ಸುಳ್ಳು.. ದ್ವೇಷ.. BCCIಗೆ ಬಳೆ ತೊಡಿಸಿ – ನಾಲಗೆ ಹರಿ ಬಿಟ್ಟ ಪಾಕ್ ಕ್ರಿಕೆಟಿಗರು
ಟೀಂ ಇಂಡಿಯಾ ಕಂಡ್ರೆ ಯಾಕಿಷ್ಟು ಉರಿ?

ಸುಳ್ಳು.. ದ್ವೇಷ.. BCCIಗೆ ಬಳೆ ತೊಡಿಸಿ – ನಾಲಗೆ ಹರಿ ಬಿಟ್ಟ ಪಾಕ್ ಕ್ರಿಕೆಟಿಗರುಟೀಂ ಇಂಡಿಯಾ ಕಂಡ್ರೆ ಯಾಕಿಷ್ಟು ಉರಿ?

ಕೈಲಾಗದ ಶತ್ರುವಿನ ಕೊನೆಯ ಅಸ್ತ್ರವೇ ಅಪಪ್ರಚಾರ ಅಂತೆ. ಈ ಮಾತು ಈಗ ಪಾಕಿಸ್ತಾನದ ಕ್ರಿಕೆಟಿಗರಿಗೆ ಕರೆಕ್ಟಾಗೇ ಸೂಟ್ ಆಗ್ತಿದೆ. ಭಾರತದ ವಿರುದ್ಧ ಬಾಯ್ ಬಾಯ್ ಬಡ್ಕೊಳ್ಳೋಕೆ ಶುರು ಮಾಡಿದ್ದಾರೆ. ಮೊದ್ಲೇ ಆರ್ಥಿಕತೆ ನೆಟ್ಟಗಿಲ್ಲ. ಭದ್ರತೆ ವಿಚಾರ ಅಂತೂ ಕೇಳಂಗಿಲ್ಲ. ಅವ್ರ ದೇಶದ ಜನ್ರನ್ನೇ ಕಾಪಾಡೋಕೆ ಆಗ್ದೇ ಇರೋ ಸರ್ಕಾರ ಬೇರೆ ದೇಶದ ಕ್ರಿಕೆಟಿಗರಿಗೆ ಹೇಗೆ ತಾನೇ ಸೆಕ್ಯೂರಿಟಿ ಕೊಡುತ್ತೆ. ಚಾಂಪಿಯನ್ಸ್ ಟ್ರೋಫಿಗೆ ಭಾರತ ಪಾಕಿಸ್ತಾನಕ್ಕೆ ಕಾಲಿಡಲ್ಲ ಅಂತಾ ಕಡ್ಡಿ ತುಂಡು ಮಾಡಿದಂತೆ ಹೇಳಿದೆ. ಬಿಸಿಸಿಐನ ಇದೇ ದಿಟ್ಟ ನಿರ್ಧಾರ ಈಗ ಪಾಕ್ ಕ್ರಿಕೆಟರ್ಸ್ ಕಣ್ಣು ಕೆಂಪಾಗಿಸಿದೆ. ನಾಲಗೆ ಹರಿ ಬಿಡ್ತಿದ್ದಾರೆ. ಅಷ್ಟಕ್ಕೂ ಪಾಕಿಸ್ತಾನ ಆಟಗಾರರ ಸಿಟ್ಟಿಗೆ ಅಸಲಿ ಕಾರಣ ಏನು? ಚಾಂಪಿಯನ್ಸ್ ಟ್ರೋಫಿ ಟೂರ್ನಿ ಪಾಕ್ ಪಾಲಿಗೆ ಅಗ್ನಿಪರೀಕ್ಷೆಯಾಯ್ತಾ? ಟೂರ್ನಿ ಕೈ ತಪ್ಪಿದ್ರೆ ಎಷ್ಟು ಕೋಟಿ ನಷ್ಟವಾಗುತ್ತೆ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಭಾರತಕ್ಕೆ ಗೆಲುವಿನ ತಿಲಕವಿಟ್ಟ ವರ್ಮಾ – ಸಂಜು 0.. ಸೂರ್ಯ 1.. ಏನಾಯ್ತು?

