,866 ರನ್ ಗಳಿಸಿದ್ದಾರೆ. ಆವರೇಜ್ 49 ಇದೆ.

ಇದನ್ನೂ ಓದಿ : ಗೆಳತಿ ಔಟ್‌.. ಮಂಜುಗೆ ಫುಲ್‌ ಎನರ್ಜಿ.. BBK ವಿನ್ನರ್‌ ಮಂಜು? – ಉಗ್ರಂ ಸೈಲೆಂಟ್‌ ಗೇಮ್

ತಂಡಕ್ಕೆ ಯಶಸ್ವಿ ಜೈಸ್ವಾಲ್ ಎಂಟ್ರಿ ಕೊಟ್ಟಿರೋದ್ರಿಂದ ಶುಭ್​ಮನ್ ಗಿಲ್ ಮೂರನೇ ಸ್ಲಾಟ್​ನಲ್ಲಿ ಕಾಣಿಸಿಕೊಳ್ತಾರೆ. ಗಿಲ್ ಕೂಡ ಓಪನರ್ ಬ್ಯಾಟರ್ ಆಗಿದ್ರೂ ಕೂಡ ಜೈಸ್ವಾಲ್ ಎಂಟ್ರಿಯಿಂದ ಅವ್ರ ಸ್ಲಾಟ್ ಡೌನ್ ಆಗಲಿದೆ. ವೈಸ್ ಕ್ಯಾಪ್ಟನ್ ಆಗಿರೋ ಗಿಲ್ ಇದುವೆರಗೂ 47 ಏಕದಿನ ಪಂದ್ಯವನ್ನ ಆಗಿದ್ದು, 2,328 ರನ್ ಕಲೆ ಹಾಕಿದ್ದಾರೆ. ಆವರೇಜ್ 58.

ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್‌ ಕೊಹ್ಲಿ ಅವ್ರು ನಾರ್ಮಲಿ ಮೂರನೇ ಕ್ರಮಾಂಕದಲ್ಲಿ ಬರ್ತಾರೆ. ಬಟ್ ಚಾಂಪಿಯನ್ಸ್ ಟ್ರೋಫಿಗೆ ನಾಲ್ಕನೇ ಸ್ಲಾಟ್​ನಲ್ಲಿ ಕಣಕ್ಕಿಳಿಸೋ ಸಾಧ್ಯತೆ ಇದೆ. ಇದುವರೆಗೂ 295 ಏಕದಿನ ಪಂದ್ಯಗಳನ್ನ ಆಡಿರೋ ವಿರಾಟ್ ಕೊಹ್ಲಿ 13,906 ರನ್ ಕಲೆ ಹಾಕಿದ್ದಾರೆ. ಆವರೇಜ್ 58 ಇದೆ. ಆಸಿಸ್ ಸರಣಿಯಲ್ಲಿ ಕಳಪೆ ಫಾರ್ಮ್​ನಲ್ಲಿದ್ದ ವಿರಾಟ್ ಈಗ ಗ್ರೇಟ್ ಕಮ್ ಬ್ಯಾಕ್ ಮಾಡೋ ನಿರೀಕ್ಷೆಯಲ್ಲಿದ್ದಾರೆ.

ಕೆಎಲ್ ರಾಹುಲ್ 5ನೇ ಕ್ರಮಾಂಕದಲ್ಲಿ ಫಿಕ್ಸ್‌ ಆಗ್ಬಹುದು. ಬಟ್ ಹೇಳೋಕೆ ಆಗಲ್ಲ. ಯಾಕಂದ್ರೆ ಇತ್ತೀಚೆಗೆ ಟೀಂ ಇಂಡಿಯಾ ಕೆಎಲ್ ರಾಹುಲ್​ರನ್ನ ಓಪನರ್ ಟು 8ನೇ ಸ್ಲಾಟ್​ವರೆಗೂ ಕಣಕ್ಕಿಳಿಸಿ ಎಕ್ಸ್​ಪೆರಿಮೆಂಟ್ ಮಾಡಿದೆ. ಬಟ್ ಚಾಂಪಿಯನ್ಸ್ ಟ್ರೋಫಿಗೆ 5ನೇ ಕ್ರಮಾಂಕದಲ್ಲೇ ಬ್ಯಾಟಿಂಗ್​ಗೆ ಬರಬಹುದು.  ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಆಗಿರುವ ಕೆಎಲ್ ಈವರೆಗೂ 77 ಒಡಿಐ ಮ್ಯಾಚಸ್ ಆಡಿರೋ ಕೆಎಲ್ ರಾಹುಲ್ 2851 ರನ್ ಬಾರಿಸಿದ್ದಾರೆ. ಆವರೇಜ್ 49 ಇದೆ.

ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ರಿಷಭ್ ಪಂತ್ ಕೆಎಲ್ ರಾಹುಲ್ ಬಳಿಕ ಕಣಕ್ಕಿಳಿಯೋ ನಿರೀಕ್ಷೆ ಇದೆ. ಮಿಡರ್ ಆರ್ಡರ್ ಬ್ಯಾಟಿಂಗ್ ನಲ್ಲಿ ಭಾರತಕ್ಕೆ ಶಕ್ತಿಯಾಗಿರುವ ಪಂತ್ ಪ್ಲೇಯಿಂಗ್ 11ನಲ್ಲಿ ಚಾನ್ಸ್ ಪಡೆಯೋದು ಪಕ್ಕಾ. ನಂಬರ್ 6 ಸ್ಲಾಟ್​ನಲ್ಲಿ ಕಣಕ್ಕಿಳಿಯಲಿರೋ ಪಂತ್ ಹೊಡಿಬಡಿ ಆಟದಿಂದಲೇ ಪಂದ್ಯದ ದಿಕ್ಕನ್ನೇ ಬದಲಿಸೋ ಕೆಪಾಸಿಟಿ ಹೊಂದಿದ್ದಾರೆ. ಆದ್ರೆ ಏಕದಿನ ಫಾರ್ಮೆಟ್​ನಲ್ಲಿ ಪಂತ್ ಈವರೆಗೂ 31 ಪಂದ್ಯಗಳನ್ನಷ್ಟೇ ಆಡಿದ್ದಾರೆ. ಇದ್ರಲ್ಲಿ 871 ರನ್ ಕಲೆ ಹಾಕಿದ್ದಾರೆ. ಆವರೇಜ್ 34 ಇದೆ.

ಇನ್ನು ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಅಚ್ಚರಿಯ ರೀರಿಯಲ್ಲಿ ಶ್ರೇಯಸ್ ಅಯ್ಯರ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈವರೆಗೂ 62 ಏಕದಿನ ಪಂದ್ಯಗಳನ್ನ ಆಡಿರೋ ಅಯ್ಯರ್, 2421 ರನ್ ಕಲೆ ಹಾಕಿದ್ದಾರೆ. 47 ಆವರೇಜ್ ಇದೆ. ಆದ್ರೆ ಪ್ಲೇಯಿಂಗ್ 11ನಲ್ಲಿ ಆಡೋದು ಡೌಟ್. ಇನ್ನು ಬೌಲಿಂಗ್ ಕೋಟಾದಲ್ಲಿ ಯಾರಿಗೆ ಚಾನ್ಸ್ ಸಿಗ್ಬೋದು ಅನ್ನೋದನ್ನ ನೋಡೋದಾದ್ರೆ, ದುಬೈನ ಪಿಚ್‌ಗಳು ನಿಧಾನಗತಿಯ ಬೌಲಿಂಗ್‌ಗೆ ಸಹಕಾರಿಯಾಗಿರೋದ್ರಿಂದ ಇದನ್ನು ಗಮನದಲ್ಲಿಟ್ಟುಕೊಂಡು ತಂಡದಲ್ಲಿ ಟೀಂ ಫೈನಲ್ ಮಾಡ್ತಾರೆ. ಎಕ್ಸ್​ಪೀರಿಯನ್ಸ್ ಪರಿಗಣಿಸಿದ್ರೆ ರವೀಂದ್ರ ಜಡೇಜಾಗೆ ಆಡುವ ಅವಕಾಶ ಸಿಗಬಹುದು.  ಅಕ್ಷರ್ ಪಟೇಲ್ ಮತ್ತು ಕುಲ್ದೀಪ್​ ಯಾದವ್​ಗೆ ಚಾನ್ಸ್ ಕೊಡಬಹುದು. ವಾಷಿಂಗ್ ಟನ್ ಸುಂದರ್ ಬೆಂಚ್ ಕಾಯಿಸಬಹುದು. ಹಾಗೇ ಕೇವಲ ಇಬ್ಬರು ವೇಗದ ಬೌಲರ್‌ಗಳಿಗೆ ಮಾತ್ರ ಅವಕಾಶವಿದ್ದು, ಇದಕ್ಕಾಗಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಅರ್ಷದೀಪ್ ಸಿಂಗ್ ನಡುವೆ ಪೈಪೋಟಿ ನಡೆಯಲಿದೆ. ಇದರಲ್ಲಿ ಬುಮ್ರಾ ಅವರ ಫಿಟ್‌ನೆಸ್ ಪ್ರಮುಖವಾಗಲಿದೆ. ಬುಮ್ರಾ ಫಿಟ್ ಆಗದಿದ್ದರೆ ಶಮಿ ಮತ್ತು ಅರ್ಷದೀಪ್ ಆಡುವುದು ಖಚಿತ. ಬುಮ್ರಾ ಫಿಟ್ ಆದರೆ, ಅರ್ಷದೀಪ್​ರನ್ನ ಕೈ ಬಿಡಬಹುದು. ಸೋ ಫೈನಲ್ಲಾಗಿ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಚಾನ್ಸ್ ಪಡೆಯಬಹುದು. ಹೀಗೆ ಟೀಂ ಇಂಡಿಯಾ ಪ್ಲೇಯಿಂಗ್ 11 ಬಗ್ಗೆ ಚಿಂತೆ ಮಾಡ್ತಿದ್ರೆ ಅತ್ತ ಪಾಕಿಸ್ತಾನ ಬೇರೆಯದ್ದೇ ಲೆಕ್ಕಾಚಾರದಲ್ಲಿದೆ.

Shantha Kumari