ಚಾಂಪಿಯನ್ಸ್ ಟ್ರೋಫಿ ಹಗ್ಗಾಜಗ್ಗಾಟ – ಭಾರತದ ಈ ನಿರ್ಧಾರ ಪಾಕಿಸ್ತಾನಕ್ಕೆ ದೊಡ್ಡ ಎಫೆಕ್ಟ್!
ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ ಹೈಬ್ರಿಡ್ ಮಾದರಿಯಲ್ಲಿ ನಡೆಸಬೇಕು ಅಂತಾ ಐಸಿಸಿ ಆರ್ಡರ್ ಮಾಡಿಯಾಗಿದೆ. ಭಾರತಕ್ಕೆ ಆತಿಥ್ಯ ವಹಿಸುವ ಅವಕಾಶವನ್ನ ಪಾಕಿಸ್ತಾನ ಕಳೆದುಕೊಂಡಿದೆ. ಇದೀಗ ಇದೇ ಡವಲಪ್ಮೆಂಟ್ಸ್ಗಳಿಂದ ಪಾಕಿಸ್ತಾನಕ್ಕೆ ಬರಲು ನೆರೆಯ ದೇಶಗಳೂ ಹಿಂಜರಿಯುತ್ತಿರೋ ಮಾತುಗಳು ಕೇಳಿ ಬರ್ತಿವೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ಹೊರತಾಗಿ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ಸೇರಿಕೊಳ್ಳಲಿದೆ. ಚಾಂಪಿಯನ್ಸ್ ಟ್ರೋಫಿ 2025 ಫೆಬ್ರವರಿ 19 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯವು ಮಾರ್ಚ್ 9 ರಂದು ನಡೆಯಲಿದೆ. ಭಾರತ ತಂಡವು ಫೆಬ್ರವರಿ 20 ರಿಂದ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಆರಂಭಿಸಲಿದೆ. ಗ್ರೂಪ್-ಎ ನಲ್ಲಿ ಕಾಣಿಸಿಕೊಂಡಿರುವ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡವನ್ನು ಎದುರಿಸಲಿದ್ದು, ಎರಡನೇ ಮ್ಯಾಚ್ನಲ್ಲಿ ಫೆಬ್ರವರಿ 23ರಂದು ನ್ಯೂಝಿಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ. ಹಾಗೆಯೇ ಮೂರನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ತಂಡದ ವಿರುದ್ಧ ಮಾರ್ಚ್ 1ರಂದು ಸೆಣಸಲಿದೆ.
ಇದನ್ನೂ ಓದಿ: ರಜತ್ ಬಾಯಿಗೆ ಕಡಿವಾಣ ಇಲ್ವಾ?.. ಚೈತ್ರಗೆ ಈ ಟಾಸ್ಕ್ ಕೊಟ್ರಾ? – ರಜತ್ ದೌಲತ್ತು.. ಬಿಗ್ ಬಾಸ್ ಸೈಲೆಂಟ್!
ಇನ್ಮುಂದೆ ಭಾರತಕ್ಕೂ ಕಾಲಿಡಲ್ಲವಂತೆ ಪಾಕಿಸ್ತಾನ ತಂಡ!