2025ರಲ್ಲಿ ಚಾಂಪಿಯನ್ಸ್ ಟ್ರೋಫಿಗಾಗಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಭಾರತ, ಪಾಕಿಸ್ತಾನ್, ಸೌತ್ ಆಫ್ರಿಕಾ, ನ್ಯೂಝಿಲೆಂಡ್, ಅಫ್ಘಾನಿಸ್ತಾನ್, ಇಂಗ್ಲೆಂಡ್, ಬಾಂಗ್ಲಾದೇಶ್ ಮತ್ತು ಆಸ್ಟ್ರೇಲಿಯಾ ತಂಡಗಳು ಫೈಟ್ ನಡೆಸಲಿವೆ. ಟೂರ್ನಿ ಆಯೋಜನೆಯ ಹಕ್ಕು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಕೈಯಲ್ಲಿದೆ. ಮೂರು ಸ್ಟೇಡಿಯಮ್​ಗಳಲ್ಲಿ ಪಂದ್ಯಗಳನ್ನ ನಡೆಸೋಕೆ ಪಿಸಿಬಿ ಈಗಾಗ್ಲೇ ಶೆಡ್ಯೂಲ್ ಕೂಡ ರೆಡಿ ಮಾಡ್ಕೊಂಡು ಐಸಿಸಿ ಬಳಿ ಪರ್ಮಿಷನ್ ಪಡೆದಿದೆ. ಬಟ್ ಪಾಕಿಸ್ತಾನದಲ್ಲಿ ಮ್ಯಾಚ್ ನಡೀತಾ ಇರೋದ್ರಿಂದ ಭಾರತ ನಾವು ಪಂದ್ಯಕ್ಕಾಗಿ ಪಾಕಿಸ್ತಾನಕ್ಕೆ ಬರಲ್ಲ. ಹೈಬ್ರಿಡ್ ಮಾದರಿಯಲ್ಲಿ ಅಂದ್ರೆ ಬೇರೆ ದೇಶಗಳಲ್ಲಿ ನಮ್ಮ ಮ್ಯಾಚ್ ನಡೆಸಿ ಅಂತಾ ಡಿಮ್ಯಾಂಡ್ ಇಟ್ಟಿದೆ. ಬಟ್ ಇದಕ್ಕೆ ಪಾಕಿಸ್ತಾನ ಸುತಾರಾಂ ಒಪ್ಪೋಕೆ ರೆಡಿ ಇಲ್ಲ. ಬಿಸಿಸಿಐ, ಐಸಿಸಿ ಹಾಗೇ ಪಿಸಿಬಿ ನಡುವೆ ಹಗ್ಗಾಜಗ್ಗಾಟ ನಡೆಯುತ್ತಾ ಇರುವಾಗ್ಲೇ ಪಾಕ್ ಕ್ರಿಕೆಟರ್ಸ್ ನಾಲಗೆ ಹರಿ ಬಿಡ್ತಿದ್ದಾರೆ.

ಬಿಸಿಸಿಐ ಬಳೆಗಳನ್ನು ಧರಿಸುವುದು ಉತ್ತಮ ಎಂದ ತನ್ವೀರ್! 

ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸುತ್ತಿರುವ ಭಾರತ ಐಸಿಸಿ ಮುಂದೆ ಹೈಬ್ರಿಡ್ ಮಾದರಿ ಪಂದ್ಯಗಳನ್ನ ನಡೆಸುವಂತೆ ಬೇಡಿಕೆ ಮುಂದಿಟ್ಟಿದೆ. ಹೀಗಾಗಿ ಐಸಿಸಿ ಕೂಡ ಭಾರತದ ಪರ ಬ್ಯಾಟ್ ಬೀಸಿದೆ. ಒಂದು ವೇಳೆ ನೀವು ಭಾರತದ ಪಂದ್ಯಗಳನ್ನ ಸ್ಥಳಾಂತರ ಮಾಡ್ದೇ ಇದ್ರೆ ದಕ್ಷಿಣ ಆಫ್ರಿಕಾಗೆ ಟೂರ್ನಿ ಶಿಫ್ಟ್ ಮಾಡೋ ವಾರ್ನಿಂಗ್ ನೀಡಿದೆ. ಟೂರ್ನಿ ಆಯೋಜನೆ ರೈಟ್ಸ್ ಕಳೆದುಕೊಳ್ಳುವಂಥ ಭೀತಿಯಲ್ಲಿರೋ ಪಾಕಿಸ್ತಾನದ ಆಟಗಾರರು ಭಾರತವನ್ನ ಟಾರ್ಗೆಟ್ ಮಾಡ್ತಿದ್ದಾರೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ತನ್ವೀರ್ ಅಹ್ಮದ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಿಸಿಸಿಐ ಬಳೆಗಳನ್ನು ಧರಿಸುವುದು ಉತ್ತಮ ಅಂತಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರ್ಕೊಂಡಿದ್ದಾರೆ. ಅಲ್ದೇ ಭಾರತೀಯ ಕ್ರಿಕೆಟ್ ಮಂಡಳಿಗೆ ಸುಳ್ಳುಗಾರ, ಕೊಳಕು, ದುಷ್ಟ, ದ್ವಂದ್ವ ನೀತಿಯಂತಹ ಆಕ್ಷೇಪಾರ್ಹ ಪದಗಳನ್ನೂ ಬಳಸಿದ್ದಾರೆ. ಬಿಸಿಸಿಐ ನಂಬುವ ಬದಲು ಮೋಸ ಮಾಡದ ಕತ್ತೆಯನ್ನು ನಂಬುವುದು ಬೆಸ್ಟ್ ಎಂದಿದ್ದಾರೆ.

ಒಲಿಂಪಿಕ್ಸ್ ನಲ್ಲಿ ಒಟ್ಟುಗೂಡುವುದಾದರೆ ಕ್ರಿಕೆಟ್ ನಲ್ಲಿ ಯಾಕಿಲ್ಲ?

ಚಾಂಪಿಯನ್ಸ್ ಟ್ರೋಫಿ ವಿವಾದಕ್ಕೆ ಪಾಕಿಸ್ತಾನ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಕೂಡ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿರುವ ಶಾಹಿದ್ ಅಫ್ರಿದಿ, 1970 ರ ನಂತರ ಪಾಕಿಸ್ತಾನ್ ದೊಡ್ಡ ಸವಾಲನ್ನು ಎದುರಿಸುತ್ತಿದೆ. ಕ್ರೀಡೆಗಾಗಿ ನಾವು ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗುವ ಟೈಂ ಇದು. ಬೇರೆ ಬೇರೆಯಾಗಿರೋ ಎರಡು ರಾಷ್ಟ್ರಗಳು ಒಲಂಪಿಕ್​ಗಾಗಿ ಒಟ್ಟುಗೂಡಬಹುದು ಅನ್ನೋದಾದ್ರೆ, ನಾವು ಕ್ರಿಕೆಟ್‌ಗಾಗಿ ಮತ್ತು ಚಾಂಪಿಯನ್ಸ್ ಟ್ರೋಫಿಗಾಗಿ ಏಕೆ ಅದನ್ನು ಮಾಡಬಾರದು? ಅಂತಾ ಪ್ರಶ್ನಿಸಿದ್ದಾರೆ. ಹಾಗೇ ಕ್ರಿಕೆಟ್​ನ ಮೇಲ್ವಿಚಾರಕರಾಗಿ, ಅಹಂಕಾರಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಅಲ್ಲದೆ ಕ್ರಿಕೆಟ್ ಬೆಳವಣಿಗೆ ಮೇಲೆ ಗಮನ ಕೇಂದ್ರೀಕರಿಸುವುದು ನಿಮ್ಮ ಜವಾಬ್ದಾರಿಯಾಗಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಪ್ರತಿಯೊಂದು ತಂಡವನ್ನು ನಮ್ಮ ರಾಷ್ಟ್ರದಲ್ಲಿ ನೋಡಲು ಬಯಸುತ್ತೇವೆ. ನಮ್ಮ ಆತಿಥ್ಯದ ಮೂಲಕ ನಿಮಗೆ ಮರೆಯಲಾಗ ನೆನಪುಗಳನ್ನು ನೀಡುತ್ತೇವೆ ನಾನು ಭಾವಿಸುತ್ತೇನೆ ಎಂದಿದ್ದಾರೆ. ಅಷ್ಟೇ ಅಲ್ದೇ ಕ್ರಿಕೆಟ್ ಮೇಲ್ವಿಚಾರಕರು ಎಂದು ಪರೋಕ್ಷವಾಗಿ ಬಿಸಿಸಿಐ ಹಾಗೂ ಜಯ್ ಶಾ ಅವರನ್ನು ಪ್ರಸ್ತಾಪಿಸಿದ್ದಾರೆ. ಅಂದರೆ ಇಡೀ ವಿಶ್ವ ಕ್ರಿಕೆಟ್​ ಅನ್ನು ಶ್ರೀಮಂತ ಸಂಸ್ಥೆ ಬಿಸಿಸಿಐ ನಿಯಂತ್ರಣ ಮಾಡ್ತಿದೆ. ಹೀಗಾಗಿ  ಅಹಂಕಾರಗಳನ್ನು ಕಂಟ್ರೋಲ್ ಮಾಡ್ಕೊಂಡು  ಕ್ರಿಕೆಟ್ ಬೆಳವಣಿಗೆ ಮೇಲೆ ಗಮನ ಕೇಂದ್ರೀಕರಿಸಬೇಕೆಂದು ಅಫ್ರಿದಿ ಟಾಂಗ್ ಕೊಟ್ಟಿದ್ದಾರೆ.

ಐಸಿಸಿ ಅಂಗಳದಲ್ಲಿ ಪಾಕಿಸ್ತಾನ್ ಚಾಂಪಿಯನ್ಸ್ ಟ್ರೋಫಿ ಚೆಂಡು!

ಒಂದ್ಕಡೆ ಭಾರತ ಪಾಕಿಸ್ತಾನಕ್ಕೆ ಕಾಲಿಡಲ್ಲ ಅಂತಿದೆ. ಇತ್ತ ಹೈಬ್ರಿಡ್ ಮಾದರಿ ಆಡಿಸದಿದ್ರೆ ಟೂರ್ನಿ ಶಿಫ್ಟ್ ಮಾಡ್ತೀವಿ ಅಂತಾ ಐಸಿಸಿ ಎಚ್ಚರಿಕೆ ಕೊಟ್ಟಿದೆ. ಇದೆಲ್ಲದ್ರ ನಡುವೆ ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ ಆತಿಥ್ಯವನ್ನ ಕಸಿದುಕೊಂಡ್ರೆ ಟೂರ್ನಿಯಿಂದಲೇ ಹಿಂದೆ ಸರಿಯುತ್ತೇವೆ. ಯಾವುದೇ ಪಂದ್ಯಾವಳಿಯಲ್ಲೂ ಇನ್ಮುಂದೆ ಭಾರತದ ಜೊತೆ ಆಡುವುದಿಲ್ಲ ಅಂತಾ ಬ್ಲ್ಯಾಕ್​ಮೇಲ್ ಶುರು ಮಾಡಿದೆ. ಈ ಬಗ್ಗೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಐಸಿಸಿಗೆ ಇಮೇಲ್ ಕಳುಹಿಸಲಾಗಿದ್ದು, ಅದರಲ್ಲಿ ಟೀಮ್ ಇಂಡಿಯಾವನ್ನು ಕಳುಹಿಸದಿರಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಸ್ಪಷ್ಟ ಕಾರಣಗಳನ್ನು ನೀಡುವಂತೆ ಒತ್ತಾಯಿಸಿದೆ. ಹೀಗಾಗಿ ಐಸಿಸಿ ಎಲ್ಲಾ ತಂಡಗಳೊಂದಿಗೆ ನಿರಂತರವಾಗಿ ಮಾತುಕತೆ ನಡೆಸುತ್ತಿದ್ದು, ಪಂದ್ಯಾವಳಿಯ ವೇಳಾಪಟ್ಟಿಯ ಬಗ್ಗೆ ಚರ್ಚೆ ನಡೆಸುತ್ತಿದೆ. ಅಂತಿಮವಾಗಿ ಯಾವ ನಿರ್ಧಾರ ಕೈಗೊಳ್ಬೇಕು ಅನ್ನೋ ಚೆಂಡು ಬಿಸಿಸಿಐ ಅಂಗಳದಲ್ಲಿದೆ.