ಹೈಬ್ರಿಡ್ ಮಾದರಿಗೆ ಒಪ್ಪಿಕೊಂಡಿದ್ದ ಪಾಕಿಸ್ತಾನ ಕೂಡ ಐಸಿಸಿ ಮುಂದೆ ಕಂಡೀಷನ್ಸ್ ಹಾಕಿದೆ. ನಾವೂ ಕೂಡ ಭಾರತದಲ್ಲಿ ಆಯೋಜನೆಗೊಳ್ಳುವ ಐಸಿಸಿ ಟೂರ್ನಿಗಳಲ್ಲಿ ಭಾಗಿಯಾಗಲ್ಲ. ನಮಗೂ ತಟಸ್ಥ ಸ್ಥಳದಲ್ಲಿ ಟೂರ್ನಿಗಳನ್ನ ಆಡಿಸಿ ಎಂದು ಷರಷನ್ನು ಇಟ್ಟಿದೆ. ಅದ್ರಂತೆ 2025ರ ಮಹಿಳಾ ಏಕದಿನ ವಿಶ್ವಕಪ್ ಭಾರತದಲ್ಲಿ, 2026ರಲ್ಲಿ ಟಿ-20 ವಿಶ್ವಕಪ್ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ಅಲ್ದೇ ಪಾಕಿಸ್ತಾನದಲ್ಲಿ ಮಹಿಳಾ ವಿಶ್ವಕಪ್ 2028ರ ಪಂದ್ಯಗಳನ್ನು ಆಡಲಾಗುವುದು ಎಂದು ICC ಮಂಡಳಿಯು ಕನ್ಫರ್ಮ್ ಮಾಡಿದೆ. ಈ ಟೂರ್ನಿಯಲ್ಲೂ ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳ ಪಂದ್ಯಗಳು ತಟಸ್ಥ ಸ್ಥಳಗಳಲ್ಲಿ ನಡೆಯಲಿವೆ. 2008ರಿಂದ ಭಾರತ ತಂಡ ಪಾಕಿಸ್ತಾನಕ್ಕೆ ಹೋಗಿಲ್ಲ. ಈ ಸಂದರ್ಭಗಳಲ್ಲಿ ಪಾಕಿಸ್ತಾನ ತಂಡವು ವಿವಿಧ ಐಸಿಸಿ ಟೂರ್ನಿಗಳಿಗೆ ಭಾಗವಹಿಸಲು ಭಾರತಕ್ಕೆ ಬಂದಿದೆ. ಬಟ್ ಇನ್ಮುಂದೆ ಪಾಕ್ ಕೂಡ ಇತರೆ ರಾಷ್ಟ್ರಗಳಲ್ಲೇ ಭಾರತದ ವಿರುದ್ಧದ ಪಂದ್ಯಗಳನ್ನ ಆಡಲಿದೆ.
ಸದ್ಯ ಐಸಿಸಿ ನಿರ್ಧಾರಗಳು, ಪಾಕ್ ಕ್ರಿಕೆಟಿಗರ ಸಜೇಷನ್ಸ್ ನಡುವೆ ಚಾಂಪಿಯನ್ಸ್ ಟ್ರೋಫಿ ಫೀವರ್ ಹೆಚ್ಚಾಗ್ತಿದೆ. ಕಳೆದ ಬಾರಿ ಓವಲ್‌ನಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ 2017ರ ಫೈನಲ್‌ನಲ್ಲಿ ಭಾರತ ತಂಡವನ್ನು 180 ರನ್‌ಗಳಿಂದ ಪಾಕಿಸ್ತಾನ ಸೋಲಿಸಿ ಪ್ರಶಸ್ತಿ ಎತ್ತಿ ಹಿಡಿದಿತ್ತು. ಹೀಗಾಗಿ ಪಾಕಿಸ್ತಾನ ಈ ಟೂರ್ನಿಯ ಹಾಲಿ ಚಾಂಪಿಯನ್. ಬಟ್ ಈ ವರ್ಷದ ಆರಂಭದಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ 2024ರ ಟಿ20 ವಿಶ್ವಕಪ್‌ನಲ್ಲಿ ಉಭಯ ತಂಡಗಳು ಕೊನೆಯದಾಗಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 6 ರನ್‌ಗಳಿಂದ ಗೆದ್ದಿತ್ತು. ಇದೀಗ ಚಾಂಪಿಯನ್ಸ್ ಟ್ರೋಫಿ ಮೂಲಕ ಎರಡೂ ತಂಡಗಳು ಮತ್ತೊಮ್ಮೆ ಮೈದಾನಕ್ಕಿಳಿಯಲಿವೆ.