28 ವರ್ಷಗಳ ಬಳಿಕ ಐಸಿಸಿ ಟೂರ್ನಿ ಆಯೋಜನೆಗೆ ಸಿದ್ಧವಾಗಿರೋ ಪಾಕ್!

ಅಸಲಿಗೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ 28 ವರ್ಷಗಳ ಬಳಿಕ ಐಸಿಸಿ ಟೂರ್ನಿಗೆ ಆತಿಥ್ಯವಹಿಸಲು ಸಜ್ಜಾಗಿದೆ. 1996 ರಲ್ಲಿ ಏಕದಿನ ವಿಶ್ವಕಪ್​ಗೆ ಆತಿಥ್ಯವಹಿಸಿದ್ದ ಪಾಕ್​ನಲ್ಲಿ ಆ ಬಳಿಕ ಯಾವುದೇ ಐಸಿಸಿ ಟೂರ್ನಿ ನಡೆದಿರಲಿಲ್ಲ. ಇದೀಗ 28 ವರ್ಷಗಳ ಬಳಿಕ ಸಿಕ್ಕ ಅವಕಾಶ ಕೂಡ ಕೈ ತಪ್ಪುವ ಭೀತಿ ಎದುರಾಗಿದೆ. ಏಕೆಂದರೆ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆದರೆ ಭಾರತ ತಂಡ ಪಾಲ್ಗೊಳ್ಳುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಒಂದು ವೇಳೆ ಟೀಮ್ ಇಂಡಿಯಾ ಟೂರ್ನಿಯಲ್ಲಿ ಭಾಗವಹಿಸಬೇಕಿದ್ದರೆ, ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಬೇಕಾಗುತ್ತದೆ. ಅದರಂತೆ ಚಾಂಪಿಯನ್ಸ್ ಟ್ರೋಫಿ ಪಾಕ್​ನಲ್ಲಿ ನಡೆದರೂ, ಭಾರತದ ಪಂದ್ಯಗಳಿಗೆ ಶ್ರೀಲಂಕಾ ಅಥವಾ ಯುಎಇ ಆತಿಥ್ಯವಹಿಸಲಿದೆ. ಆದರೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಸಿದ್ಧರಿಲ್ಲ. ಹೀಗಾಗಿಯೇ ಇದೀಗ ಇಡೀ ಟೂರ್ನಿಯನ್ನು ಸೌತ್ ಆಫ್ರಿಕಾಗೆ ಶಿಫ್ಟ್ ಮಾಡುವ ಬಗ್ಗೆ ಐಸಿಸಿ ಚಿಂತಿಸಿದೆ. ಐಸಿಸಿ ಪ್ಲ್ಯಾನ್ ಬಿ ಯೋಜನೆ ಸಿದ್ಧ ಪಡಿಸ್ತಿದ್ದಂತೆ ಪಾಕ್ ಕ್ರಿಕೆಟಿಗರ ಬುಡಕ್ಕೆ ಬೆಂಕಿ ಬಿದ್ದಂತಾಗಿದೆ. ಹೀಗಾಗಿ ಬಾಯಿಗೆ ಬಂದಂತೆ ಮಾತಾಡೋಕೆ ಶುರು ಮಾಡಿದ್ದಾರೆ.

ಇಲ್ಲದ ದುಡ್ಡಲ್ಲಿ ಕ್ರೀಡಾಂಗಣಗಳನ್ನ ರಿನೊವೇಶನ್ ಮಾಡಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಕಾಯ್ತಿರೋ ಪಾಕಿಸ್ತಾನ ಈಗ ಅಡಕತ್ತರಿಗೆ ಸಿಲುಕಿದೆ. ಭಾರತವನ್ನ ಎದುರು ಹಾಕಿಕೊಂಡು ಟೂರ್ನಿ ಆಯೋಜಿಸೋದು ಕನಸಿನ ಮಾತು. ಹೀಗಾಗಿ ನಾಲಗೆ ಹರಿಬಿಡ್ತಿರೋ ಆಟಗಾರರು ಮುಂದೇನ್ ಮಾಡ್ಬೇಕು ಅನ್ನೋದನ್ನ ಯೋಚನೆ ಮಾಡಿದ್ರೆ ಒಳ್ಳೇದು.

Shwetha M